ಪುತ್ತೂರಿನ ವಿದ್ಯಾರ್ಥಿನಿ ಮೇಲಿನ ಆತ್ಯಾಚಾರ ಖಂಡಿಸಿ ಎಸ್‍ಎಫ್‍ಐ ಪ್ರತಿಭಟನೆ

ರಾಣೇಬೆನ್ನೂರ:

      ಪುತ್ತೂರಿನ ವಿದ್ಯಾರ್ಥಿನಿ ಮೇಲಿನ ಆತ್ಯಾಚಾರ ಖಂಡಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‍ಎಫ್‍ಐ) ರಾಣೇಬೆನ್ನೂರ ತಾಲ್ಲೂಕು ಸಮಿತಿ ನೇತೃತ್ವದಲ್ಲಿ ನಗರದ ಪೋಸ್ಟ್ ಸರ್ಕಲ್ ನಿಂದ ನೂರಾರು ವಿದ್ಯಾರ್ಥಿಗಳು ತಹಶಿಲ್ದಾರರ ಕಚೇರಿ ವರೆಗೂ ಮೆರವಣಿಗೆ ಹೋಗಿ ಒತ್ತಾಯಿಸಿ ತಹಶಿಲ್ದಾರರಿಗೆ ಮನವಿ ಸಲ್ಲಿಸಲಾಯಿತು.

     ಪ್ರತಿಭಟನೆ ಉದ್ದೇಶಿಸಿ ಎಸ್‍ಎಫ್‍ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಭೋವಿ ಮಾತನಾಡಿ ರಾಜ್ಯದಲ್ಲಿ ಗಾಂಜಾ ಸೇವನೆಯಿಂದಾಗಿ ಸರಣಿಯಾಗಿ ಕುಕೃತ್ಯಗಳು ನಡೆಯುತ್ತಿದೆ. ಇತ್ತೀಚೆಗೆ ದೇರಳಕಟ್ಟೆಯಲ್ಲಿ ನಡೆದ ಕೊಲೆ ಯತ್ನದಲ್ಲಿಯೂ ಅಪರಾಧಿ ಅಮಲು ಪದಾರ್ಥ ಸೇವನೆ ಮಾಡಿ ಇಂತಹ ಪೈಶ್ಯಾಚಿಕ ಕೃತ್ಯ ನಡೆಸಿದ್ದಾನೆ. ಪುತ್ತೂರಿನಲ್ಲಿ ನಡೆದ ಅತ್ಯಾಚಾರ ಘಟನೆಯಲ್ಲೂ ಅತ್ಯಾಚಾರಿಗಳು ಅಮಲು ಪದಾರ್ಥ ಸೇವನೆ ಮಾಡಿ ತಲೆತಗ್ಗಿಸುವಂತ ಕೃತ್ಯ ಮಾಡಿದ್ದಾರೆ.

      ಇತ್ತೀಚೆಗೆ ಬೆಳ್ತಂಗಡಿಯ ಕಾಲೇಜಿನಲ್ಲಿ ಗೂಂಡಾಗಳು ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ್ದರು.ಈ ಹಿಂದೆಯೂ ಇಂತಹ ಕುಕೃತ್ಯಗಳು ದ.ಕ ಜಿಲ್ಲೆಯಲ್ಲಿ ನಡೆಯುತ್ತಾ ಬಂದಿವೆ. ಉಳ್ಳಾಲದ ಮುಕ್ಕಚೇರಿಯಲ್ಲಿ ಮೀಸೆ ಚಿಗುರದ ಹುಡುಗರು ವರ್ಷದ ಹಿಂದೆ ನಡೆಸಿದ ಯುವಕನೊಬ್ಬನ ಕೊಲೆ ಪ್ರಕರಣ ಹೀಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಹಲವು ಅಪರಾಧ ಚಟುವಟಿಕೆಗಳ ಹಿಂದೆ ಡ್ರಗ್ಸ್ , ಗಾಂಜಾ , ಅಫೀಮು ಮಾಫಿಯಾ ಕೆಲಸ ಮಾಡುತ್ತಿದೆ.

      ವಿದ್ಯಾರ್ಥಿ ಯುವಜನರು ಇದರ ದಾಸ್ಯಕ್ಕೆ ಒಳಗಾಗಿ ಕ್ರಿಮಿನಲ್ ಚಟುವಟಿಕೆಗಳ ಕಡೆ ಆಕರ್ಷಿತರಾಗುತ್ತಿದ್ದಾರೆ. ಈ ಬಗ್ಗೆ ಧ್ವನಿ ಎತ್ತಿ ಗಾಂಜಾ , ಡ್ರಗ್ಸ್ ಮಾಫಿಯಾವನ್ನು ಮಟ್ಟ ಹಾಕಬೇಕಿದ್ದ ಜಿಲ್ಲೆಯ ಸಂಸದರು ಮತ್ತು ಶಾಸಕರು ಗೋವು ,ಆಪರೇಷನ್ ಕಮಲ, ಆಪರೇಷನ್ ಹಸ್ತ ಎಂಬ ರಾಜಕೀಯದಲ್ಲಿ ಬ್ಯುಸಿಯಾಗಿದ್ದಾರೆ. ಈ ರಾಜಕಾರಣಿಗಳು ನಮ್ಮ ಮಕ್ಕಳ ಪರವಾಗಿ ಧ್ವನಿ ಎತ್ತುತ್ತಾರೆ ಎಂಬ ನಿರೀಕ್ಷೆ ಹುಸಿಯಾಗಿದೆ. ಸುನೀತಾ ಸಿಂಗ್ ಎಂಬ ಬಿಜೆಪಿ ನಾಯಕ ಹೆಣ್ಣುಮಕ್ಕಳನ್ನು ಅತ್ಯಾಚಾರ ಮಾಡಿ ಎಂದು ಸಂಘಪರಿವಾರದ ಪುರುಷರಿಗೆ ಕರೆ ನೀಡಿದ್ದರು. ಕರೆ ಕೊಟ್ಟ ನಾಲ್ಕೆ ದಿನದಲ್ಲಿ ಅಮಲು ಪದಾರ್ಥ ನೀಡಿ ವಿದ್ಯಾರ್ಥಿನಿಯ ಮೇಲೆ ದೌರ್ಜನ್ಯ ನಡೆಸಲಾಗಿದೆ.

      ಎಸ್‍ಎಫ್‍ಐ ಉಪಾಧ್ಯಕ್ಷ ಶ್ರೀಧರ ಛಲವಾದಿ ಮಾತನಾಡಿ ಅತ್ಯಾಚಾರ ಮಾಡಿದ ಹುಡುಗರಿಗೆ ಗಲ್ಲು ಶಿಕ್ಷೆ ಆಗುವವರೆಗೂ ಹೋರಾಟ ಮುಂದುವರಿಯುತ್ತದೆ ಯಾವುದೇ ಶಕ್ತಿಗಳ ಒತ್ತಡಕ್ಕೆ ಒಳಗಾಗದೆ ಅತ್ಯಾಚಾರವನ್ನು ಎಸಗಿದ ಆರೋಪಿಗಳಿಗೆ ಶೀಘ್ರ ಶಿಕ್ಷೆ ನೀಡಿ ವಿದ್ಯಾರ್ಥಿನಿಗೆ ನ್ಯಾಯ ಒದಗಿಸಿಕೊಡಬೇಕು ಮತ್ತು ಅಮಲು ಪದಾರ್ಥಗಳ ಸಾಗಾಟವನ್ನು ತಡೆಗಟ್ಟಲು ಸರ್ಕಾರಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಯಿತು.

     ಈ ಸಂದರ್ಭದಲ್ಲಿ ಎಸ್‍ಎಫ್‍ಐ ಮುಖಂಡರಾದ ದೀಪಕ್ ಲಮಾಣಿ, ರಮ್ಯಾ ಎಸ್, ಪೂಜಾ ದೊಡ್ಡಮನಿ, ಅಕ್ಷತಾ ಬಾರ್ಕಿ, ಲಕ್ಷ್ಮೀ ನಾಯಕ, ಪದ್ಮಶ್ರೀ, ಭೀಮ್ ಆರ್ಮಿಯ ಸಂಚಾಲಕರಾದ ಉಮೇಶ್ ಕೆಂಪಹಾಲಪ್ಪನವರು, ಮಾರುತಿ ನಾಯಕ, ಗೀರಿಶ್, ಬಸವರಾಜ ಛಲವಾದಿ ಸೇರಿದಂತೆ ಅನೇಕ ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link