ಜ್ಞಾನದೀಕ್ಷಾ ಸೆಂಟ್ರಲ್ ಸ್ಕೂಲ್ ವಾರ್ಷಿಕೋತ್ಸವ

ದಾವಣಗೆರೆ:

         ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದ ಜ್ಞಾನದೀಕ್ಷಾ ಸೆಂಟ್ರಲ್ ಸ್ಕೂಲ್‍ನ 13ನೇ ವರ್ಷದ ವಾರ್ಷಿಕೋತ್ಸ ಕಾರ್ಯಕ್ರಮ ಶನಿವಾರ ಶಾಲಾ ಆವರಣದಲ್ಲಿ ನಡೆಯಿತು.

          ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗ್ರಾಮ ಪಂಚಾಯತ್ ಸದಸ್ಯ ಕುರಿಯರ್ ಮಂಜಪ್ಪ, ಗ್ರಾಮೀಣ ಪ್ರದೇಶದ ಮಕ್ಕಳನ್ನು ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸಲು, ಲಕ್ಷಾಂತ ರೂ. ಶುಲ್ಕ ಪಾವತಿಸಿ, ನಗರ ಮತ್ತು ಪಟ್ಟಣ ಪ್ರದೇಶಗಳಿಗೆ ಕಳುಹಿಸಬೇಕಿತ್ತು. ಆದರೆ, ಗ್ರಾಮೀಣ ಮಕ್ಕಳಿಗೆ ಇಂಗ್ಲಿಷ್ ಮೀಡಿಯ್‍ಂನಲ್ಲಿ ಶಿಕ್ಷಣ ನೀಡಬೇಕೆಂಬ ಕಾರಣಕ್ಕೆ ಈ ಶಾಲೆಯವರು ಅತ್ಯಂತ ಕನಿಷ್ಠ ಶುಲ್ಕದಲ್ಲಿ ಉತ್ತಮ ಶಿಕ್ಷಣ ನೀಡುತ್ತಿದ್ದು, ಗ್ರಾಮೀಣ ಪೋಷಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕಿವಿಮಾತು ಹೇಳಿದರು.

           ಪ್ರಾಸ್ತಾವಿಕ ಮಾತನಾಡಿದ ಕನಕ ಗ್ರೂಪ್ ಆಫ್ ಇನ್ಸ್‍ಟಿಟ್ಯೂಷನ್‍ನ ಕಾರ್ಯದರ್ಶಿ ಅಣಬೇರು ಶಿವಮೂರ್ತಿ, ಪ್ರಸ್ತುತ ಇಂಗ್ಲೀಷ್ ಮಾಧ್ಯಮದ ಶಿಕ್ಷಣದ ಅವಶ್ಯಕತೆ ಕಂಡು, ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದಿರುವ ನಾನು, ಗ್ರಾಮೀಣ ಪ್ರದೇಶಗಳಲ್ಲಿ ನಾಲ್ಕು ಶಾಲೆಗಳನ್ನು ಆರಂಭಿಸುವ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಮಾಧ್ಯಮದಲ್ಲಿ ಶಿಕ್ಷಣ ನೀಡುತಿದ್ದು, ಪೋಷಕರ ಸಹಕಾರ ಅತ್ಯವಶ್ಯವಾಗಿದೆ ಎಂದರು.

         ಕಾರ್ಯಕ್ರಮದಲ್ಲಿ ತಾ.ಪಂ. ಸದಸ್ಯೆ, ಸಂಸ್ಥೆಯ ಆಡಳಿತಾಧಿಕಾರಿ ಮಂಜುಳಾ ಅಣಬೇರು ಶಿವಮೂರ್ತಿ, ಗ್ರಾ.ಪಂ. ಸದಸ್ಯರಾದ ದೇವಮ್ಮ ನಟರಾಜ್, ಸಲಗನಹಳ್ಳಿ ಶಿವಕುಮಾರ್, ಬೇವಿನಹಳ್ಳಿ ನಾಗರಾಜ್, ಕಡೆಗೊಂದಿ ಹೆಚ್.ಆರ್.ಶಿವಕುಮಾರ್, ಶಿವನಹಳ್ಳಿ ಎಂ.ಸಿ. ಮಹೇಶ್ವರಪ್ಪ, ರೇವಣಸಿದ್ಧಪ್ಪ, ಬೀರಪ್ಪ, ಕೆ.ಡಿ.ರಾಮಣ್ಣ, ಈಶ್ವರಪ್ಪ ಮತ್ತು ಶಾಲೆಯ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ವೇದಿಕೆ ಕಾರ್ಯಕ್ರಮದ ನಂತರ ಶಾಲಾ ಮಕ್ಕಳಿಂದ ಸಾಂಸ್ಕತಿಕ ಕಾರ್ಯಕ್ರಮಗಳು ನಡೆದವು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link