ಎಟಿಎಂ ದರೋಡೆಕೋರನ ಬಂಧನ

ಬೆಂಗಳೂರು

      ಎಟಿಎಂ ಕೇಂದ್ರಗಳಿಗೆ ಸ್ಕಿಮ್ಮಿಂಗ್ ಯಂತ್ರವಿಟ್ಟು ಬ್ಯಾಂಕ್ ಗ್ರಾಹಕರಿಗೆ ಗೊತ್ತಾಗದಂತೆ ಹಣ ದೋಚುತ್ತಿದ್ದ ಉಗಾಂಡ ಮೂಲದ ಆರೋಪಿಯನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ.

      ಬಾಬುಸಾಬ್‍ಪಾಳ್ಯದ ನಯಾರೋ ಎಸ್ವೇಲ್(35)ಬಂಧಿತ ನಾಗಿದ್ದಾನೆ ಬಂಧಿತನಿಂದ ಸ್ಕಿಮ್ಮಿಂಗ್ ಯಂತ್ರಗಳು ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.ಉಗಾಂಡ ಮೂಲದ ನಗರದಲ್ಲಿನ ಪ್ರಮುಖ ಎಟಿಎಂಗಳನ್ನು ಗುರಿಯಾಗಿಸಿಕೊಂಡು ಮೂಲದ ಆರೋಪಿ ಸೆಕ್ಯೂರಿಟಿಗೂ ಗೊತ್ತಾಗದ್ದಂತೆ ಎಟಿಎಂಗೆ ಸ್ಕಿಮ್ಮಿಂಗ್ ಮಿಷನ್ ಅಳವಡಿಸುತ್ತಿದ್ದನು.

      ಅದರಿಂದ ಮಾಹಿತಿ ಆಧರಿಸಿ ಆರೋಪಿಯು ಗ್ರಾಹಕರಿಗೆ ತಿಳಿಯದೆ ಹಣ ಎಗರಿಸುತ್ತಿದ್ದನು, ರಾಜಾಜಿನಗರ ಬಳಿ ಎಟಿಎಂ ಕೇಂದ್ರವೊಂದಕ್ಕೆ ಸ್ಕಿಮ್ಮಿಂಗ್ ಯಂತ್ರವಿಡುತ್ತಿರುವುದನ್ನು ಸಿಸಿ ಕ್ಯಾಮಾರದಲ್ಲಿ ಗಮನಿಸಿದ ಬ್ಯಾಂಕ್ ಸಿಬ್ಬಂದಿ ರಾಜಾಜಿನಗರ ಪೊಲೀಸರಿಗೆ ತಿಳಿಸಿ ಆರೋಪಿಯನ್ನು ಹಿಡಿದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ.ಪೊಲೀಸರು ಆರೋಪಿಯನ್ನು ಬಂಧಿಸಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಚೇತನ್‍ಸಿಂಗ್ ತಿಳಿಸಿದ್ದಾರೆ

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link