ಹರಿಹರ:
ಅಸಂಘಟಿತ ಕಾರ್ಮಿಕರಿಗೆ ಆದ್ಯತೆ ಮೇರೆಗೆ ಸ್ವಂತ ಸೂರು ಕಲ್ಪಿಸುವ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ಶಾಸಕ ರಾಮಪ್ಪ ಹೇಳಿದರು.ನಗರದ ಶಿವಮೊಗ್ಗ ರಸ್ತೆಯ ಜೇ.ಸಿ.ಬಡಾವಣೆ ಯಲ್ಲಿರುವ ಕಾಟ್ವೆ ಭವನದಲ್ಲಿ ಲೋಕಸಭಾ ಚುನಾವಣಾ ನಿಮಿತ್ತ ಕಾಂಗ್ರೆಸ್ ಪಕ್ಷದ ಅಸಂಘಟಿತ ಕಾರ್ಮಿಕರ ಹರಿಹರ ತಾಲ್ಲೂಕು ವಿಭಾಗದ ವತಿಯಿಂದ ಪ್ರಚಾರ ಸಭೆ ಹಾಗೂ ತಾಲ್ಲೂಕು ಕಾರ್ಮಿಕ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಸಂಘಟಿತ ಕಾರ್ಮಿಕರ ಸ್ಥಿತಿ ಇಂದು ತುಂಬಾ ದುಸ್ತರವಾಗಿದ್ದು ಅವರು ಊಟ,ವಸತಿ ಹಾಗೂ ಮೂಲ ಸೌಲಭ್ಯಗಳಿಂದ ವಂಚಿತರಾಗಿ ದ್ದಾರೆ.ಆದ್ದರಿಂದ ಅವರಿಗೆ ಸ್ವಂತ ಸೂರಿನ ಅವಶ್ಯಕತೆ ಹೆಚ್ಚಾಗಿದೆ ಹಾಗಾಗಿ ಅವರಿಗೆ ಸ್ವಂತ ಸೂರನ್ನು ಆದ್ಯತೆ ಮೇರೆಗೆ ನೀಡಲು ಮುಂದಿನ ದಿನಗಳಲ್ಲಿ ಹೆಚ್ಚಿನ ಒತ್ತು ನೀಡಲಾಗುವುದು.
ಅಲ್ಲದೆ ಅಸಂಘಟಿತ ಕಾರ್ಮಿಕರನ್ನು ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಈ ಹಿಂದಿನ ಕಾಂಗ್ರೆಸ್ ಸರ್ಕಾರ ಹಾಗೂ ಈಗಿನ ಸಮ್ಮಿಶ್ರ ಸರ್ಕಾರಗಳು ಪ್ರಾಮಾಣಿಕ ಪ್ರಯತ್ನ ಮಾಡುತ್ತಿವೆ ಅದರಂತೆ ಸರಕಾರಗಳು ಹಲವಾರು ಯೋಜನೆಗಳನ್ನು ಜಾರಿಗೆ ತರುವಲ್ಲಿ ಹೆಚ್ಚಿನ ಕಾಳಜಿ ವಹಿಸುತ್ತಿವೆ.
ಕಾರ್ಮಿಕ ಇಲಾಖೆಯ ಅನೇಕ ಯೋಜನೆಗಳು ಫಲಾನುಭವಿಗಳಿಗೆ ಸಿಗಬೇಕಾಗಿದ್ದು ಈ ನಿಟ್ಟಿನಲ್ಲಿ ಅಸಂಘಟಿತ ಕಾರ್ಮಿಕರು ತಮ್ಮ ದಾಖಲಾತಿ ಗಳೊಂದಿಗೆ ಸದಸ್ಯತ್ವ ನೋಂದಾಯಿಸಿಕೊಳ್ಳಬೇಕು ಹಾಗೂ ಅವರುಗಳಿಗೆ ಕಾರ್ಮಿಕ ಇಲಾಖೆ ಅಧಿಕಾರಿಗಳು ಸಹಕಾರ ನೀಡಲು ಸಹ ಇಲಾಖೆಯ ಅಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದರು.
ಸಮಾವೇಶದ ಅತಿಥಿಯಾಗಿ ಭಾಗಿಯಾಗಿದ್ದ ಕೆಪಿಸಿಸಿ ಅಸಂಘಟಿತ ಕಾರ್ಮಿಕ ವಿಭಾಗದ ರಾಜ್ಯ ಅಧ್ಯಕ್ಷರಾದ ಡಾ.ಶಾಂತವೀರ ನಾಯ್ಕ ಮಾತನಾಡಿ ಅಸಂಘಟಿತ ಕಾರ್ಮಿಕರಿಗೆ ಯಾವುದೇ ಪಿಂಚಣಿ ಯಾಗಲಿ, ಇಎಸ್‍ಐ ಹಾಗೂ ಪಿಎಫ್ ನಂತಹ ಯೋಜನೆಗಳ ವ್ಯಾಪ್ತಿ ಇಲ್ಲ. ಆದರೆ ಇವರಿಗೆ ಉತ್ತಮ ಸೌಲಭ್ಯಗಳು ದೊರೆಯಲಿ ಎಂಬ ಧ್ಯೇಯವುಳ್ಳ ರಾಹುಲ್ ಗಾಂಧಿಯವರ ಆಶಯದ ಮೇರೆಗೆ ಈ ಯೋಜನೆ ಪ್ರಾರಂಭವಾಗಿದೆ.
ಅಸಂಘಟಿತ ಕಾರ್ಮಿಕರು ಇಎಸ್‍ಐ ಪಿಎಫ್ ನಂತರ ನಿವೃತ್ತಿಯಾದಾಗ ಪಿಂಚಣಿ ಹಾಗೂ ಇತರೆ ಸೌಲಭ್ಯಗಳು ಸಿಗುವಂತೆ ಮತ್ತು ನಿವೃತ್ತಿಗೆ ಬಂದಾಗ ಕಾರ್ಮಿಕರು ತುಂಬಾ ದುರ್ಬಲ ಸ್ಥಿತಿಯಲ್ಲಿರುತ್ತಾರೆ ಅಂತಹವರ ಸಬಲೀಕರಣಕ್ಕಾಗಿ ಕಾಂಗ್ರೆಸ್ ಪಕ್ಷವು ಕಾಳಜಿ ವಹಿಸಲಿದೆ ಎಂದು ಹೇಳಿದರು.
ಇತ್ತೀಚೆಗೆ ಅಸಂಘಟಿತ ಕಾರ್ಮಿಕ ರಾಜ್ಯ ಕಾರ್ಯ ದರ್ಶಿಯಾಗಿ ಆಯ್ಕೆಯಾಗಿರುವ ಆರ್.ಅಥಾವುಲ್ಲಾ ಖಾನ್‍ರವರು ಮಾತನಾಡಿ ತಮಗೆ ಉನ್ನತ ಸ್ಥಾನ ಮಾನದ ಜವಾಬ್ದಾರಿಯನ್ನು ನೀಡಿರುವ ಕಾಂಗ್ರೆಸ್ ಪಕ್ಷಕ್ಕೆ ನಾನು ಚಿರಋಣಿಯಾಗಿದ್ದೇನೆ ಮತ್ತು ನನಗೆ ನೀಡಿದ ಜವಾಬ್ದಾರಿಯನ್ನು ಅಸಂಘಟಿತ ಕಾರ್ಮಿಕ ರ ಏಳಿಗೆಗೆ ಶ್ರಮ ವಹಿಸುತ್ತೇನೆ.ಬಡವರ ಬಗ್ಗೆ ಪ್ರಾಮಾಣಿಕವಾಗಿ ಕಾಳಜಿಯನ್ನು ವಹಿಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿ ರಾಹುಲ್ ಗಾಂಧಿ ಅವರನ್ನು ಪ್ರಧಾನಿಯನ್ನಾಗಿ ಮಾಡುವ ಪಣ ತೊಡೋಣ ಎಂದುಸಮಾವೇಶ ದಲ್ಲಿ ಭಾಗಿಯಾಗಿದ್ದ ಎಲ್ಲರಿಗೂ ಕರೆ ಕೊಟ್ಟರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಎಲ್. ಬಿ.ಹನುಮಂತಪ್ಪ,ಅಬಿದಾಲಿ,ರಾಜ್ಯ ಪ್ರಧಾನ ಕಾರ್ಯದರ್ಶಿ ನಯಾಜ್ ಶೇಖ್,ಜಿಲ್ಲಾಧ್ಯಕ್ಷ ಮಂಜಾನಾಯ್ಕ್,ನಗರಸಭೆ ಮಾಜಿ ಅಧ್ಯಕ್ಷ ಶಂಕರ್ ಖಟಾವಕರ್,ಮುಖಂಡರಾದ ಸಿ.ಎನ್.ಹುಲಿಗೇಶ್, ಸೈಯದ್ ಆಸಿಫ್ ಖಾದ್ರಿ, ಭಾನುವಳ್ಳಿ ದಾದಾಪೀರ್,ಮಾದಿಗ ಸಮಾಜದ ಹಿರಿಯರಾದ ಎಂ.ಎನ್.ಶಿವಲಿಂಗಪ್ಪ,ದೂಡಾ ಮಾಜಿ ಸದಸ್ಯ ಜಿ.ವಿ.ವೀರೇಶ್,ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಗೀತಾ ಕದರಮಂಡಲಗಿ ಹಾಗೂ ಮಂಜುಳಾ ಇತರರು ಉಪಸ್ಥಿತರಿದ್ದರು.