ಬೆಂಗಳೂರು:
ಜವಹಾರ್‍ಲಾಲ್ ನೆಹರೂ ತಾರಾಲಯ ಅಕ್ಟೋಬರ್ 6ರಿಂದ ನವೆಂಬರ್ 4ರವರೆಗೆ ಪ್ರತಿ ಶನಿವಾರ ಮತ್ತು ಭಾನುವಾರದಂದು ಜನಸಾಮಾನ್ಯರಿಗಾಗಿ ಖಗೋಳಶಾಸ್ತ್ರ ಕಾರ್ಯಗಾರವನ್ನು ಆಯೋಜಿಸಿದೆ.
ಖಗೋಳಶಾಸ್ತ್ರದ ಮೂಲಭೂತ ಪರಿಕಲ್ಪನೆಗಳ ಸಮಗ್ರ ಚಿತ್ರಣ ಒದಗಿಸುವುದು ಇದರ ಉದ್ದೇಶವಾಗಿದೆ. ರಾತ್ರಿಯ ಆಕಾಶ ವೀಕ್ಷಣೆ, ಸೌರವ್ಯೂಹದ ಕಾಯಗಳು, ಖಗೋಳಕಾಯಗಳು ಮತ್ತು ಅವುಗಳ ಚಲನೆ ಮುಂತಾದ ವಿಚಾರಗಳ ಬಗ್ಗೆ ಕಾರ್ಯಗಾರದಲ್ಲಿ ಚರ್ಚಿಸಲಾಗುವುದು ಎಂದು ತಾರಾಲಯ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
