ತಿಪಟೂರು
ಲಕ್ಷಾಂತರ ರೂಪಾಯಿ ಮೌಲ್ಯವುಳ್ಳ ಕೃಷಿ ಜಮೀನಿಗೆ ಗುಂಟೆಗೆ ಕೇವಲ 9,500 ರೂ. ನೀಡುತ್ತಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಹೊನ್ನವಳ್ಳಿ ಹೋಬಳಿ ಭೈರನಾಯಕನಹಳ್ಳಿಯಲ್ಲಿ ನಡೆದಿದ್ದು ವರದಿಯಾಗಿದೆ.
ಕಳೆದ ಎರಡು ವರ್ಷಗಳಿಂದ ತಿಪಟೂರು ತಾಲ್ಲೂಕಿನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಭೂಸ್ವಾಧೀನ ವಿರೋಧಿಸುತ್ತಿರುವ ರೈತರಿಗೆ ರಾಷ್ಟ್ರೀಯ ಹೆದ್ದಾರೆ ಯೋಜನಾಧಿಕಾರಿಗಳೂ ನೀಡಿದ್ದ ಅತೀ ಕನಿಷ್ಠ ಮೊತ್ತದ ಪರಿಹಾರದ ನೋಟೀಸ್ ನಮಗೆ ತೀವ್ರ ಆಪಘಾತವನ್ನುಂಟು ಮಾಡಿದೆ. ಈ ವಿಚಾರದಲ್ಲಿ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಮಿಕ ಸಂಘಟನೆಗಳು ಪ್ರತಿಕಾಘೋಷ್ಠಿ ನಡೆಸಿ ರಾ.ಹೆದ್ದಾರಿ ಪ್ರಾಧಿಕಾರದ ಭೂಸ್ವಾಧೀನಾಧಿಕಾರಿ ಯಶೋದಮ್ಮ ಸರ್ವಾಧಿಕಾರಿ ಧೋರಣೆಯನ್ನು ತೀವ್ರವಾಗಿ ಖಂಡಿಸಿದರು.
ಭೂಸ್ವಾಧೀನಾಧಿಕಾರಿಗಳು ರೈತ ಗುತ್ತಿಗೆದಾರರ ಏಜೆಂಟರಂತೆ ವರ್ತಿಸುತ್ತಿದ್ದು ರೈತ ಕುಟುಂಬಗಳ ಲಕ್ಷಾಂತರ ಮೌಲ್ಯದ ಕೃಷಿ ಭೂಮಿಯನ್ನು ವಾಸ್ತವ ಮಾರುಕಟ್ಟೆಗಿಂತ ಅಪಮೌಲ್ಯಗೊಳಿಸಿ ರಸ್ತೆ ಕಂಟ್ರಾಕ್ಟರ್‍ಗಳಿಗೆ ಲಾಭ ಮಾಡಿಕೊಡುತ್ತಿದ್ದಾರೆ ಎಂದು ರೈತ ಸಂಘದ ರಾಜ್ಯ ಕಾರ್ಯದರ್ಶಿ ಬೆನ್ನಾಯಕನಹಳ್ಳಿ ದೇವರಾಜು ಆರೋಪಿಸಿದ್ದು, ಚುನಾವಣಾ ಸಂದರ್ಭದಲ್ಲಿ ಅತ್ಯಂತ ತುರ್ತಾಗಿ ಪರಿಹಾರದ ನೋಟೀಸನ್ನು ಭೂ ಸಂತ್ರಸ್ಥರಿಗೆ ನೀಡುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದರು.
ಅಧಿಕಾರಿಗಳು ಮತ್ತು ರಾಜಕಾರಣಿಗಳ ದುರಾಡಳಿತಕ್ಕೆ ನೊಂದಿರುವ ಸಂತ್ರಸ್ಥರು ಸರ್ಕಾರ ಮತ್ತು ಭೂಸ್ವಾಧೀನಾಧಿಕಾರಿಗಳ ವಿರುದ್ದ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ತಿಳಿಸಿ, ಹೋರಾಟದ ಅಂಗವಾಗಿ ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಮೈತ್ರಿ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಅಭ್ಯರ್ಥಿಗಳನ್ನು ಬಹಿಷ್ಕರಿಸುವುದಾಗಿ ಸಂತ್ರಸ್ಥರ ಸಮಿತಿಯ ಸದಸ್ಯ ಭೈರನಾಯಕನಹಳ್ಳಿ ನಾಗಣ್ಣ, ತಿಮ್ಮಲಾಪುರ ದೇವರಾಜು ಮತ್ತು ಹುಚ್ಚಗೊಂಡನಹಳ್ಳಿ ನಂಜಾಮರಿ ಎಚ್ಚರಿಸಿದರಲ್ಲದೆ ಚುನಾವಣಾ ಅಭ್ಯರ್ಥಿಗಳನ್ನು ಗ್ರಾಮ ಪ್ರವೇಶವನ್ನು ನಿರ್ಬಂಧಿಸಲಾಗುವುದು ಎಂದರು.ಪತ್ರಿಕಾಗೋಷ್ಠಿಯಲ್ಲಿ ಕ.ರಾ.ರೈ.ಸಂ ರಾಜ್ಯ ಕಾರ್ಯದರ್ಶಿ ದೇವರಾಜು, ಮನೋಹರ್ ಪಟೇಲ್, ಗೌತಮ್ ರಂಗಧಾಮ, ಚಿದಾನಂದ್, ಕೃಷಿ ಸಂಘಟನೆಯ ಮಾದಿಹಳ್ಳಿ ಪ್ರಸಾದ್ ಮುಂತಾದವರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
