ಹಂಪಿ ಉತ್ಸವ : ಕಲಾವಿದರ ಆಯ್ಕೆ ಪ್ರಕ್ರಿಯೆ ಆರಂಭ

ಬಳ್ಳಾರಿ

    ಹಂಪಿ ಉತ್ಸವದ ಅಂಗವಾಗಿ ಆನೆಲಾಯದ ಆವರಣದಲ್ಲಿ ನಡೆಯಲಿರುವ ವಿಜಯನಗರ ವೈಭವ ಬೃಹತ್ ಧ್ವನಿ ಮತ್ತು ಬೆಳಕು ಕಾರ್ಯಕ್ರಮದ ಕಲಾವಿದರ ಆಯ್ಕೆ ಪ್ರಕ್ರಿಯೆ ಹೊಸಪೇಟೆಯ ಸಂಡೂರು ರಸ್ತೆಯಲ್ಲಿರುವ ನೌಕರರ ಭವನದಲ್ಲಿ ಸೋಮವಾರ ನಡೆಯಿತು.

    ವಿವಿಧೆಡೆಯಿಂದ ಆಗಮಿಸಿದ್ದ ಆಸಕ್ತ ಕಲಾವಿದರು ಬೆಳಗ್ಗೆಯಿಂದಲೇ ನಿಗದಿತ ನಮೂನೆಯ ಅರ್ಜಿ ಭರ್ತಿ ಮಾಡಿ ನೋಂದಣಿ ಮಾಡಿಸಿ ಪ್ರದರ್ಶನಕ್ಕೆ ಕಾದು ಕುಳಿತಿದ್ದರು. ನೋಂದಣಿ ಮಾಡಿಕೊಂಡ ಕ್ರಮಸಂಖ್ಯೆ ಅನುಸಾರ ಕಲಾವಿದರ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು.

    ಭಾರತ ಸರಕಾರದ ವಾರ್ತಾ ಮತ್ತು ಪ್ರಚಾರ ಮಂತ್ರಾಲಯದ ಪ್ರಾದೇಶಿಕ ಜನ ಸಂಪರ್ಕ ಕಾರ್ಯಾಲಯ (ಸಂಗೀತ ಮತ್ತು ನಾಟಕ ವಿಭಾಗ) ಬೆಂಗಳೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬಳ್ಳಾರಿ ಜಿಲ್ಲಾಡಳಿತ ಸಹಯೋಗದಲ್ಲಿ “ಹಂಪಿ ಉತ್ಸವ-2020ರ ನಿಮಿತ್ತ “ವಿಜಯನಗರ ವೈಭವ ಬೃಹತ್ ಧ್ವನಿ ಮತ್ತು ಬೆಳಕು” ಕಾರ್ಯಕ್ರಮ ಜ.10ರಿಂದ 16ರವರೆಗೆ ಆಯೋಜಿಸಲಾಗಿದೆ.

    ಸದರಿ ಕಾರ್ಯಕ್ರಮಕ್ಕೆ ಅಂದಾಜು 100 ಜನ ಕಲಾವಿದರ ಅವಶ್ಯಕತೆ ಇದೆ. ಭರತ ನಾಟ್ಯ ಪರಿಣಿತರು, ಬಾಲ ಕಲಾವಿದರು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಾರೆ.ಆಯ್ಕೆಯಾದ ಕಲಾವಿದರು 07 ದಿನಗಳ ಪೂರ್ವ ಸಿದ್ಧತಾ ತರಬೇತಿ ಹಾಗೂ 07 ದಿನಗಳ ಪ್ರದರ್ಶನದಲ್ಲಿ ಕಲಾವಿದರು ಭಾಗವಹಿಸಲಿದ್ದಾರೆ.

    ಪ್ರಾದೇಶಿಕ ಜನ ಸಂಪರ್ಕ ಕಾರ್ಯಲಯ (ಸಂಗೀತ ಮತ್ತು ನಾಟಕ ವಿಭಾಗ)ದ ಪರಿಣಿತರು ಹಾಗೂ ಇನ್ನೀತರ ಪ್ರಮುಖರ ಆಯ್ಕೆ ಸಮಿತಿ ಕಲಾವಿದರು ನೀಡುವ ಪ್ರದರ್ಶನದ ಆಧಾರದ ಮೇರೆಗೆ ಆಯ್ಕೆ ಮಾಡಲಿದ್ದಾರೆ.ಒಟ್ಟು 206 ಜನ ಕಲಾವಿದರು ಈ ಕಾರ್ಯಕ್ರಮದಲ್ಲಿ ಅವಕಾಶ ಕೋರಿ ಅರ್ಜಿ ಸಲ್ಲಿಸಿ ನೋಂದಾಯಿಸಿದ್ದು, ಇದರಲ್ಲಿ ಸುಮಾರು 100 ಜನ ಕಲಾವಿದರನ್ನು ಆಯ್ಕೆ ಮಾಡಿ ಅವರಿಗೆ ಪೂರ್ವಸಿದ್ಧತಾ ತರಬೇತಿ ನೀಡಲಾಗುತ್ತದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link