ತುಮಕೂರು:
ಇತ್ತೀಚಿನ ದಿನಗಳಲ್ಲಿ ಯುವಜನತೆ ಹೆಚ್.ಐ.ವಿ. ಪೀಡಿತರಾಗುತ್ತಿರುವುದು ಕಾಣುತ್ತಿದ್ದೀವೆ, ಈ ಇತಂಹ ಅರಿವು ಮೂಡಿಸುವ ಕಾರ್ಯಗಳ ನಡೆಯುತ್ತಿವೆ. ಹೆಚ್.ಐ.ವಿ ಮತ್ತು ಏಡ್ಸ್ ತಡೆಗಟ್ಟುವ ಬಗ್ಗೆ ನಾವು ಮಾಹಿತಿಯನ್ನು ತಿಳಿದುಕೊಂಡಿರಬೇಕು ಎಂದು ಶ್ರೀದೇವಿ ವೈದ್ಯಕೀಯ ಸೂಕ್ಷ್ಮಜೀವ ಶಾಸ್ತ್ರದ ಮುಖ್ಯಸ್ಥರಾದ ಡಾ.ಟಿ.ವಿ.ಪರಿಮಳರವರು ತಿಳಿಸಿದರು.
ನಗರದ ಶ್ರೀದೇವಿ ಪ್ಯಾರಮೆಡಿಕಲ್ ವಿಭಾಗದ ವತಿಯಿಂದ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ವಿಭಾಗದ ಸಂಯೋಜನೆಯೊಂದಿಗೆ ಹೆಚ್.ಐ.ವಿ ಮತ್ತು ಏಡ್ಸ್ ಬಗ್ಗೆ ಜಾಗೃತಿ ಅರಿವು ಕಾರ್ಯಕ್ರಮವನ್ನು ಏ.27 ರಂದು ಬೆಳಿಗ್ಗೆ 11 ಗಂಟೆಗೆ ಕಾಲೇಜಿನ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ವಿಷಯ ಸಂಪನ್ಮೂಲ ವ್ಯಕ್ತಿಯಾದ ಹೆಚ್.ಐ.ವಿ ಮತ್ತು ಐ.ಸಿ.ಟಿ.ಸಿ. ಅಧಿಕಾರಿಯಾದ ರಂಗಸ್ವಾಮಿರವರು ಮಾತನಾಡುತ್ತಾ ಹೆಚ್.ಐ.ವಿ ಮತ್ತು ಏಡ್ಸ್ ಒಂದು ವೈರಸ್ಸ್ ಆಗಿರುವ ರೋಗಿಗಳನ್ನು ದಿನೇ ದಿನೇ ರೋಗ ನಿರೋಧಕ ಶಕ್ತಿಯನ್ನು ಕಳೆದುಕೊಳ್ಳುತ್ತೇನೆ, ಅಲ್ಲದೇ ಹೆಚ್.ಐ.ವಿ ಮತ್ತು ಏಡ್ಸ್ ಜೊತೆ ಸಂಕ್ರಾಮಿಕ ರೋಗಗಳು ಅತಿ ಮುಖ್ಯ, ಕ್ಷಯ ರೋಗವು ಸಂಬಂಧಿಸುವುದು ಹೆಚ್ಚು ಆದ್ದರಿಂದ ಎಲ್ಲಾ ಹೆಚ್.ಐ.ವಿ ಮತ್ತು ಏಡ್ಸ್ ರೋಗಿಗಳ ಕ್ಷಯರೋಗ ಪತ್ತೆ ಹಚ್ಚುವುದು ಖಂಡಿತ ಇತಂಹ ಕಾರ್ಯಕ್ರಮಗಳ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕು ಎಂದು ವಿವರಿಸಿದರು.
ಶ್ರೀದೇವಿ ಶಿಕ್ಷಣ ಸಮೂಹ ಸಂಸ್ಥೆಯ ಅಧ್ಯಕ್ಷರಾದ ಡಾ.ಎಂ.ಆರ್. ಹುಲಿನಾಯ್ಕರ್, ಶ್ರೀದೇವಿ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕರಾದ ಎಂ.ಎಸ್. ಪಾಟೀಲ್‍ರವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ಶ್ರೀದೇವಿ ಛಾರಿಟಬಲ್ ಟ್ರಸ್ಟ್‍ನ ಆಡಳಿತಾಧಿಕಾರಿಯಾದ ಟಿ.ವಿ.ಬ್ರಹ್ಮದೇವಯ್ಯ, ಶ್ರೀದೇವಿ ಪ್ಯಾರಾಮೆಡಿಕಲ್ ಪ್ರಾಂಶುಪಾಲರಾದ ಡಾ.ಎಂ.ಸಿ.ಕೃಷ್ಣ, ರಕ್ತನಿಧಿಯ ತಾಂತ್ರಿಕ ಮೇಲ್ವಿಚಾರಕರಾದ ಕೆ.ಲೂಕಸ್, ಸರೋಜಿನಿ, ರಮ್ಯ, ಕಾವ್ಯಅಂಜಲಿ, ಹರ್ಷಿತ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.