ಭಗತ್ ಸಿಂಗ್ ಹುತಾತ್ಮ ದಿನ ಆಚರಣೆ

ತುಮಕೂರು:

       ಸ್ವಾತಂತ್ರ ಹೋರಾಟದ ಬ್ರಿಟೀಷರ ಪಾಲಿನ ಸಿಂಹಸ್ವಪ್ನವಾಗಿದ್ದ ಭಗತ್ ಸಿಂಗ್ ಅವರು ಮಾರ್ಚ್ 23ರಂದು ಹುತಾತ್ಮರಾದರು, ಈ ದಿನದ ಮಹತ್ವವನ್ನು ಸಾರ್ವಜಿಕರೊಂದಿಗೆ ಹಂಚಿಕೊಳ್ಳಲು ಭಗತ್‍ಸಿಂಗ್‍ರವರ ಕುರಿತ ಸೂಕ್ತಿ ಪ್ರದರ್ಶನವನ್ನು ಎ.ಐ.ಡಿ.ಎಸ್.ಒ ,ಎ.ಐ.ಎಂ.ಎಸ್.ಎಸ್, ಮತ್ತು ಎ.ಐ.ಯು.ಟಿ.ಯು.ಸಿ ಸಂಘಟನೆಗಳು ಜಂಟಿಯಾಗಿ ಅಮಾನಿಕೆರೆಯ ಪ್ರವೇಶದ್ವಾರದ ಬಳಿ ಸಂಜೆ: 5ಗಂಟೆಗೆ ಆಯೋಜಿಸಲಾಗಿತು.

       ಕಾರ್ಯಕ್ರಮದ ಉದ್ಘಾಟನೆ ಭಗತ್‍ಸಿಂಗ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಆರಂಭವಾಯಿತು.ಈ ಕಾರ್ಯಕ್ರಮವನ್ನು ಉದ್ದೇಶಿಸಿ ಎ.ಐ.ಯು.ಟಿ.ಯು.ಸಿ ಕಾರ್ಮಿಕ ಸಂಘಟನೆಯ ಜಿಲ್ಲಾ ಸಂಘಟನಕಾರರಾದ ಕಾ.ಮಂಜುಳ ಗೋನಾವರ ಮಾತನಾಡುತ್ತಾ ಇಂದು ಭಗತ್ ಸಿಂಗ್‍ರ ವಿಚಾರಗಳ ಮಾರ್ಗದರ್ಶನ ನಮ್ಮ ಜನತೆಗೆ ಹೆಚ್ಚು ಅವಶ್ಯಕ, ಜನರು ತಮ್ಮ ಜ್ವಾಲಾಂತ ಸಮಸ್ಯೆಗಳಿಗೆ ಪರ್ಯಾಯ ದಾರಿಗಳನ್ನು ಹುಡುಕುವರೇ ಹೊರತು ಮೂಲ ಕಾರಣ ಹುಡುಕಿ ಸೂಕ್ತ ಪರಿಹಾರದ ಬಗ್ಗೆ ಯೋಚನೆ ಮಾಡುವುದಿಲ್ಲ, ಆದರೆ ಭಗತ್ ಸಿಂಗ್ ವಿಚಾರಗಳು ಸಮಾಜದ ಸಾಮಾಜಿಕ ಸಮಸ್ಯೆಗಳ ಕುರಿತು ವಿಚಾರಗಳನ್ನು, ಮಾರ್ಗದರ್ಶನವನ್ನು ಮತ್ತು ಮಾನವನಿಂದ ಮಾನವನ ಶೋಷಣೆಯ ನಿರ್ಮೂಲನೆಗೆ ಬೇಕಾದ ಹೋರಾಟದ ದಾರಿಯನ್ನು ನೀಡುತ್ತವೆ, ಜನರ ಒಗ್ಗಟ್ಟನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮುಖ್ಯ ಪಾತ್ರವಹಿಸಿವೆ ಮತ್ತು ಭಗತ್‍ಸಿಂಗ್ ವಿಚಾರಧಾರೆ ಎಲ್ಲೆಲ್ಲು ಹರಡಲಿ ಎಂದ ಆಶಿಸಿದರು.

        ಕಾರ್ಯಕ್ರಮದಲ್ಲಿ ಸಾರ್ವಜಿಕರು ಸಕ್ರಿಯವಾಗಿ ಭಾಗವಹಿಸಿದ್ದರು, ಎ.ಐ.ಡಿ.ಎಸ್.ಒ ಸಂಘಟಕಾರರಾದ ಅಶ್ವಿನಿ, ಗಾಯತ್ರಿ, ಲಕ್ಕಪ್ಪ, ತೇಜಸ್ವಿನಿ, ಎ.ಐ.ಎಂ.ಎಸ್.ಎಸ್‍ನ ರತ್ನಮ್ಮ,ಚೈತ್ರ ಮತ್ತು ಎ.ಐ.ಯು.ಟಿ.ಯು.ಸಿ ಯ ಬಸವರಾಜು ಮುಂತಾದವು ಭಾಗವಹಿಸಿದ್ದರು.ಈ ವರದಿಯನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಬೇಕೆಂದು ಮನವಿ ಮಾಡುತ್ತೆವೆ.

 

Recent Articles

spot_img

Related Stories

Share via
Copy link