ಆಟೊ ಚಾಲಕರ ನಾನಾ ಬೇಡಿಕೆ ಈಡೇರಿಸಲು ಆಗ್ರಹ

ಹೊಸಪೇಟೆ:

     ಆಟೋ ಚಾಲಕರ ನಾನಾ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಫೆಡರೇಶನ್ ಆಫ್ ಕರ್ನಾಟಕ ಆಟೊರಿಕ್ಷಾ ಚಾಲಕರ ಯೂನಿಯನ್ಸ್, ವಿಜಯನಗರ ಆಟೊ ಚಾಲಕರ ಸಂಘ, ತುಂಗಭದ್ರಾ ಆಟೊ ಚಾಲಕರ ಸಂಘದ ಪದಾಧಿಕಾರಿಗಳು, ಆಟೊ ಚಾಲಕರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

       ಸ್ಥಳೀಯ ಶಾನಬಾಗ ವೃತ್ತದಲ್ಲಿ ಜಮಾಯಿಸಿದ ಆಟೊ ಚಾಲಕರು ಕೆಲ ಕಾಲ ಮಾನವ ಸರಪಳಿ ನಿರ್ಮಿಸಿ ಸಂಚಾರ ತಡೆನಡೆಸಿದರು.

      ಆಟೊ ಚಾಲಕರಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಸಾವಿರಾರು ಕೋಟಿ ರೂಪಾಯಿಗಳ ತೆರಿಗೆ ಆದಾಯ ಬರುತ್ತಿದೆ. ಸಮಾಜದ ಎಲ್ಲ ವರ್ಗದ ಜನರಿಗೆ ಹಗರಿಳು ಸೇವೆ ಸಲ್ಲಿಸುತ್ತಿದ್ದರು ಆಟೊ ಚಾಲಕರ ಸಮಸ್ಯೆ ಬಗೆಹರಿಸಲು ಸರಕಾರ ಮುಂದಾಗಿಲ್ಲ ಎಂದು ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದರು.

ಆಗ್ರಹ:

      ಕೇಂದ್ರ ಸರಕಾರ ಕೇಂದ್ರ ಮೋಟಾರ್ ವಾಹನ ಕಾಯಿದೆ ತಿದ್ದುಪಡಿ ಮಸೂದೆಯನ್ನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಂಡಿಸಿರುವುದನ್ನು ವಾಪಸ್ ಪಡೆಯಬೇಕು. ವಾಹನಗಳ ಥರ್ಡ್ ಪಾರ್ಟಿ ವಿಮೆ ದರ ಹೆಚ್ಚಳ ಕಡಿತಗೊಳಿಸಬೇಕು,
15 ವರ್ಷದ ಹಳೆ ವಾಹನಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಅಂತಹ ಹಳೆಯ ಆಟೋ ರಿಕ್ಷಾ ಮಾಲೀಕರಿಗೆ ಹೊಸ ರಿಕ್ಷಾ ತೆಗೆದುಕೊಳ್ಳುವಾಗ ನಗರಸಭೆ, ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಅಥವಾ ಪ್ರವಾಸೋದ್ಯಮ ಇಲಾಖೆ 30 ಸಾವಿರ ರಿಯಾಯಿತಿ ನೀಡಬೇಕು. ಹಳೆಯ ಆಟೋ ರಿಕ್ಷಾಗಳನ್ನು ಮಾರುಕಟ್ಟೆಯ ಬೆಲೆಗೆ ವಾಪಸ್ ಪಡೆದುಕೊಳ್ಳಬೇಕು.

      ಆಟೋ ರಿಕ್ಷಾ ನೋಂದಣಿ, ವರ್ಗಾವಣೆ ಸಂದರ್ಭದಲ್ಲಿ ಎಸ್ಪಿ ರಿಪೋರ್ಟ್ ಕಡ್ಡಾಯ ಮಾಡಬಾರದು. ಆಟೋ ರಿಕ್ಷಾ ಚಾಲಕರಿಗೆ ನಾನಾ ಯೋಜನೆಯಡಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲ ಸೌಲಭ್ಯ ಸಿಗುವಂತಾಗಬೇಕು.

      ಕೇಂದ್ರ ಮೋಟಾರು ವಾಹನ ತಿದ್ದುಪಡಿ ಮಸೂದೆ ಜಾರಿ ಮಾಡುವುದನ್ನು ಕೈಬಿಡಬೇಕು. ರಾಜ್ಯ ಸರ್ಕಾರವು ಕರ್ನಾಟಕ ಮೋಟಾರು ವಾಹನ ಕಾಯಿದೆ ತಿದ್ದುಪಡಿ ಮಾಡಿ ದಂಡಗಳನ್ನು ದುಬಾರಿ ಮಾಡಿರುವುದನ್ನು ಹಿಂಪಡೆಯಬೇಕು ಹಾಗೂ ನಗರದ ಎಲ್ಲಾ ಆಟೋ ಚಾಲಕರಿಗೆ ನಿವೇಶನ ನೀಡಿ ಆಟೊ ನಗರ ನಿರ್ಮಾಣ ಮಾಡಬೇಕು, ನಗರದ ಎಲ್ಲಾ ಆಟೊ ನಿಲ್ದಾಣಗಳನ್ನು ಆಧುನೀಕರಣಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ನಂತರ ತಹಸೀಲ್ದಾರ್ ಕಚೇರಿ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ರವಾನಿಸಿದರು. ಮುಖಂಡರಾದ ರಾಮಚಂದ್ರ, ಸಂತೋಷ್, ವೆಂಕಟೇಶ್, ಕೃಷ್ಣ, ಆಟೊ ಹನುಮಂತ, ರಫೀಕ್, ಅಬ್ದುಲ್, ಮಹಮ್ಮದ್, ನಾಗರಾಜ್, ಶ್ರೀನಿವಾಸ್, ಉಮೇಶ್, ರಮೇಶ್ ಮುಂತಾದವರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link