ಡಾ.ಜಗಜೀವನರಾವ್ ಆದರ್ಶ ತತ್ವಗಳು ಸಮಾಜಕ್ಕೆ ದಾರಿದೀಪ:-ಮಲ್ಲಾನಾಯ್ಕ

ಹಗರಿಬೊಮ್ಮನಹಳ್ಳಿ:

          ಡಾ.ಜಗಜೀವನರಾವ್ ಅವರ ಆದರ್ಶ ಜೀವನ ನಮಗೆಲ್ಲ ದಾರಿದೀಪ, ನಾವು ಅವರ ಸರಳ ಜೀವನವನ್ನು ರೂಢಿಸಿಕೊಳ್ಳಬೇಕು ಎಂದು ತಾ.ಪಂ.ಕಾರ್ಯನಿರ್ವಹಕ ಅಧಿಕಾರಿ ಮಲ್ಲಾನಾಯ್ಕ ತಿಳಿಸಿದರು.

        ಅವರು ಪಟ್ಟಣದ ತಾಲೂಕು ಕಚೇರಿಯಲ್ಲಿ ತಾಲೂಕು ಆಡಳಿತದಿಂದ ಶುಕ್ರವಾರ ಸರಳವಾಗಿ ಹಮ್ಮಿಕೊಂಡಿದ್ದ ಡಾ.ಜಗಜೀವನರಾವ್ ಅವರ ಜನ್ಮದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು. ನಂತರ ರಾಷ್ಟ್ರೀಯ ಹಬ್ಬಗಳ ಸಮಿತಿ ಅಧ್ಯಕ್ಷ ಹಾಗೂ ತಹಸೀಲ್ದಾರ್ ಸಂತೋಷ್ ಕುಮಾರ್ ಅಧ್ಯಕ್ಷತೆ ವಹಿಸಿ ಜಗಜೀವನರಾವ್ ಹಸಿರು ಕ್ರಾಂತಿಕಾರರು, ಅವರು ದೇಶದ ಮತ್ತು ದೀನದಲಿತರ ಬಗ್ಗೆ ಅಪಾರವಾದ ಕಾಳಜಿಯನ್ನು ಹೊಂದಿದ್ದರು. ಅವರ ಜೀವನ ಶೈಲಿಯೇ ನಮಗೆ ದಾರಿ ದೀಪ ಎಂದರು.

        ಮುಖಂಡ ಹೆಗ್ಡಾಳ್ ರಾಮಣ್ಣ, ದುರುಗಪ್ಪ, ಪರಶುರಾಮ್, ಡಾ.ಜಗಜೀವನರಾವ್ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಚ್.ಪ್ರಭು, ಡಿಎಸ್‍ಎಸ್ ಉಮೇಶ್, ದೇವೇಂದ್ರ, ಮಹೇಶ್, ಮೇಘರಾಜ್, ಹನುಮಂತ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ದಿನೇಶ್, ಪಿಡಬ್ಲೂಡಿ ಎಇಇ ಪ್ರಭಕರ ಶೆಟ್ರು, ಸಿಡಿಪಿಒ ಚನ್ನಪ್ಪ, ಕೊಟ್ಟೂರು ಪಟ್ಟಣ ಪಂಚಾಯಿತಿ ಅಧಿಕಾರಿ ಪ್ರಕಾಶ್ ಚನ್ನಪ್ಪನವರ್ , ಬಿ.ಇ.ಒ ಶೇಖರಪ್ಪ ಹೊರಪೇಟೆ, ದೈ.ಶಿಕ್ಷಣಾಧಿಕಾರಿ ನಾಗಭೂಷಣ್, ಕ್ಷೇತ್ರಸಮನ್ವಯಾಧಿಕಾರಿ ಬೋರಯ್ಯ ಸೇರಿದಂತೆ ಮತ್ತಿತರರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link