ಅಯ್ಯಪ್ಪಸ್ವಾಮಿ ದೇವಸ್ಥಾನ ಲೋಕಾರ್ಪಣೆ

ಶಿಗ್ಗಾವಿ :

       ಭಾರತ ದೇಶ ಮಠ ಮಂದಿರಗಳನ್ನು ಹೊಂದಿದ ವಿಶೇಷ ಮತ್ತು ಪವಿತ್ರ ಪರಂಪರೆಯುಳ್ಳ ದೇಶವಾಗಿದೆ, ನಾವು ದೇವಾಲಯಗಳಿಗೆ ನೀಡಿದ ಮಹತ್ವವನ್ನು ಆತ್ಮವುಳ್ಳ ದೇಹಕ್ಕೂ ನೀಡಬೇಕಿದೆ ಎಂದು ಹಾವೇರಿ ಹುಕ್ಕೇರಿಮಠದ ಸದಾಶಿವ ಮಹಾಸ್ವಾಮಿಗಳು ಹೇಳಿದರು.

          ಪಟ್ಟಣದ ಸಿಲ್ಕ್ ಬೋರ್ಡ ಕಾಲೋನಿಯಲ್ಲಿ ಅಯ್ಯಪ್ಪ ಸ್ವಾಮಿ ಸೇವಾ ಸಮೀತಿ ಶಿಗ್ಗಾವಿ ವತಿಯಿಂದ ಅಯ್ಯಪ್ಪಸ್ವಾಮಿ ದೇವಸ್ಥಾನ ಲೋಕಾರ್ಪಣೆ ಮತ್ತು ಗಣಪತಿ ಶ್ರೀ ಅಯ್ಯಪ್ಪಸ್ವಾಮಿ, ಸುಭ್ರಮಣ್ಯಸ್ವಾಮಿ ನೂತನ ಮೂರ್ತಿಗಳ ಪ್ರಾಣ ಪ್ರತಿಷ್ಟಾಪನಾ ಹಾಗೂ ಕಳಸಾರೋಹಣ ಕಾರ್ಯಕ್ರಮದ ನಂತರ ನಡೆದ ಧರ್ಮಸಭೆಯಲ್ಲಿ ಮಾತನಾಡಿದ ಅವರು, ಆತ್ಮಗಳ ನಡುವೆ ಇರುವ ನಾವು ಜೀವಾತ್ಮರು, ಉತ್ತಮ ಜೀವನ ಸಾಗಿಸಬೇಕಾದರೆ ಧಾರ್ಮಿಕ ಪರಂಪರೆ ಮತ್ತು ಸಂಸ್ಕøತಿ ನಮಗೆ ಬೇಕು ಎಂದ ಅವರು ಎಷ್ಟೇ ದೇವಾಲಯಗಳನ್ನು ಕಟ್ಟಿದರೂ ನಮ್ಮ ನಿಷ್ಟೆ ಮಾತ್ರ ನಮಗಿರಬೇಕು ಮತ್ತು ಭಕ್ತಿಯಿಂದ ಕೂಡಿರಬೇಕು ಹೆಣ್ಣನ್ನು ದೇವರಂತೆ ಕಂಡಂತಹ ದೇಶ ಯಾವುದಾದರೂ ಇದ್ದರೆ ಅದು ಭಾರತ ಎಂದು ಮಾರ್ಮಿಕವಾಗಿ ನುಡಿದರು.

           ಬಂಕಾಪೂರ ಅರಳೆಲೆಮಠದ ರೇವಣಶಿದ್ದೇಶ್ವರ ಶಿವಾಚಾರ್ಯರು ಮಾತನಾಡಿ ನಮ್ಮ ಹುಟ್ಟಿಗೆ ಕಾರಣರಾದ ನಮ್ಮ ತಂದೆ-ತಾಯಿಗಳೇ ನಮಗೆ ಜೀವನದಲ್ಲಿ ದೇವರುಗಳು, ಅವರಿಗೆ ಮೊದಲು ನಮ್ಮ ಶ್ರಮ ಹಾಕಬೇಕು ಅಂದಾಗ ನಮ್ಮ ಜೀವನದ ಫಲ ನಮ್ಮದಾಗುತ್ತದೆ, ಅಂತ:ಕರಣದ ಪ್ರೀತಿಯನ್ನು ತಂದೆತಾಯಿಗಳಿಂದ ಮಾತ್ರ ಪಡೆಯಲು ಸಾದ್ಯ ಎಂದರು.

           ಶಿಗ್ಗಾವಿ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಮಾತನಾಡಿ, ದೇವಿ ಪುರಾಣದಲ್ಲಿ 18 ಅದ್ಯಾಯಗಳಿದ್ದು ಅದೆ ತರನಾಗಿ ಅಯ್ಯಪ್ಪಸ್ವಾಮಿಯ ಸನ್ನಿಧಿಯಲ್ಲಿ 18 ಮೆಟ್ಟಿಲುಗಳಿವೆ ಒಂದೋಂದು ಮೆಟ್ಟಿಲುಗಳೂ ಸಹಿತ ಒಂದೊಂದು ವಿಶೇಷ ಅದ್ಯಾಯವನ್ನು ಹೊಂದಿವೆ ಎಂದು ಮಾರ್ಮಿಕವಾಗಿ ನುಡಿದರು.

           ಗಂಜೀಗಟ್ಟಿ ಮಠದ ವೈಜನಾಥ ಶಿವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಶಬರಿಮಲೈ ಅಯ್ಯಪ್ಪ ಸ್ವಾಮಿ ಸೇವಾ ಸಮಾಜದ ಪ್ರಧಾನ ಕಾರ್ಯದರ್ಶಿ ಎಸ್ ಎನ್ ಕೃಷ್ಣಯ್ಯಸ್ವಾಮಿ, ಶಬರಿಮಲೈ ಅಯ್ಯಪ್ಪ ಸ್ವಾಮಿ ಸೇವಾ ಸಮಾಜದ ಪಿ ಎಮ್ ರಾಜಗುರುಸ್ವಾಮಿ, ಶಾಸಕ ಬಸವರಾಜ ಬೊಮ್ಮಾಯಿ ಮಾತನಾಡಿದರು.

         ಕಾರ್ಯಕ್ರಮದಲ್ಲಿ ಶಿವಾನಂದ ಬಾರ್ಕಿ, ಮಾರುತಿ ಹರಿಹರ, ಆರ್ ಎ ನವೀನಕುಮಾರ, ಅಯ್ಯಪ್ಪ ಸ್ವಾಮಿ ಸೇವಾ ಸಮೀತಿ ಅದ್ಯಕ್ಷ ರಾಮು ಪೂಜಾರ, ಉಪಾದ್ಯಕ್ಷ ಮಂಜುನಾಥ ಬಾಣದ, ಗೌರವಾದ್ಯಕ್ಷ ನಾಗರಾಜ ಬ್ರಹ್ಮಾವರ, ಕಾರ್ಯದರ್ಶಿ ರಾಜು ಅಂಗಡಿ, ಖಜಾಂಚಿ ಚಂದ್ರಶೇಖರ ಗುಂಡಣ್ಣವರ, ನಾಗೇಂದ್ರ ಅಗಡಿ, ರಾಘು ಪಾಲಂಕರ, ರವಿ ಭಜಂತ್ರಿ, ನಾರಾಯಣ ಭಟ್ಟರು, ಮಂಜುನಾಥ ಗಣಪ್ಪನವರ, ಬೀಮಣ್ಣ ಗುರುಸ್ವಾಮಿ ಸೇರಿದಂತೆ ಸಮೀತಿಯ ಸರ್ವ ಸದಸ್ಯರು ಹಾಜರಿದ್ದರು, ಪ್ರೋ. ಎಸ್ ವಿ ಪೂಜಾರ ನಿರೂಪಿಸಿ ವಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link