ಅಧಿಕಾರದಲ್ಲಿದ್ದಾಗಲೇ ನಾನು ಸಾಯುತ್ತೇನೆ, ಅಸಹಜ ಸಾವು ನನ್ನದಾಗುತ್ತದೆ ಎಂದು ಭವಿಷ್ಯ ನುಡಿದಿದ್ದ ಅನಂತ್ ಕುಮಾರ್

ಶಿಗ್ಗಾವಿ :
        ಕೇಂದ್ರ ಸಚಿವ ಅನಂತ ಕುಮಾರ ಅವರು ನಿಧನರಾದ ಹಿನ್ನೆಲೆಯಲ್ಲಿ ಮಾಜಿ ಸಚಿವ ಹಾಗೂ ಹಾಲಿ ಶಿಗ್ಗಾವಿ -ಸವಣೂರ ಕ್ಷೇತ್ರದ ಶಾಸಕ ಬಸವರಾಜ ಬೊಮ್ಮಾಯಿಯವರು ಅನಂತ ಕುಮಾರ ಅವರ ಜೊತೆಯ ನೆನಪುಗಳನ್ನು ಮೆಲುಕು ಹಾಕುವ ಮೂಲಕ ತೀರ್ವ ಸಂತಾಪ ಸೂಚಿಸಿದ್ದಾರೆ.
          ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನಂತ ಕುಮಾರ ಅವರು ಜಯಪ್ರಕಾಶ ನಾರಾಯಣರ ಹಾಗೂ ರಾಮ್ ಮನೋಹರ ಲೂಹಿಯಾ ಅವರ ಕಟ್ಟಾ ಅನುಯಾಯಿಯಾಗಿದ್ದರು, ಅವರು ಎಷ್ಟರ ಮಟ್ಟಿಗೆ ಜಯಪ್ರಕಾಶ ನಾರಾಯಣರ ಅನುಯಾಯಿಯಾಗಿದ್ದರು ಎಂದರೆ ಇತ್ತೀಚೆಗೆ ಕ್ಯಾನ್ಸ್‍ರ್ ಪೀಡಿತರಾಗಿ ಇಂಗ್ಲೇಂಡಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿಯೇ ಜಯಪ್ರಕಾಶ ನಾರಾಯಣರ ಜನ್ಮ ದಿನಾಚರಣೆ ಆಚರಿಸಿದರು, ಅನಂತಕುಮಾರ ಅವರು ತುರ್ತು ಪರಿಸ್ಥಿತಿಯಲ್ಲಿ ಜೈಲು ಸೇರಿದ್ದು ಅವರ ಹೋರಾಟದ ದಿಕ್ಕನ್ನೇ ಬದಲಿಸಿತ್ತು, ಸೈನ್ಸ್‍ನಿಂದ ಆಟ್ರ್ಸಗೆ ಸೇರಿಕೊಂಡು ನಂತರ ಲಾ ಓದಿ ರಾಜಕೀಯದಲ್ಲಿ ಸಕ್ರೀಯವಾಗಿ ತೊಡಗಿಕೊಂಡಿದ್ದರು ಎಂದ ಅವರು ದೇಶದಲ್ಲಿ ಕಾಂಗ್ರೇಸ್ ವಿರೋದಿ ರಾಜಕಾರಣದಲ್ಲಿ ನಾವೆಲ್ಲರೂ ಹೋರಾಟ ಮಾಡುತ್ತಲೇ ರಾಜಕೀಯದಲ್ಲಿ ಬೆಳೆದು ಬಂದವರು ಎಂದು ಮೆಲುಕು ಹಾಕಿದರು.
 
         ಅನಂತ ಕುಮಾರ ಕೇಂದ್ರ ಸಚಿವರಾದ ಮೇಲೆ ಸ್ವತಂತ್ರ್ಯ ಭಾರತದ ಇತಿಹಾಸದಲ್ಲಿಯೇ ಕರ್ನಾಟಕಕ್ಕೆ ಅವರು ಮಾಡಿದಂತಹ ಸೇವೆ ಬೇರೆ ಯಾವ ಕೇಂದ್ರ ಸಚಿವರು ಮಾಡಿಲ್ಲ, ಕೃಷ್ಣಾ ನದಿಗೆ ಕಟ್ಟಿರುವ ಆಲಮಟ್ಟಿ ಆಣೆಕಟ್ಟೆಯ ಎತ್ತರವನ್ನು 524 ಮೀಟರ್‍ಗೆ ಏರಿಸಬೇಕೆಂಬ ಬೇಡಿಕೆ ಬಂದಾಗ ಪಟ್ಟು ಹಿಡಿದು ಮಾಡಿಸಿದವರು ಅನಂತಕುಮಾರವರು ಅಲ್ಲದೆ ಕಾವೇರಿ ಹೋರಾಟದಲ್ಲಿ ಸುಪ್ರಿಂ ಕೋರ್ಟನಲ್ಲಿ ರಾಜ್ಯದ ಮೇಲೆ ತೂಗು ಕತ್ತಿ ಇದ್ದಾಗ ಪ್ರಧಾನಿ ನೇತೃತ್ವದಲ್ಲಿ ಕಾವೇರಿ ನದಿ ನೀರು ಪ್ರಾಧಿಕಾರ ರಚನೆ ಮಾಡಿ ಕರ್ನಾಟಕವನ್ನು ಸಂಕಷ್ಟದಿಂದ ಪಾರು ಮಾಡಿದ್ದರು, ತೆಲಂಗಾಣ ರಾಜ್ಯ ಸರಕಾರ ಕೃಷ್ಣ ನ್ಯಾಯಾಧಿಕರಣ ಪುನರ್ ಸ್ಥಾಪನೆ ಮಾಡುವಂತೆ ಪಟ್ಟು ಹಿಡಿದಾಗ ಕೇಂದ್ರದಲ್ಲಿ ತಮ್ಮ ಪ್ರಭಾವ ಬೀರಿ ಸುಪ್ರೀಂ ಕೋರ್ಟನಲ್ಲಿ ರಾಜ್ಯದ ಪರವಾಗಿ ಪ್ರಮಾಣ ಪತ್ರ ಹಾಕುವಲ್ಲಿ ಪ್ರಯತ್ನಿಸಿದರು
     
            ಅವರು ಸೂಕ್ಷ್ಮ ಮತಿಯಾಗಿದ್ದರು, ಅವರ ನೋವು ಹಾಸ್ಯ ಪ್ರವೃತ್ತಿಯಲ್ಲಿ ಮುಚ್ಚಿಹೋಗುತ್ತಿತ್ತು ದೇಹಲಿಯಲ್ಲಿ ನಾನು ಅವರ ಜೊತೆ ಇದ್ದಾಗ ಅಧಿಕಾರದಲ್ಲಿದ್ದಾಗಲೇ ನಾನು ಸಾಯುತ್ತೇನೆ ಅಸಹಜ ಸಾವು ನನ್ನದಾಗುತ್ತದೆ ಎಂದು ತಮ್ಮ ಸಾವಿನ ಭವಿಷ್ಯವನ್ನು ತಾವೇ ಹೇಳಿದ್ದರು ಅವರ ಮಾತು ನಿಜವಾಗ್ಬಾರದು ಎಂದು ಭಾವಿಸಿದ್ದೆವು ಎಂದು ಭಾವುಕರಾದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link