ಬದುಕಿನ ಯಶಸ್ವಿಗೆ ನಿರಂತರ ಪರಿಶ್ರಮ ಮುಖ್ಯ :- ಪ್ರೋ. ಡಿ. ಸಿ. ಪಾಟೀಲ.

ರಾಣೇಬೆನ್ನೂರ :

       ಸ್ಥಳೀಯ ರಾ.ತಾ.ಶಿ. ಸಂಸ್ಥೆಯ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಾವಿದ್ಯಾಲಯದ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ವಿದ್ಯಾರ್ಥಿ ಒಕ್ಕೂಟದ ಪಠ್ಯೇತರ ಚಟುವಟಿಕೆಗಳ ಸಮಾರೋಪ ಸಮಾರಂಭ ಇಂದು ಅದ್ದೂರಿಯಾಗಿ ಜರುಗಿತು. ಸದರಿ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ್ದ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಸುಭಾಸ. ವಿ. ಸಾವಕಾರ ವರು ಮಾತನಾಡುತ್ತಾ ವಿದ್ಯಾರ್ಥಿಗಳು ಉತ್ತಮ ಜ್ಞಾನವನ್ನು ಸಂಪಾದಿಸಿ ದೇಶಕ್ಕೆ ಕೀರ್ತಿ ತರಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

       ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹೊನ್ನಾಳಿಯ ಸ.ಪ್ರ.ದ. ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಪ್ರೊ : ಡಿ. ಸಿ. ಪಾಟೀಲ ಅವರು ಮಾತನಾಡುತ್ತಾ ‘ಬದುಕಿನ ಯಶಸ್ವಿಗೆ ನಿರಂತರವಾದ ಪರಿಶ್ರಮ ಮುಖ್ಯ, ಭಾಷೆ, ಕಠಿಣ ಪರಿಶ್ರಮ, ಉತ್ತಮ ಗುರಿ ಮತ್ತು ಆತ್ಮವಿಶ್ವಾಸವಿದ್ದರೆ ಬದುಕಿನಲ್ಲಿ ಮಹತ್ತನ್ನು ಸಾಧಿಸಬಹುದು” ಎಂದು ಮಾರ್ಮಿಕವಾಗಿ ನುಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯರಾದ ಪ್ರೊ : ಎಫ್. ಎಚ್. ಮಾಚೇನಹಳ್ಳಿ ಅವರು ಮಾತನಾಡುತ್ತಾ “ವಿದ್ಯಾರ್ಥಿಗಳು ಉತ್ತಮವಾದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು” ಎಂದರು.

       ಸಮಾರಂಭದಲ್ಲಿ ಮೂವರು ಸಾಧಕರಿಗೆ ಸನ್ಮಾನಿಸಲಾಯಿತು. ಪಿ.ಎಚ್.ಡಿ ಪದವಿ ಪಡೆದ ಪ್ರಯುಕ್ತ ಡಾ|| ಪಿ. ಪಿ. ಕೊಪ್ಪದ ಅವರಿಗೆ, ಬಿ.ಎಸ್ಸಿ ಯಲ್ಲಿ ಕ.ವಿ.ವಿ. ಗೆ 5ನೇಯ ರ್ಯಾಂಕ್ ಪಡೆದ ಪ್ರಯುಕ್ತ ಕುಮಾರ ದರ್ಶನ ಎಚ್. ಮುಡದೇವಣ್ಣನವರ ಅವರಿಗೆ ಹಾಗೂ ಸಂಗೀತದಲ್ಲಿ ಸಾಧನೆ ಮಾಡಿದ ಕುಮಾರಿ ರಜನಿ ಕರಿಗಾರ ಅವರಿಗೆ ಮಹಾವಿದ್ಯಾಲಯದಿಂದ ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು.

       ಕು. ರಜನಿ ಪ್ರಾರ್ಥಿಸಿದರು. ಪ್ರೊ : ಆರ್. ಡಿ. ನಾಯಕ ಅವರು ಎಲ್ಲರನ್ನು ಸ್ವಾಗತಿಸಿದರು. ಪ್ರೊ : ಸಿ. ಎ. ಹರಿಹರ ಅವರು ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿ ಒಕ್ಕೂಟದ ಕಾರ್ಯಾಧ್ಯಕ್ಷರಾದ ಡಾ|| ಓ. ಎಫ್. ದ್ಯಾವನಗೌಡರ ಅವರು ವಾರ್ಷಿಕ ವರದಿ ವಾಚಿಸಿದರು. ಕುಮಾರ ಶ್ರೀಧರ ಇ. ಕುಲಕರ್ಣಿ ವಂದಿಸಿದರು. ಕುಮಾರಿ ಫಕ್ಕೀರಮ್ಮ ಕೊಳ್ಳೇರ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಸಮಾರಂಭದಲ್ಲಿ ಎಲ್ಲಾ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಶಿಕ್ಷಕೇತರ ಸಿಬ್ಬಂದಿ ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link