ತಿಪಟೂರು
ನಗರದಲ್ಲಿ ಮಂಗಳವಾರ ಸಂಜೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಸುದ್ದಿಯಂತೆ ತರಕಾರಿ ಮಾರುಕಟ್ಟೆಯನ್ನು ಕಲ್ಪತರು ಕ್ರೀಡಾಂಗಣಕ್ಕೆ ಬದಲಾಯಿಸಲಾಗಿದೆ ಎಂದು ತಿಳಿದ ಜನರು ಇಂದು ಬೆಳಗ್ಗೆ ಕ್ರೀಡಾಂಗಣಕ್ಕೆ ಬಂದು ಶಪಿಸಿ ಹಿಂತಿರುಗಿದ ಘಟನೆ ನಡೆಯಿತು.
ಇನ್ನೂ ಎಂದಿನಂತೆ ಎ.ಪಿ.ಎಂ.ಸಿ ಮಾರಕಟ್ಟೆಗೆ ಬೆಳೆಗ್ಗೆಯೇ ಆಗಮಿಸಿ ಶಾಸಕರು, ತಹಸೀಲ್ದಾರ್, ಡಿ.ವೈ.ಎಸ್ಪಿ, ನಗರ ಮತ್ತು ಗ್ರಾಮಾಂತರ ಸಬ್ ಇನ್ಸ್‍ಪೆಕ್ಟರ್‍ಗಳು, ನಗರಸಭಾ ಸದಸ್ಯರುಗಳು ಮುಂತಾದವರು ಸೇರಿ ಮಾರುಕಟ್ಟೆಯಲ್ಲಿ ಎಲ್ಲೆಂದರಲ್ಲಿ ಅಂಗಡಿಗಳನ್ನು ಜೋಡಿಸಿಕೊಂಡು ಅಕ್ರಮವಾಗಿ ಅಕ್ಕಪಕ್ಕದ ಸ್ಥಳಗಳಲಿ ತಮ್ಮ ಸರಕನ್ನು ಜೋಡಿದ್ದವರನ್ನು ಮತ್ತು ಚಪ್ಪರ ಮಾಡಿಕೊಂಡವರನ್ನು ತೆರವುಗೊಳಿಸಿ ಸೂಕ್ತ ವ್ಯವಸ್ಥೆಮಾಡಿ ವ್ಯಾಪಾರಿಗಳನ್ನು ಕಟ್ಟೆಯಮೇಲೆ ಕುಳ್ಳರಿಸಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ತರಕಾರಿ ಕೊಳ್ಳುವಂತೆ ಸಾರ್ವಜನಿಕರಿಗೆ ಅನುವುಮಾಡಿಕೊಟ್ಟು ವ್ಯಾಪಾರಿಗಳಿಗೆ ಗ್ರಾಹಕರನ್ನು ನಿಗದಿತ ಸ್ಥಳದಲ್ಲಿ ನಿಲ್ಲುವಂತೆ ಆರಕ್ಷಕರು ಜೊತೆ ಎಲ್ಲಾ ಅಧಿಕಾರಿಗಳು ಪ್ರಯತ್ನಿಸುತ್ತಿದ್ದರು.
10 ಗಂಟೆಯ ನಂತರ ಮಾರುಕಟ್ಟೆಯಲ್ಲಿ ಅಕ್ರವಾಗಿ ದಾಸ್ತಾನು ಮಾಡಿದ್ದವರನ್ನು ತೆರವುಗುಳಿಸಿ ಅಗ್ನಿಶಾಮಕ ಠಾಣೆಯ ಸಹಯೋಗದೊಂದಿಗೆ ನಗರಸಭೆ ಸಿಬ್ಬಂದಿಗಳು ಹೈಪೋಕ್ಲೋರೈಡ್ ದ್ರಾವಣವನ್ನು ಸಿಂಪಡಿಸುವ ಮೂಲಕ ಮಾರುಕಟ್ಟೆಯನ್ನು ಸ್ವಚ್ಚಮಾಡಿದರು.
ಅಂತು ಇಂತು ಕುಂತಿ ಮಕ್ಕಳಿಗೆ ಸಾಮ್ರಾಜ್ಯವಿಲ್ಲವೆಂಬಂತೆ ಆಗಿದ್ದ ಎ.ಪಿ.ಎಂ.ಸಿ ಹಣ್ಣು ಮತ್ತು ತರಕಾರಿ ಮಾರುಕಟ್ಟೆಯನ್ನು ಕೊರೊನಾ ನೆಪದಲ್ಲಾದರು ಸ್ವಚ್ಚವಾಗಿ ಸಾರ್ವಜನಿಕರು ತಿರುಗಾಡುವಂತಾಗಿದೆ ಮತ್ತು ಒಳಗೆ ಯಾವುದೇ ವಾಹನಗಳನ್ನು ಬಿಡುತ್ತಿಲ್ಲವಾದ್ದರಿಂದ ಮಾರುಕಟ್ಟೆಯಲ್ಲಿ ನೆಮ್ಮದಿಯಾಗಿ ತಿರುಗಾಡುವಂತಾಗಿದೆ ಎಂದು ಸಾರ್ವಜನಿಕರು ಮಾತನಾಡಿ ಕೊಳ್ಳುತ್ತಿದ್ದರು ಈ ಸಂದರ್ಭದಲ್ಲಿ ಶಾಸಕ ಬಿ.ಸಿ.ನಾಗೇಶ್, ಬಿ.ಜೆ.ಪಿ. ಮುಖಂಡ ಲೋಕೇಶ್ವರ್, ನಗರಸಭಾ ಸದಸ್ಯರುಗಳು, ತಹ ಸೀಲ್ದಾರ್, ಡಿ.ವೈ.ಎಸ್ಪಿ, ನಗರಸಭಾ ಸಿಬ್ಬಂದಿಗಳು, ಮತ್ತು ಗ್ರಾಮಾಂತರ ಸಬ್ ಇನ್ಸ್‍ಪೆಕ್ಟರ್‍ಗಳು, ಅಗ್ನಿಶಾಮಕ ಸಿಬ್ಬಂದಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ