ಹಗರಿಬೊಮ್ಮನಹಳ್ಳಿ:
ಆಟೋ ಚಾಲಕರ ಶ್ರಮ ಅತ್ಯಂತ ಪ್ರಮುಖವಾದುದ್ದು, ಅವರಿಗಾಗಿ ಪಟ್ಟಣದಲ್ಲೊಂದು ಆಟೋ ಶಂಕರ್ ಕಾಲೂನಿ ನಿರ್ಮಾಣಮಾಡಲಾಗುವುದೆಂದು ಶಾಸಕ ಎಸ್.ಭೀಮಾನಾಯ್ಕ್ ಭರವಸೆ ನೀಡಿದರು.
ಅವರು, ಆಟೋ ಚಾಲಕರ ಮತ್ತು ಮಾಲೀಕರ ಸಂಘದಿಂದ ಪಟ್ಟಣದ ಹಳೇ ಊರಿನ ಬಸ್ ನಿಲ್ದಾಣದ ಹೊರ ಆವರಣದಲ್ಲಿರುವ ಆಟೋ ನಿಲ್ದಾಣದ ಹತ್ತಿರ, ಚಿತ್ರ ನಟ ಹಾಗೂ ನಿರ್ದೇಶಕ ಶಂಕರ್‍ನಾಗ್ ಅವರ ಜನ್ಮದಿನಾಚರಣೆ ಹಾಗೂ ಕನ್ನಡ ರಾಜ್ಯೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು. ಆಟೋ ಚಾಲಕರು ಪ್ರಮಾಣಿಕತೆ ಪ್ರಯಾಣಿಕರ ಸುರಕ್ಷತೆಗೆ ಶ್ರೀರಕ್ಷೆಯಾಗಿರುತ್ತೆ. ಶಂಕರ್‍ನಾಗ್ ಅವರ ಆಟೋರಾಜ ಚಲನ ಚಿತ್ದದಲ್ಲಿರುವ ನಟನೆ ಇಂದಿಗೂ ರಾಜ್ಯದಲ್ಲಿ ಅಚ್ಚಳಿಯದೆ ಅವರ ಹೆಸರು ಉಳಿಯಲಿಕ್ಕೆ ಕಾರಣ. ನಾನು ಕೂಡ ಅವರ ಅಭಿಮಾನಿಯಾಗಿದ್ದೇನೆ ಎಂದ ಅವರು, ಪಟ್ಟಣದಲ್ಲಿ 9ಸ್ಥಳಗಳಲ್ಲಿ ಆಟೋ ತಂಗುದಾಣಗಳನ್ನು ನಿರ್ಮಾಣ ನಡೆದಿತ್ತು ಆಗಲೇ 5ಕಡೆ ನಿರ್ಮಾಣವಾಗಿವೆ, ಇನ್ನೂ ನಾಲ್ಕಾರು ಕಡೆ ನಿರ್ಮಾಣ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿ.ಪಂ.ಮಾಜಿ ಸದಸ್ಯರಾದ ಹೆಗ್ಡಾಳ್ ರಾಮಣ್ಣ, ಅಕ್ಕಿತೋಟೇಶ್, ಪುರಸಭೆ ಸದಸ್ಯರಾದ ಹುಡೇದ್ ಗುರುಬಸವರಾಜ್, ಡಿಶ್ ಮಂಜುನಾಥ, ಆಟೋ ಚಾಲಕರ ಮತ್ತಯ ಮಾಲೀಕರ ಸಂಘದ ಅಧ್ಯಕ್ಷ ಯು.ವೆಂಕಟೇಶ್, ಮಾಜಿ ಅಧ್ಯಕ್ಷರಾದ ಬಾಬು, ಗೊಂಬಿ ಮಂಜುನಾಥ, ಮುಖಂಡರಾದ ಕೈಲಾಸಮೂರ್ತಿ, ಎಚ್.ಎಂ.ಸಂಗಯ್ಯ, ಎಂ.ವೀರೇಶ್, ಹುಡೇದ್ ವೀರಣ್ಣ , ಜಡಿಯಪ್ಪ, ಎಚ್.ಎಂ.ಸುರೇಶ್, ಎಚ್.ಎಂ.ಗಣೇಶ್, ಖದರ್, ಸುರೇಶ್, ಎಂ.ಬಿ.ಜಿಲಾನ್, ಪರಶುರಾಮ್ ಮುಂತಾದವರಿದ್ದರು.