ಚಿತ್ರದುರ್ಗ:
ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿ ನಗರಸಭೆಯಿಂದ ಸೋಮವಾರ ನಗರದಲ್ಲಿ ಸ್ವಚ್ಚತೆ ಕುರಿತು ಜಾಗೃತ ಜಾಥ ಹಮ್ಮಿಕೊಳ್ಳಲಾಗಿತ್ತು.
ನಗರಸಭೆ ಪೌರಾಯುಕ್ತರಾದ ಚಂದ್ರಪ್ಪನವರು ನಗರಸಭೆ ಆವರಣದಲ್ಲಿ ಜಾಗೃತಿ ಜಾಥಕ್ಕೆ ಚಾಲನೆ ನೀಡಿ ಮಾತನಾಡುತ್ತ ಪ್ರತಿಯೊಬ್ಬರು ಮನೆ ಹಾಗೂ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಚಾಗಿಟ್ಟುಕೊಂಡು ದೇಶದ ಪ್ರಧಾನಿ ಮೋದಿರವರ ಸ್ವಚ್ಚ ಭಾರತ್ ಆಂದೋಲನ ಯಶಸ್ವಿಯಾಗಲು ಕೈಜೋಡಿಸಿ ಎಂದು ಮನವಿ ಮಾಡಿದರು.
ಮನೆಯಲ್ಲಿನ ಕಸವನ್ನು ಯಾರು ತಂದು ಬೀದಿಗೆ ಸುರಿಯಬಾರದು ಎನ್ನುವ ಕಾರಣಕ್ಕಾಗಿ ದಿನನಿತ್ಯವೂ ಬೆಳಗಿನ ಜಾವ ಮನೆ ಬಾಗಿಲಿಗೆ ಬರುವ ವಾಹನದೊಳಗೆ ಕಸವನ್ನು ಹಾಕಿ ಇಡೀ ನಗರವನ್ನು ಸ್ವಚ್ಚವಾಗಿಡಲು ನಗರಸಭೆಯೊಂದಿಗೆ ಸಹಕರಿಸಿ ಪ್ರತಿಯೊಬ್ಬರು ಸ್ವಚ್ಚತೆ ಕುರಿತು ಜಾಗೃತಿ ಮೂಡಿಸಿಕೊಳ್ಳಬೇಕು ಎಂದು ತಿಳಿಸಿದರು.
ನಗರಸಭೆ ಸಮುದಾಯ ಸಂಘಟಕಿ ಮಂಜುಳಮ್ಮ ಸ್ವಚ್ಚತೆ ಜಾಗೃತಿ ಕುರಿತು ಸ್ತೀಶಕ್ತಿ ಸ್ವ-ಸಹಾಯ ಸಂಘದ ಮಹಿಳೆಯರಿಗೆ ಪ್ರಮಾಣ ವಚನ ಬೋಧಿಸಿದರು.
ಹೆಲ್ತ್‍ಇನ್ಸ್‍ಪೆಕ್ಟರ್‍ಗಳಾದ ಸರಳ, ಭಾರತಿ, ಕಾಂತರಾಜ್, ಪರಿಸರ ಇಂಜಿನಿಯರ್ ಜಾಫರ್ ಸೇರಿದಂತೆ ಸ್ವಸಹಾಯ ಸಂಘದ ನೂರಾರು ಮಹಿಳೆಯರು ಹಾಗೂ ಪೌರ ಕಾರ್ಮಿಕರು ಸ್ವಚ್ಚತಾ ಜಾಗೃತಿ ಜಾಥದಲ್ಲಿ ಪಾಲ್ಗೊಂಡಿದ್ದರು.ನಗರಸಭೆಯಿಂದ ಹೊರಟ ಜಾಥ ಮದಕರಿನಾಯಕ ವೃತ್ತ, ರಂಗಯ್ಯನಬಾಗಿಲು, ಉಚ್ಚಂಗೆಲ್ಲಮ್ಮ ದೇವಸ್ಥಾನದ ಮುಂಭಾಗದಿಂದ ಆನೆಬಾಗಿಲು, ಗಾಂಧಿವೃತ್ತದ ಮೂಲಕ ಸಂಚರಿಸಿ ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ ಸ್ವಚ್ಚತೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ