ಬೆಂಗಳೂರು
ಕೊರಿಯರ್‍ನಲ್ಲಿ ಬಂದ ಎಂಡಿಎಂಎ ಮಾದಕ ಹರಳನ್ನು ಸ್ವೀಕರಿಸುತ್ತಿದ್ದ ಖಾಸಗಿ ಕಾಲೇಜೊಂದರ ಪ್ರಾಧ್ಯಾಪಕನೊಬ್ಬನನ್ನು ಬೆಂಗಳೂರು ವಲಯದ ಮಾದಕದ್ರವ್ಯ ನಿಯಂತ್ರಣ ದಳದ ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮುಂಬೈಯಿಂದ ಎರಡು ಪಾರ್ಸಲ್‍ನಲ್ಲಿ ಬಂದಿದ್ದ ಮಾದಕ ವಸ್ತು ಎಂಡಿಎಂಎ ಸ್ವೀಕರಿಸುತ್ತಿದ್ದಾಗ ಕಾರ್ಯಾಚರಣೆ ನಡೆಸಿದ ಆಧಿಕಾರಿಗಳು ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿಯು ಎಂ.ಟೆಕ್ ಇಂಜಿನಿಯರಿಂಗ್ ಪದವೀಧರನಾಗಿದ್ದು ಕಾಲೇಜೊಂದರಲ್ಲಿ ಸಹಾಯಕ ಪ್ರಾಧ್ಯಾಪಕನಾಗಿ ಕಾರ್ಯನಿರ್ವಹಿಸುತ್ತಿದ್ದನು,ಆರೋಪಿಯಿಂದ 16 ಗ್ರಾಂ ತೂಕದ ಎಂಡಿಎಂಎ ವಶಕ್ಕೆ ಪಡೆದುಕೊಳ್ಳಲಾಗಿದೆ.ಎಂಡಿಎಂಎ ಒಂದು ನಿಷೇಧಿತ ಮಾದಕ ಪದಾರ್ಥವಾಗಿದ್ದು. ಇದರ ಸೇವನೆಯಿಂದ ರಕ್ತದೊತ್ತಡ, ದೃಷ್ಟಿ ದೋಷ, ಸ್ನಾಯು ಹಾಗೂ ಮಾನಸಿಕ ಸಂಬಂಧಿ ತೊಂದರೆಗಳು ಉಂಟಾಗಲಿದ್ದು ಹೆಚ್ಚಿನ ಅಮಲಿಗಾಗಿ ಇದನ್ನು ಮಾದಕ ವ್ಯಸನಿಗಳು ಬಳಸುತ್ತಾರೆ.