ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬೇಕು-ಪಿಎಸ್‍ಐ

ಹೊಸದುರ್ಗ:

    ಈ ಸಮಾಜದಲ್ಲಿ ಯುವಕರು ಮತ್ತು ವಿಧ್ಯಾರ್ಥಿಗಳು ಯಾವುದೇ ದುಶ್ಚಟ ಮೈಗೂಡಿಸಿಕೊಳ್ಳದೇ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬೇಕು ಮತ್ತು ಮಾದಕ ವಸ್ತು ಸಾಗಣೆ ಬಗ್ಗೆ ಮಾಹಿತಿ ಇದ್ದರೆ ಪೊಲೀಸರಿಗೆ ತಿಳಿಸಬೇಕು ಎಂದು ಇಲ್ಲಿನ ಪಿಎಸ್‍ಐ ಶಿವನಂಜಶೆಟ್ಟಿ ತಿಳಿಸಿದ್ದಾರೆ.

     ಹೊಸದುರ್ಗ ಪೊಲೀಸ್ ಠಾಣೆ ವತಿಯಿಂದ ಪಟ್ಟಣದ ವಿವಿಧ ರಸ್ತೆಗಳಲ್ಲಿ, ಅಂಗಡಿ ಮುಂಗಟ್ಟು, ಆಟೋ ನಿಲ್ದಾಣ, ಬಸ್ ನಿಲ್ದಾಣ ಮತ್ತು ಜನಬಿಡ ಪ್ರದೇಶಗಳಲ್ಲಿ ಮಾದಕ ವಸ್ತುಗಳ ಸೇವನೆ ಹಾಗೂ ಅದರಿಂದಾಗುವ ದುಷ್ಪಾರಿಣಾಮದ ಬಗ್ಗೆ ಅರಿವು ಮೂಡಿಸಿ ಹಾಗೂ ವಿಧ್ಯಾರ್ಥಿಗಳ ಜೊತೆಗೂಡಿ ಪಥಾಸಂಚಾಲನದ ಮೂಲಕ ಜಾಗೃತಿ ಮೂಡಿಸಿ ಮಾತನಾಡಿದರು.

      ಪ್ರಸ್ತುತ ಯುವ ಜನರು ಮತ್ತು ವಿದ್ಯಾರ್ಥಿ ಸಮುದಾಯದವರು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಪಾಲ್ಗೋಳ್ಳುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಮಾದಕ ವಸ್ತು ನಿಯಂತ್ರಣಕ್ಕಾಗಿ ಜಾರಿಗೊಳಿಸಲಾಗಿರುವ ಎನ್‍ಡಿಪಿಎಸ್ ಕಾಯಿದೆಯಲ್ಲಿ ಮಾದಕ ವಸ್ತುಗಳ ಮಾರಾಟ ಮತ್ತು ಸಾಗಣೆ ಮಾಡುವವರಿಗೆ ಶಿಕ್ಷೆ ವಿಧಿಸುವುದರೊಂದಿಗೆ ಸೇವೆನೆ ಮಾಡುವವರ ವಿರುದ್ದ ಪ್ರಕರಣ ದಾಖಲಿಸಿ ಶಿಕ್ಷಿಸುವ ಅಧಿಕಾರ ಪೊಲೀಸರಿಗೆ ಇದ್ದರೂ ಮಾದಕ ವಸ್ತು ವ್ಯಸನಿಗಳ ಭವಿಷ್ಯದ ದೃಷ್ಠಿಯಿಂದ ಆತ್ಮ ಸಮಾಲೋಚನೆ ನಡೆಸುವ ಮೂಲಕ ಎಚ್ಚರಿಕೆ ನೀಡಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಯುವ ಜನತೆಯಲ್ಲಿ ಮಾದಕ ವಸ್ತುಗಳ ಸೇವೆನೆ ಹೆಚ್ಚಾಗುತ್ತಿದ್ದು ನಿಯಂತ್ರಿಸಲು ಮಾದಕ ವಸ್ತುಗಳನ್ನು ಸೇವೆನೆ ಮಾಡುವವರ ವಿರುದ್ದ ಪ್ರಕರಣ ದಾಖಲಿಸಲಾಗುತ್ತಿದೆ ಎಂದರು.

    ಮಾದಕ ವಸ್ತುಗಳ ಸೇವೆನೆಯಿಂದ ದೂರವಿರಿ, ಆರೋಗ್ಯ ಕಾಪಾಡಿಕೊಳ್ಳಿ, ಎಂಬುದು ಸೇರಿದಂತೆ ಮಾದಕ ವಸ್ತುಗಳ ಮುಕ್ತ ಸಮಾಜಕ್ಕೆ ಅಗತ್ಯವಾದ ಹತ್ತು ಹಲವು ಗೋಷ ವಾಕ್ಯಗಳನ್ನು ಒಳಗೊಂಡು ಫಲಕಗಳು ವ್ಯಸನ ಮುಕ್ತರಾಗಿ ಎಂಬ ಸಂದೇಶಗಳು ಜಾಥಾದಲ್ಲಿ ರವಾನೆಯಾಗುತ್ತಿದ್ದವು.ಇದೇ ವೇಳೆ ಎಎಸ್‍ಐ ಬಸವರಾಜಪ್ಪ, ಈಶ್ವರಪ್ಪ, ಮಧು ಹಾಗೂ ವಿಧ್ಯಾರ್ಥಿಗಳು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link