ಆರೋಗ್ಯವೇ ಭಾಗ್ಯ, ಆರೋಗ್ಯವಿದ್ದರೆ ಎಲ್ಲವೂ ಸಾಧ್ಯ : ಅಚ್ಯುತ್‍ಕುಮಾರ್

ತಿಪಟೂರು :

       ಎಲ್ಲಾ ಭಾಗ್ಯಗಳಿಗಿಂತ ಆರೋಗ್ಯ ಭಾಗ್ಯ ದೊಡ್ಡದು, ಆರೋಗ್ಯವೊಂದಿದ್ದರೆ ಎಲ್ಲವನ್ನು ಸಾಧಿಸಬಹುದು ಎಂದು ಚಲನಚಿತ್ರ ನಟ ಅಚ್ಯುತ್‍ಕುಮಾರ್ ತಿಳಿಸಿದರು.
 

       ನಗರದ ರೋಟರಿ ಭವನದಲ್ಲಿ ರೋಟರಿ ಕ್ಲಬ್, ನೆರವು ಚಾರಿಟಬಲ್ ಟ್ರಸ್ಟ್ ಮತ್ತು ಇನ್ನರ್ ವ್ಹೀಲ್ ಕ್ಲಬ್ ಇವರುಗಳ ಸಹಯೋಗದೊಂದಿಗೆ ಮಧುಮೇಹ ಜಾಗೃತಿ ಜಾಥಾ ಮತ್ತು ಉಚಿತ ಮಧುಮೇಹ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಚಲನಚಿತ್ರ ಅವರು ಮನುಷ್ಯನಿಗೆ ಆಹಾರ, ಆರೋಗ್ಯ, ಶಿಕ್ಷಣ ಮುಖ್ಯವಾಗಿದ್ದು, ಆರೋಗ್ಯ ಉತ್ತಮವಾಗಿದ್ದರೆ ಬದುಕಿನಲ್ಲಿ ಏನನ್ನಾದರೂ ಸಾಧನೆ ಮಾಡಬಹುದು. ಇಂದು ನಮ್ಮ ರಾಷ್ಟ್ರವು ಪ್ರಪಂಚಕ್ಕೆ ಮಧುಮೇಹದ ರಾಜಧಾನಿಯಾಗಿ ಗುರುತಿಸಿಕೊಂಡಿದೆ ಇಂದು 7 ಜನರಲ್ಲಿ ಒಬ್ಬರಿಗೆ ಮಧುಮೇಹವಿದೆ. ಇಂದು ರೋಟರಿ ಕ್ಲಬ್ ಮಧುಮೇಹ ಶಿಬಿರ ನಡೆಸುತ್ತಿದ್ದು, ಖುದ್ದು ತಜ್ಞ ವೈದ್ಯರೆ ಭಾಗವಹಿಸಿ ತಪಾಸಣೆ ನಡೆಸುತ್ತಿದೆ ಪ್ರತಿಯೊಬ್ಬರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

        ಅಧ್ಯಕ್ಷತೆವಹಿಸಿದ್ದ ರೋಟರಿ ಕ್ಲಬ್ ಅಧ್ಯಕ್ಷ ಶಿವಶಂಕರ್ ಮಾತನಾಡಿ ಯುದ್ಧಕಾಲೇ ಶಾಸ್ತ್ರಭ್ಯಾಸವೆಂಬಂತೆ ಖಾಯಿಲೆಗಳು ಒಂದಾಗ ಪದರಾಡುವ ಖಾಯಿಲೆ ಬದಲು ಅದು ಬರದಂತೆ ತಡೆಯುವುದು ಮುಖ್ಯ ಆದ್ದರಿಂದ ಆರೋಗ್ಯವನ್ನು ರಕ್ಷಿಸಿಕೊಳ್ಳುವುದು ನಮ್ಮಕೈನಲ್ಲೇ ಇದೆ ಆದ್ದರಿಂದ ಆರೋಗ್ಯದ ಬಗ್ಗೆ ಎಚ್ಚರವಹಿಸುವುದು ಅಗತ್ಯವೆಂದರು. ಜನತೆಯ ಆರೋಗ್ಯದ ದೃಷ್ಟಿಯಿಂದ ಈ ಶಿಬಿರ ಆಯೋಜನೆ ಮಾಡಿದ್ದು ಇದರ ಉದ್ದೇಶ ಎಲ್ಲರೂ ಆರೋಗ್ಯವಂತರನ್ನಾಗಿ ಮಾಡುವುದಾಗಿದೆ. ಇಂತಹ ಶಿಬಿರಗಳಲ್ಲಿ ಭಾಗವಹಿಸಿ ತಮ್ಮ ಆರೋಗ್ಯವನ್ನು ಪರೀಕ್ಷಿಸಿಕೊಳ್ಳಬೇಕೆಂದರು.

        ಶಿಬಿರದಲ್ಲಿ ಬೆಂಗಳೂರಿನ ಪೀಪಲ್ ಟ್ರೀ ಆಸ್ಪತ್ರೆಯ ವೈದರಾದ ಡಾ. ಗೌರಿಶಂಕರ್ ಹಾಗೂ ಡಾ. ಎಸ್. ಸಾಯಿಕಿರಣ್, ಬಾಲಾಜಿ ಆಸ್ಪತ್ರೆಯ ಡಾ. ರಮೇಶ್‍ಬಾಬು, ರೋಟರಿ ಕ್ಲಬ್ ಕಾರ್ಯದರ್ಶಿ ತೋಂಟಾದಾರ್ಯ, ಉಪಾಧ್ಯಕ್ಷ ವೆಂಕಟಾಚಲಪತಿ, ಖಜಾಂಚಿ ಅಶೋಕ್‍ಕುಮಾರ್, ನಟರಾಜು, ಸಚಿನ್, ಸಂತೋಷ್, ಕೃಷ್ಣ ಪ್ರಸಾದ್, ಮಾಜಿ ಅಧ್ಯಕ್ಷರಾದ ಅರುಣ್‍ಕುಮಾರ್, ವಿಜಯಕುಮಾರಿ, ಇನ್ನರ್‍ವ್ಹೀಲ್ ಕ್ಲಬ್ ಅಧ್ಯಕ್ಷೆ ಭಾಗ್ಯಮೂರ್ತಿ ಮತ್ತಿತರರಿದ್ದರು

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap