ಕವಿತಾ ಆರೋಪಕ್ಕೆ ಅ್ಯಂಡಿಯಿಂದ ದೊಡ್ಡ ಟ್ವಿಸ್ಟ್…!!!

ಬೆಂಗಳೂರು :

        ಕಿರುತೆರೆಯ ಪ್ರಸಿದ್ಧ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ – 6ನಲ್ಲಿ ಸೃಷ್ಠಿಯಾದ ವಿವಾದಗಳು ಯಾಕೋ ಕೊನೆಗಾಣುವ ಸೂಚನೆ ಸಿಗುತ್ತಿಲ್ಲ.

       ಬಿಗ್‌ಬಾಸ್ ಮನೆಯಿಂದ ಹೊರ ಬಂದ ನಂತರ ಆ್ಯಂಡಿ,ಕವಿತಾ ಕಿತ್ತಾಟ ಮುಂದುವರಿಯುತ್ತಲೇ ಇದೆ.ಕವಿತಾ ಮಹಿಳಾ ಆಯೋಗದ ಮುಂದೆ ಆ್ಯಂಡಿ ವಿರುದ್ಧ ಕಿರುಕುಳದ ಆರೋಪ ಹೊರಿಸಿ, ದೂರು ದಾಖಲಿಸಿದರೆ, ಇತ್ತ ಆ್ಯಂಡಿ ಕವಿತಾ ವಿರುದ್ಧ ಜನಾಂಗೀಯ ನಿಂದನೆಯ ಆರೋಪ ಹೊರಿಸಿದ್ದಾರೆ.

       ಬಿಗ್ ಬಾಸ್ ಮನೆಯಲ್ಲಿ ಸದಾ ತಮಾಷೆ ಮಾಡಿಕೊಂಡು, ಎಲ್ಲರ ಕಾಲೆಳೆಯುತ್ತ ಕಾಲಕಳೆಯುತ್ತಿದ್ದ ಆ್ಯಂಡಿ ಕೆಲವರಿಗೆ ಸ್ನೇಹಿತನಾದರೆ, ಮತ್ತೂ ಕೆಲವರಿಗೆ ಕಿರಿಕಿಯನ್ನು ಉಂಟು ಮಾಡುತ್ತಿದ್ದ. ಹೊರ ಬಂದ ಮೇಲೂ ಆ್ಯಂಡಿ ಆಡಿದ ಮಾತುಗಳು ನೋವುಂಟು ಮಾಡಿವೆ ಎಂದು ಕವಿತಾ ಆರೋಪಿಸಿದ್ದಾರೆ. ಕವಿತಾ ಆರೋಪಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಆ್ಯಂಡಿ ಪ್ರತ್ಯಾರೋಪದ ಪ್ರಹಾರ ಮಾಡಿದ್ದಾರೆ.

       ನಾನು “ಮಜಾ ಟಾಕಿಸ್‌ನಲ್ಲಿ ಕವಿತಾಳಿಗೆ ಅವಮಾನಿಸುವಂತೆ ಮಾತನಾಡಿಲ್ಲ. ಅಲ್ಲದೆ ತಾನು ಕ್ರಿಶ್ವಿಯನ್ ಆದ ಕಾರಣ ಕವಿತಾಳಿಗೆ ನನ್ನ ಕಂಡರೆ ಆಗುತ್ತಿರಲಿಲ್ಲ. ಅದಕ್ಕೆ ಈ ರೀತಿ ಆರೋಪಿಸುತ್ತಿದ್ದಾರೆ,’ ಎಂದು ಆ್ಯಂಡಿ ಹೇಳುತ್ತಿದ್ದಾರೆ.

       ಖಾಸಗಿ ವಾಹಿನಿಯಲ್ಲಿ ಇವೆಲ್ಲಾ ನಿಜಾನಾ ಎಂದು ಆ್ಯಂಡೂ ಅವರನ್ನು ಪ್ರಶ್ನಿಸಿದಾಗ ‘ಜನರು ನನ್ನ ತಪ್ಪುಗಳನ್ನು ಕ್ಷಮಿಸಿ, ಪ್ರೀತಿ ತೋರಿಸಿ ವಾರ ವಾರವೂ ಸೇವ್ ಮಾಡುತ್ತಿದ್ದರು. ಆದರೆ, ಒಮ್ಮೆ ಸ್ವಿಮ್ಮಿಂಗ್ ಪೂಲ್‌ನಲ್ಲಿ ಮೈಕ್ ಇಲ್ಲದಿದ್ದಾಗಲೂ ನನ್ನ ಧರ್ಮದ ಬಗ್ಗೆ ಕವಿತಾ ಕೆಟ್ಟದಾಗಿ ಮಾತನಾಡಿದ್ದರು. ಇದು ನನ್ನ ಮನಸ್ಸಿಗೆ ನೋವಾಗಿದ್ದರೂ, ನಾನೆಲ್ಲೂ ಹೇಳಿಕೊಂಡಿಲ್ಲ,’ ಎಂದು ಆ್ಯಂಡಿ ಕವಿತಾ ಆರೋಪಕ್ಕೆ ಟ್ವಿಸ್ಟ್ ನೀಡಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link