ಚಿತ್ರದುರ್ಗ:
ಚಿತ್ರಡಾನ್‍ಬೋಸ್ಕೋ ಸಂಸ್ಥೆಯ ಮಕ್ಕಳು ಹತ್ತೊಂಬತ್ತು ಬೇಡಿಕೆಗಳನ್ನು ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸುವಂತೆ ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಫಾತ್ಯರಾಜನ್‍ಗೆ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಮನವಿ ಸಲ್ಲಿಸಿದರು.ದೆಹಲಿಯಲ್ಲಿ ನಡೆದ ರಾಜ್ಯ ಮಟ್ಟದ ತರಬೇತಿ ಕಾರ್ಯಕ್ರಮದಲ್ಲಿ ಚಿತ್ರಡಾನ್‍ಬೋಸ್ಕೊ ಸಂಸ್ಥೆಯ ವತಿಯಿಂದ ಜಿಲ್ಲಾ ಮಕ್ಕಳ ಒಕ್ಕೂಟದ ಅಧ್ಯಕ್ಷೆ ಅರ್ಪಿತ ಮತ್ತು ಕ್ರೀಮ್ ಸಿಬ್ಬಂದಿ ಭಾಗವಹಿಸಿದ್ದು, ದೇಶಾದ್ಯಂತ ಮಕ್ಕಳಿಗೆ ಸಂಬಂಧಿಸಿದ ಕಾರ್ಯಕ್ರಮ ಇದಾಗಿದೆ. ಬ್ರೆಡ್ಸ್ ಬೆಂಗಳೂರು ಮತ್ತು ವಾದ ನಾ ತೋಡೋ ಸಂಯುಕ್ತಾಶ್ರಯದಲ್ಲಿ ಮಕ್ಕಳ ಒಳಿತಿಗಾಗಿ ಹತ್ತು ಜಿಲ್ಲೆಗಳಲ್ಲಿ ಮಕ್ಕಳಿಗಾಗಿ ಕ್ರೀಮ್ ಎಂಬ ಕಾರ್ಯಕ್ರಮವನ್ನು ಆರು ವರ್ಷಗಳಿಂದಲೂ ನಿರಂತರವಾಗಿ ನಡೆಸಿಕೊಂಡು ಮುನ್ನಡೆಯುತ್ತಿದೆ.
ಶಿಕ್ಷಣ, ಉದ್ಯೋಗ, ಕುಡಿಯುವ ನೀರು ಮತ್ತು ನೈರ್ಮಲ್ಯ, ಆಹಾರ ಭದ್ರತೆ, ಆರೋಗ್ಯ, ಮಹಿಳಾ ಸಬಲೀಕರಣ, ರೈತರು, ದಲಿತರು/ಬುಡಕಟ್ಟು ಜನರು, ಅನಾನುಕೂಲ ಗುಂಪುಗಳು, ಅಲೆಮಾರಿಗಳು, ನಿರಾಕರಿಸಿದ ಸಮುದಾಯಗಳು, ಮಕ್ಕಳು, ಯುವಕರು, ಅಲ್ಪಸಂಖ್ಯಾತರು, ವೃದ್ದರು, ವಿಕಲಾಂಗರು, ಒಂಟಿ ಮಹಿಳೆಯರು ಇವರೆಲ್ಲರಿಗೂ ಭದ್ರತೆ ಸಿಗಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಯಿತು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಿ.ಎನ್.ಮೈಲಾರಪ್ಪ, ಉಪಾಧ್ಯಕ್ಷರಾದ ಆರ್.ಕೆ.ನಾಯ್ಡು, ನಾಗರಾಜ್ ಜಾನ್ಹವಿ, ಎಲ್.ತಿಪ್ಪೇಸ್ವಾಮಿ, ರೆಹಮಾನ್,ದಿಡ್ಡಿಖಾಸಿಂ, ಮಲ್ಲೂರಹಳ್ಳಿ ಎಂ.ಪ್ರಸನ್ನಕುಮಾರ್, ಎಸ್.ಜಿ.ವೇದಾ, ಎಚ್.ಅಸ್ಲಂಭಾಷ, ಇರ್ಫಾನ್, ಹಬೀಬ್, ವೈ.ಮೇಘ, ಕ್ರೀಮ್ ಸಿಬ್ಬಂದಿ ಬಿ.ವೀಣ ಇನ್ನು ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
