ತಿಪಟೂರು :
ಪರಿಶಿಷ್ಠ ಜಾತಿಯವರು ಮುಖ್ಯಮಂತ್ರಿಯಾಗುತ್ತಾರೆಂಬ ಒಂದೇ ಒಚಿದು ಕಾರಣದಿಂದ 80 ಶಾಸಕರಿದ್ದು, 32 ಶಾಸಕರಿದ್ದ ಜೆ.ಡಿ.ಎಸ್‍ಗೆ ಯಾವುದೇ ಷರತ್ತುಗಳಿಲ್ಲದೇ 5 ವರ್ಷ ನೀವೇ ಮುಖ್ಯಂಂತ್ರಿಗಳಾಗಿ ಎಂದು ಅಧಿಕಾರಕೊಟ್ಟ ಕಾಂಗ್ರೇಸ್ ಮತ್ತು ಜೆ.ಡಿ.ಎಸ್ ನಿಂದ ಎಂದು ದಲಿತರ ಉದ್ದಾರವಾಗುವುದಿಲ್ಲವೆಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಕೆ.ಶಿವರಾಂ ಎಚ್ಚರಿಸಿದರು.
ತಾಲ್ಲೂಕಿನ ಕೆ.ಬಿ.ಕ್ರಾಸ್‍ನ ರಂಭಾಪುರಿ ಸಮುದಾಯ ಭವನದಲ್ಲಿ ತಿಪಟೂರು, ಚಿಕ್ಕನಾಯಕನಹಳ್ಳಿ, ತುರುವೆಕೆರೆ ತಾಲ್ಲೂಕುಗಳು ಎಸ್ಸಿ ಮೋರ್ಚಾ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ರಾಷ್ಟ್ರದಲ್ಲಿ 60 ವರ್ಷ ಆಳಿದ ಕಾಂಗ್ರೇಸ್ನಿಂದ ದಲಿತರಗೆ ಅಧಿಕಾರ ಏನುಸಿಕ್ಕಿದೆ ಅವರ ಹಿತಕ್ಕಾಗಿ ಬಿ.ಜೆ.ಪಿಯ ಮೇಲೆ ಇಲ್ಲಸಲ್ಲದ ಆರೋಪಗಳನ್ನುಮಾಡಿ ನಮಗೆ ಮಂಕುಬೂದಿ ಎರಚುತ್ತಿದ್ದಾದ್ದು ದಲಿತರು ದಲಿತರಾಗಿ ಇದ್ದು ಅವರಿಗೇ ಓಟುಹಾಕಲು ನಮ್ಮ ಓಟ್ ಬ್ಯಾಂಕ್ ಆಗಿಮಾಡಿಕೊಳ್ಳ್ಳುತ್ತಿದ್ದಾರೆಂದು ದಲಿರರಾದ ನಾವು ಈಗಲಾದರು ಎಚ್ಚೆತ್ತುಕೋಳದಿದ್ದರೇ
ನಾವು ದಲಿತರಾಗಿಯೇ ಇರುತ್ತೆವೆ ಈಗಲಾದರು ಎಚ್ಚೆತ್ತುಕೊಳ್ಳಿದ್ದರ ನಮ್ಮ ಅಸ್ತೀತ್ವೇ ಇಲ್ಲದಂತೆ ಮಾಡುತ್ತಾರೆಂದು ದಲಿತರಿಗೆ ಕರೆಕೊಟ್ಟ ಅವರು ಪ್ರಾರಂಭದಿಂದಲೂ ಮಾಜಿ ಪ್ರಧಾನಿ ದೇವೇಗೌಡರಿಗೆ ದಲಿತರನ್ನು ಕಂಡರೆ ಆಗುವುದಿಲ್ಲ. ಸುಪ್ರಿಂ ಕೋರ್ಟ್ ಬಡ್ತಿ ಮೀಸಲಾತಿಯ ಬಗ್ಗೆ ನೀಡಿದ್ದ ತೀರ್ಪುನ್ನು ಪುನರ್ ವಿಮರ್ಶಿಸುವಂತೆ ರಾಜ್ಯಸರ್ಕಾರದಿಂದ ಕೇಂದ್ರಕ್ಕೆ ಮನವಿ ಮಾಡಿ ರಾಷ್ಟ್ರಪತಿಗಳ ಗಮನಕ್ಕೆ ತಂದು ಮೀಸಲಾತಿಯನ್ನು ನೀಡುವಂತೆ ಅಂಕಿತದ ಆದೇಶವನ್ನು ಪಡೆದುಕೊಂಡಿದೆ.
ಆದರೆ ರಾಜ್ಯದಲ್ಲಿ ಇದನ್ನು ಜಾರಿಗೆ ತರದೇ ದಲಿತ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದಾರೆ. ಇದರಿಂದಾಗಿ 20 ಸಾವಿರ ನೌಕರರಿಗೆ ಅನ್ಯಾಯವಾಗಿದ್ದು, 8 ಜನ ನೌಕರರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಷ್ಟು ದಿನ ಹಾಸನದಲ್ಲಿ ಶೋಷಣೆ ಮಾಡುತ್ತಾ ಬಂದು ಇದೀಗ ತುಮಕೂರಿಗೆ ಬಂದು ಸ್ಫರ್ಧಿಸಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ 80 ಸ್ಥಾನ ಪಡೆದ ಕಾಂಗ್ರೆಸ್‍ನ ಯಾರೊಬ್ಬರಾದರೂ ದಲಿತ ಮುಖಂಡರನ್ನು ಮುಖ್ಯಮಂತ್ರಿ ಮಾಡಬಹುದಿತ್ತು ಆದರೆ ಖುದ್ಧು ಕಾಂಗ್ರೆಸಿಗರು ಮತ್ತು ಜೆಡಿಎಸದ್ ಸೇರಿ ಸರ್ಕಾರ ರಚಿಸಿ ದಲಿತರ ಅಧಿಕಾರವನ್ನು ಕಿತ್ತುಕೊಂಡಿದ್ದಾರೆ.
ಜಿಲ್ಲೆಯಲ್ಲಿ 1 ಲಕ್ಷಕ್ಕೂ ಅಧಿಕ ಮತಗಳಿದ್ದು ನಿರ್ಣಾಯಕ ಮತಗಳೇ ಆಗಿದ್ದು ದೇಶದ ಸದೃಢತೆ, ಅಭಿವೃದ್ಧಿಗಾಗಿ ಪ್ರಧಾನಿ ನರೇಂದ್ರ ಮೋದಿಯವರ ಪ್ರತಿನಿಧಿ ಜಿ.ಎಸ್.ಬಸವರಾಜುಗೆ ಮತ ನೀಡಬೇಕೆಂದರು. ದಲಿತರ ಆಶಾಕಿರಣ, ಸಂವಿಧಾನ ರಚನಕಾರ ಡಾ.ಬಾಬಾ ಸಾಹೇಬ ಅಂಬೇಡ್ಕರ್‍ಗೆ ಗೌರವ ನೀಡಿದ ಏಕೈಕ ಪ್ರಧಾನಿ ನರೇಂದ್ರ ಮೋದಿ ಆಗಿದ್ದು, ದೇಶ ಉನ್ನತ ಸ್ಥಾನವಾದ ರಾಷ್ಟ್ರಪತಿ ಸ್ಥಾನಕ್ಕೆ ಕೋವಿಂದರನ್ನು ಆಯ್ಕೆ ಮಾಡಿದ್ದು ಹೆಮ್ಮೆಯ ಸಂಗತಿ.
ವಿರೋಧಿ ದೇಶವಾದ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಕಾಶ್ಮೀರದ ಸಮಸ್ಯೆ ಬಗೆಹರಿಯಲು ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ಹೇಳಿದ್ದಾರೆ. ಆದರೆ ಕೆಲ ವಿರೋಧಿಗಳು ಇಲ್ಲದ ಟೀಕೆಗಳನ್ನು ಮಾಡುತ್ತಾರೆ. ಆದಕ್ಕೆ ಕಿವಿಗೊಡದೇ ಮೋದಿಯವರನ್ನು ಪ್ರಧಾನಿಯನ್ನಾಗಿಸುವ ಸಲುವಾಗಿ ಭಾಜಪಗೆ ಮತ ನೀಡಬೇಕೆಂದರು.
ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ತಕ್ಷಣೇ ದಲಿತರ ದೇವರಾದ ಬಿ.ಆರ್ ಅಂಬೇಡ್ಕರ್‍ರವರ ಪಂಚತೀರ್ಥಗಳನ್ನು ಅಭಿವೃದ್ದಿಪಡಿಸಿದ್ದು ಅದರ ಋುಣಕ್ಕಾಗಿಯಾದರು ಮೋದಿ ಸರ್ಕಾರಕ್ಕೆ ಓಟು ನೀಡಬೇಕು, ಆದರೆ 55 ವರ್ಷ ಆಡಳಿತದಲ್ಲಿ ದಲಿತರ ಉದ್ದಾರವೆಂದು ಹೇಳುತ್ತಿರುವ ಕಾಂಗ್ರೇಸ್‍ಗೆ ಇದು ಕಾಣಿಸಲಿಲ್ಲವೇ ಎಂದು ಯು.ಪಿ.ಎ ಸರ್ಕಾರವನ್ನು ಟೀಕಿಸಿದರು. ಕೆ.ಶಿವರಾಮ್
ಶಾಸಕ ಬಿ.ಸಿ.ನಾಗೇಶ್ ಮಾತನಾಡಿ ದೇಶದ ಹಿತದೃಷ್ಟಿಯಿಂದ ಈ ಬಾರಿಯ ಚುನಾವಣೆ ಅತ್ಯಂತ ಪ್ರಮುಖವಾದ್ದು.
5 ವರ್ಷಗಳಲ್ಲಿ ನರೇಂದ್ರ ಮೋದಿಯವರ ನೇತೃತ್ವದ ಭಾಜಪ ಸರ್ಕಾರ ಯಾವುದೇ ಭ್ರಷ್ಟಾಚಾರ ಇಲ್ಲದ ರೀತಿಯಲ್ಲಿ ಅಧಿಕಾರ ನಡೆಸಿದೆ. ಆ ಸಂದರ್ಭದಲ್ಲಿ ದೇಶಭಕ್ತಿಯ ಬಗ್ಗೆ ಪ್ರತಿಯೊಬ್ಬರಿಗೂ ಜಾಗೃತಿ ಮುಡಿಸುವ ಕೆಲಸವಾಗಿರುವುದರಿಂದ ಇಂದು ಪ್ರತಿಯೊಬ್ಬರೂ ದೇಶದ ಅಭಿವೃದ್ಧಿಗೆ ಶ್ರಮಿಸಲು ಮುಂದಾಗಿದ್ದಾರೆ. ಕಳೆದ 55 ವರ್ಷಗಳಿಂದಲೂ ಒಂದೇ ಕುಟುಂಬದವರು ಅಧಿಕಾರ ನಡೆಸುತ್ತಾ ಬಂದಿದ್ದು ಬಡತನ ನಿರ್ಮೂಲನೆಯೆ ಇವರ ಮುಖ್ಯ ಉದ್ದೇಶವಾಗಿದೆ.
ಬಡತನ ನಿರ್ಮೂಲನೆಗೆ 55 ವರ್ಷ ಬೇಕಾ? ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಕಾಂಗ್ರೆಸ್ ತಮ್ಮ ಚುನಾವಣಾ ಪ್ರನಾಳಿಕೆಯಲ್ಲಿ ಪ್ರತಿಕೊಟಂಬಕ್ಕೂ 72 ಸಾವಿರ ನೀಡುವುದಾಗಿ ಘೋಷಿಸಿದ್ದು, ರಾಜ್ಯ ಸರ್ಕಾರದಿಂದ ಬರುವ ಹಣವೇ ಸಮರ್ಪಕವಾಗಿ ಯೋಜನೆಗಳ ಮೂಲಕ ರೈತರಿಗೆ ತಲುಪಿಸುವಲ್ಲಿ ವಿಫಲವಾಗಿದ್ದು ಇಷ್ಟು ಹಣ ಎಲ್ಲಿ ನೀಡಲು ಸಾಧ್ಯ. ಅದ್ದರಿಂದ ನರೇಂದ್ರ ಮೋದಿವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಸಿದ್ಧರಾಗಬೇಕಿದೆ ಎಂದರು.
ಎಸ್ಸಿ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಗಂಗರಾಜು ಮಾತನಾಡಿ ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಅಧಿಕಾರ ಆಸೆಗಾಗಿಯೇ ಘಟಬಂಧನ, ಮೈತ್ರಿಯಂತಹ ಕಾರ್ಯಕ್ಕೆ ಮುಂದಾಗಿ ಹಣ ಲೂಟಿ ಹೊಡೆಯುತ್ತಿದ್ದಾರೆ. ಹೆಚ್.ಡಿ.ದೇವೇಗೌಡರು ತುಮಕೂರು ಜಿಲ್ಲೆಗೆ ಯಾವ ರೀತಿಯ ಒತ್ತು ನೀಡಿ ಅಭಿವೃದ್ಧಿ ಮಾಡಿದ್ದಾರೆ. ಜನ್ಮ ಭೂಮಿಯನ್ನು ಬಿಟ್ಟು ಬಂದು ತುಮಕುರಿಗೂ ಬಂದು ಸ್ಫರ್ಧಿಸಲು ಮುಂದಾಗಿದ್ದಾರೆ. ಈಲ್ಲೆಗೆ ಏನನ್ನೂ ಕೂಡದ ದೇವೇಗೌಡರನ್ನು ಹೇಗೆ ಗೆಲ್ಲಿಲು ಸಾಧ್ಯ. ದಲಿತ ವಿರೋಧಿಗಳಾದ ಕುಟುಂಬ ರಾಜಕಾರಣದ ಬಗ್ಗೆ ಎಲ್ಲರಲ್ಲಿಯೂ ವಿರೋಧವಿದ್ದು ಜನ ತಕ್ಕ ಪಾಠ ಕಲಿಸುತ್ತಾರೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಜಿ.ಪಂ ಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ, ಸೋಮಶೇಖರ್, ಸಿಂಗದಹಳ್ಳಿ ರಾಜಕುಮಾರ್, ತಾ.ಪಂ.ಸದಸ್ಯ ಪುಟ್ಟಸ್ವಾಮಿ , ಗ್ರಾ.ಪಂ.ಅಧ್ಯಕ್ಷ ರಂಗಸ್ವಾಮಿ ಸೇರಿದಂತೆ ಮತ್ತಿತರರಿದ್ದರು.