ಬಗರ್ ಹುಕುಂ ಸಾಗುವಳಿ ಪತ್ರ ನೀಡುವಂತೆ ಮನವಿ

ಹೊನ್ನಾಳಿ:

        ಮೆಕ್ಕೆಜೋಳ ಬೆಳೆ ನಷ್ಟ ಪರಿಹಾರ ಕೊಡುವಂತೆ ಬಗರ್ ಹುಕುಂ ಸಾಗುವಳಿ ಪತ್ರ ನೀಡುವಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಉಪತಹಶೀಲ್ದಾರ ಕೆಂಚಮ್ಮ ಅವರಿಗೆ ಕರ್ನಾಟಕ ರಾಜ್ಯ ರೈತ ಸಂಘ ತಾಲೂಕು ಘಟಕ ಹೊನ್ನಾಳಿ ರೈತ ಸಂಘವು ಮನವಿ ನೀಡಿದರು.

        ಕರ್ನಾಟಕ ರಾಜ್ಯ ರೈತ ಸಂಘ ತಾಲೂಕು ಘಟಕ ಹೊನ್ನಾಳಿ ರೈತ ಸಂಘವು ಉಪ ತಹಶೀಲ್ದಾರ ಕೆಂಚಮ್ಮ ಅವರಿಗೆ ಮನವಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಮುಂಗಾರು ಹಂಗಾಮಿನಲ್ಲಿ ರೈತರು ಬೆಳೆದ ಮೆಕ್ಕೆಜೋಳ ಬೆಳೆಗೆ ಸೈನಿಕ ಹುಳು ವ್ಯಾಪಿಸಿಕೊಂಡು ಹಾಕಿದ ಬೆಳೆ ಸಂಪೂರ್ಣ ನಷ್ಟವಾಗಿದೆ ಇದರಿಂದ ರೈತರು ಕಂಗಾಲರಾಗಿದ್ದಾರೆ ಸರ್ಕಾರ ತಕ್ಷಣ ರೈತರಿಗೆ ಪರಿಹಾರ ನೀಡಬೇಕೆಂದರು

         ತಾಲೂಕಿನ ಎಲ್ಲಾ ಹಳ್ಳಿಯ ರೈತರು ತಮ್ಮ ಜಮೀನುಗಳ ಭದ್ರತೆಗೆ ಸರ್ವೇ ಇಲಾಖೆಗೆ ಅಲೆದಾಡುತ್ತಿದ್ದಾರೆ, ಇತರೆ ಇಲಾಖೆಗಳಿಗೆ ರೈತರು ತಮ್ಮ ಸಮಸ್ಯೆಗೆ ಪರಿಹಾರಕ್ಕೆ ತಾಲೂಕು ಆಡಳಿತಕ್ಕೆ ಬಂದರೆ ನೂತನ ತಾಲೂಕಿಗೆ ಕೆಲವು ಸಿಬ್ಬಂದಿಗಳು ವರ್ಗಾ ಮಾಡಿರುವುದರಿಂದ ಕಛೇರಿ ಸಂಭಂದಿಸಿ ಶಾಖೆಗಳಲ್ಲಿ ಸಿಬ್ಬಂದಿ ಕೊರತೆ ಎಂದು ರೈತರಿಗೆ ಇಲ್ಲಸಲ್ಲದ ಸಬೂಬು ಹೇಳುತ್ತಿರುವುದರಿಂದ ರೈತರು ದಿನನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ.

       ತಾಲೂಕಿನಲ್ಲಿ ಸಾವಿರಾರು ರೈತರು ಗುಡ್ಡಗಾಡಿನ ಕೆಳಭಾಗದಲ್ಲಿ ಕಳೆದ 60 ವರ್ಷಗಳಿಂದ ಜಮೀನು ಉಳುಮೆ ಮಾಡುತ್ತಾ ಬಂದಿರುತ್ತಾರೆ ಸರ್ಕಾರದ ಜನಪ್ರತಿನಿದಿಗಳು ಕಂದಾಯ ಇಲಾಖೆ ಇದುವರೆಗೂ ಬಗರ್‍ಹುಕುಂ ಜಮೀನು ಉಳುಮೆದಾರರಿಗೆ ಹಕ್ಕುಪತ್ರ ಮುಂಜಾರತಿ ನೀಡದೆರುವುದರಿಂದ ರೈತರು ಇನ್ನೂ ತೊಂದರೆ ಅನುಭವಿಸುತ್ತದ್ದಾರೆ ಮುಂದಿನ ದಿನಗಳಲ್ಲಿ ಜನಪ್ರತಿನಿದಿಗಳು ಅಧಿಕಾರಿಗಳು ಸೂಕ್ತಕ್ರಮ ತಗೆದುಕೊಳ್ಳುದಿದ್ದರೆ ರೈತ ಸಂಘದಿಂದ ತಾಲೂಕು ಕಛೇರಿ ಮುಂದೆ ಧರಣಿ ಸತ್ಯಗ್ರಹ ಮಾಡಲಾಗುವುದೆಂದು ಎಚ್ಚರಿಸಿದರು.
ಮನವಿ ನೀಡುವ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ತಾಲೂಕು ಘಟಕ ಗೌರಧ್ಯಕ್ಷ ಆರ್.ಕೆ.ಕೃಷ್ಣಮೂರ್ತಿ,ಕಾರ್ಯಧರ್ಶಿ ಓ.ಹಳದಪ್ಪ, ರೈತ ಮುಖಂಡರಾದ ಕೊಣನತಲೆ ನಾಗಪ್ಪ,ಪಿ.ಟಿ.ಪ್ರಕಾಶ್,ಗುರುನಾಥ್,ಯುವರಾಜ್,ಈರಪ್ಪ,ಕುಡಪಲಿ ಈರಪ್ಪ,ಹನುಮಂತಪ್ಪ,ನಾಗಪ್ಪ,ಬೆವಿನಹಳ್ಳಿನಾಗಪ್ಪ, ಸಿರಿಗೆರೆದಾನಪ್ಪ ಸೇರಿದಂತೆ ರೈತರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link