ಅಮೃತೂರು ಆಸ್ಪತ್ರೆಯಲ್ಲಿ ಉತ್ತಮ ಆರೋಗ್ಯ ಸೇವೆ

ಕುಣಿಗಲ್:

     ತಾಲ್ಲೂಕಿನ ಅಮೃತೂರಿನಲ್ಲಿ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಳೆದ ಬಾರಿ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ರಾಜಕಾರಣಿಗಳು ಭೇಟಿ ನೀಡಿ ಕುಡಿಯುವ ನೀರು ಮತ್ತು ಸಿಬ್ಬಂದಿಗಳ ಕೊರತೆಯ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದರು. ಆದರೆ, ಕೆಲ ತಿಂಗಳಲ್ಲೇ ಈ ಆಸ್ಪತ್ರೆಗೆ ಆಗಮಿಸಿ ಆಡಳಿತ ವೈದ್ಯಾಧಿಕಾರಿಯಾಗಿ ಡಾ.ಕೆ.ಜಗದೀಶ್ ಆಡಳಿತವಹಿಸಿಕೊಂಡು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಸಲಹೆ ಸೂಚನೆ ಮೇರೆಗೆ ಸಮರ್ಪಕವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳಾದ, ಕಾಯಕಲ್ಪಯೋಜನೆ, ಎನ್.ಕ್ಯೂ.ಎ.ಎಸ್.ಯೋಜೆ ಮತ್ತು ಸ್ವಚ್ಛ, ಸ್ವಾಸ್ಥ, ಸರ್ವತಾ ಯೋಜನೆಗಳ ಅಡಿ ಬಂದ ಅನುದಾನಗಳನ್ನು ಸಮರ್ಪಕವಾಗಿ ಬಳಸಿಕೊಂಡು ಉತ್ತಮ ರೀತಿಯಲ್ಲಿ ಆಸ್ಪತ್ರೆಯ ದುರಸ್ಥಿ ಕಾರ್ಯಗಳಾದ, ಶುದ್ದಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಆಸ್ಪತ್ರೆಯ ಕಟ್ಟಡವನ್ನು ಸುಸಜ್ಜಿತಗೊಳಿಸಿದ್ದಾರೆ.

    ಸುಣ್ಣ ಬಣ್ಣ, 65 ವಿಂಡೋಮೆಶ್, ಕೊಠಡಿಗಳ ಹಾಗೂ ವಾರ್ಡ್‍ಗಳ ಅಲುಮಿನಿಯಂ ಪಾರ್ಟೇಷನ್ಸ್ ಮತ್ತು ಗ್ರ್ಯಾಪ್ ಭಾರ್ಸ್ ಒಳಗೊಂಡ ಹಿರಿಯ ನಾಗರಿಕರಿಗೆ ವ್ಯವಸ್ಥಿತ ಶೌಚಾಲಯಗಳು, ಆಧುನಿಕ ಕ್ಯುಬಿಕಲ್ ಮೆಡಿಟ್ರ್ಯಾಕ್ಸ್ ಸ್ಕ್ರೀನ್ ಹಾಗೂ ಆಕಸ್ಮಿಕ ದುರಂತಗಳನ್ನು ತಪ್ಪಿಸಲು ಬೆಂಕಿ ನಂದಿಸುವ ಯಂತ್ರಗಳ ಅಳವಡಿಕೆ, ಮಾರ್ಗದಶನದ ಫಲಕಗಳು, ಹೊರನೆಲ ಹಾಸಿಗೆ ಕಾಬ್ಲರ್ ಸ್ಟೋನ್ಸ್ ಅಳವಡಿಕೆ ಮತ್ತು ಆಸ್ಪತ್ರೆಯ ಮುಂಭಾಗ ಮಿನಿ ಉದ್ಯಾನವನ ನಿರ್ಮಾಣ ಮಾಡಲು ಕಾರಣರಾಗಿದ್ದಾರೆ. ಸಿಬ್ಬಂದಿಗಳ ನೇಮಕಗೊಳಿಸುವ ಮೂಲಕ ಉತ್ತಮ ಸೇವೆಗೆ ಆದ್ಯತೆ ನೀಡಿದ ಬೆನ್ನಲ್ಲೇ ಕೊರೋನಾ ಪರೀಕ್ಷಾ ಕೇಂದ್ರವನ್ನಾಗಿ ಮಾಡಿ ಅಲ್ಲಿಯೇ ಆರ್.ಟಿ.ಪಿ.ಸಿ.ಆರ್. ಹಾಗೂ ರಾಟ್ಯ್ ಪರೀಕ್ಷೆಗಳನ್ನು ಮಾಡುವ ಮೂಲಕ ನಾಗರಿಕರಿಗೆ ಕೊರೋನಾ ಭಯ ನಿವಾರಿಸಲು ಸಂಪೂರ್ಣ ಕ್ರಮ ಕೈಗೊಳ್ಳಲಾಗಿದೆ.

    ಆಸ್ಪತ್ರೆಯ ದುರಸ್ಥಿಕಾರ್ಯಗಳು ಸೇರಿದಂತೆ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲು ಸಕಲ ಸುವ್ಯವಸ್ಥಿತ ಕಾರ್ಯನಿರ್ವಾಹಣೆಯೊಂದಿಗೆ ಸಮರ್ಪಕ ಕಟ್ಟಡವನ್ನಾಗಿ ಮಾರ್ಪಡಿಸಿ, ನಿತ್ಯ ಸ್ಯಾನಿಟೈಜರ್ ಸಿಂಪಡಿಸುವ ಮೂಲಕ ಬರುವ ಹೊರ ಮತ್ತು ಒಳ ರೋಗಿಗಳಿಗೆ ಕೊರೋನಾ ಬಗ್ಗೆ ಅರಿವು ಮತ್ತು ಜಾಗೃತಿಯನ್ನು ಪೋಸ್ಟರ್ಸ್ಸ್ ಮೂಲಕ ಇಲ್ಲಿನ ಆಡಳಿತ ವೈದ್ಯಾಧಿಕಾರಿ ಮತ್ತು ಸಿಬ್ಬಂದಿಗಳು ವ್ಯವಸ್ಥಿತವಾಗಿ ಕರ್ತವ್ಯ ನಿರ್ವಹಿಸುವುದರ ಜೊತೆಗೆ ಸ್ಥಳೀಯ ಸರ್ಕಾರಿ ಶಾಲೆಯ ಮಕ್ಕಳು ಮತ್ತು ಸಿಬ್ಬಂದಿಗಳ ಸಹಕಾರ ಪಡೆದು ಆಸ್ಪತ್ರೆಯ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ.

   ಚಳಿಗಾಲದಲ್ಲಿ ಕೊರೋನ ಹೆಚ್ಚುವ ಸಾಧ್ಯತೆ ಇರುವುದರಿಂದ ಮಕ್ಕಳು ಹಿರಿಯರು ಸೇರಿದಂತೆ ಎಲ್ಲರೂ ತಪ್ಪದೇ ಮಾಸ್ಕ್ ಹಾಕುವುದು, ಅಂತರ ಕಾಪಾಡಿಕೊಳ್ಳುವುದು ಹಾಗೂ ಆಗಾಗ್ಗೆ ಸ್ವಚ್ಛತೆ ಕಾಪಾಡಿಕೊಳ್ಳಬೇಕೆಂದು ತಿಳಿಸಿ ಜನರಲ್ಲಿ ಜಾಗೃತಿಮೂಡಿಸಲಾಗುತ್ತಿದೆ ಎಂದು ಡಾ.ಕೆ.ಜಗದೀಶ್ ತಿಳಿಸಿದ್ದಾರೆ.

   ಈ ಆಸ್ಪತ್ರೆಯ ಸುತ್ತಲು ಇರುವ ಕಾಂಪೌಡ್ ವ್ಯವಸ್ಥೆ ಅಲ್ಲಲ್ಲಿ ಶಿಥಿಲಗೊಂಡಿದ್ದು ಇದನ್ನು ಸರಿಪಡಿಸುವುದರ ಜೊತೆಗೆ ಉಳಿದ ಹಳೆಕಟ್ಟಡವನ್ನು ದುರಸ್ತಿಗೊಳಿಸಬೇಕಾಗಿದೆ.ಉತ್ತಮ ಸೌಕರ್ಯಗಳಿಂದ ಕೂಡಿರುವ ಆಸ್ಪತ್ರೆಯ ಸೇವೆ ಜನರಲ್ಲಿ ವಿಶ್ವಾಸ ಮೂಡಿಸಿದೆ. ಭಯಹುಟ್ಟಿಸಿರುವ ಕೊರೋನಾ ರೋಗಕ್ಕೆ ಹೆದರುವ ಅವಶ್ಯಕತೆ ಇಲ್ಲ, ಮುನ್ನೆಚ್ಚರಿಕೆ ಕ್ರಮಗಳನ್ನು ತಪ್ಪದೆ ಪಾಲಿಸಿ ಎಂಬ ಹಲವು ರೀತಿಯ ಕೊರೋನಾ ಜಾಗೃತಿಯ ಫಲಕಗಳ ಅಳವಡಿಕೆಯೊಂದಿಗೆ ಇಲ್ಲಿನ ವೈದ್ಯರು ಹಾಗೂ ಸಿಬ್ಬಂದಿ ಅರಿವು ಮೂಡಿಸುತ್ತಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap