ಬೆಂಗಳೂರು
ವಯಸ್ಸು 36 ಕಳೆದರೂ ಕಂಕಣ ಕೂಡಿ ಬರದೇ ವಿವಾಹವಾಗದಿದ್ದರಿಂದ ನೊಂದ ಆಟೋ ಚಾಲಕರೊಬ್ಬರು ಶಂಕಾಸ್ಪದವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಗತಿಪುರದಲ್ಲಿ ಶನಿವಾರ ರಾತ್ರಿ ನಡೆದಿದೆ.
ಪ್ರಗತಿಪುರದ ವೆಂಕಟೇಶ್ವರ ದೇವಸ್ಥಾನದ ಬಳಿ ವಾಸಿಸುತ್ತಿದ್ದ ಆಟೋ ಚಾಲಕ ಗಿರೀಶ್ ಎಂದು ಮೃತಪಟ್ಟವರನ್ನು ಗುರುತಿಸಲಾಗಿದೆ.ತಂದೆ – ತಾಯಿ ಸೇರಿ ಮನೆಯವರೆಲ್ಲಾ ಮೂರು ದಿನಗಳ ಹಿಂದೆ ಚಾಮರಾಜನಗರಕ್ಕೆ ಹೋಗಿದ್ದು, ಒಂಟಿಯಾಗಿದ್ದ ಗಿರೀಶ್ ರಾತ್ರಿ 9ರ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗಿರೀಶ್ಗೆ 36 ವರ್ಷ ಕಳೆದರೂ ಸರಿಯಾದ ಯುವತಿ ಸಿಗದೆ ವಿವಾಹವಾಗಿರಲಿಲ್ಲ. ಇದರಿಂದ ಸಾಕಷ್ಟು ನೊಂದಿದ್ದ ಅವರು, ಮನೆಯಲ್ಲಿ ಮಲಗಿದ್ದ ಸ್ಥಿತಿಯಲ್ಲೇ ಮೃತಪಟ್ಟಿದ್ದಾರೆ. ವಿಷ ಸೇವಿಸಿ ಮೃತಪಟ್ಟಿರುವ ಶಂಕೆಯನ್ನು ಪ್ರಕರಣ ದಾಖಲಿಸಿರುವ ಕುಮಾರಸ್ವಾಮಿ ಲೇಔಟ್ ಪೊಲೀಸರು ವ್ಯಕ್ತಪಡಿಸಿದ್ದಾರೆ.ಗಿರೀಶ್ ಮೃತದೇಹದ ಮರಣೋತ್ತರ ಪರೀಕ್ಷೆಯ ನಂತರ, ಸಾವಿಗೆ ನಿಖರ ಕಾರಣಗಳು ತಿಳಿದುಬರಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








