ಸಮತೋಲನ ಆಹಾರದಿಂದ ಮಾತ್ರ ರಕ್ತ ಹೀನತೆಯಿಂದ ದೂರ

ಹರಿಹರ

      ಶುದ್ಧವಾದ ಗಾಳಿ, ನೀರು, ಸಮತೋಲನ ಆಹಾರವನ್ನು ಸೇವಿಸಿದಾಗ ಮಾತ್ರ ರಕ್ತ ಹೀನತೆಯಿಂದ ದೂರ ಇರಬಹುದು ಎಂದು ಅಪೂರ್ವ ಆಸ್ಪತ್ರೆಯ ವೈದ್ಯರಾದ ಡಾ. ಬಸವರಾಜ್ ಹೇಳಿದರು.

      ತಾಲೂಕಿನ ಜಿಗಳಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ, ಜ್ಞಾನವಿಕಾಸ ಕೇಂದ್ರ ಮತ್ತು ನೋವಾರ್ಟಿಸ್ ಸಂಸ್ಥೆಯ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಸೃಜನಶೀಲ ಕಾರ್ಯಕ್ರಮದ ಅಡಿಯಲ್ಲಿ ಉಚಿತ ರಕ್ತ ಹೀನತೆ ತಪಾಸಣಾ ಮತ್ತು ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

      ರಕ್ತ ಹೀನತೆಯಿಂದಾಗುವ ದುಷ್ಪರಿಣಾಮಗಳು ಮತ್ತು ರಕ್ತ ಹೀನತೆ ಬರಲು ಕಾರಣ, ಮನೆಯಲ್ಲಿ ವೈಯಕ್ತಿಕ ಶುಚಿತ್ವತೆ, ಸುತ್ತಮುತ್ತಲಿನ ವಾತಾವರಣವು ಸ್ವಚ್ಛತೆ ಇಲ್ಲದೆ ಹಾಗೂ ನಾವು ಸೇವನೆ ಮಾಡುವಂತಹ ಆಹಾರದಲ್ಲಿ ಪ್ರೋಟೀನ್ ಅಂಶಗಳು ಇಲ್ಲದೇ ಇರುವಾಗ ಅನೇಮಿಯಾ ಎಂಬುದು ಕಂಡುಬರುತ್ತದೆ, ಅದಕ್ಕೆ ಶುದ್ದಗಾಳಿ ,ನೀರು, ಸಮತೋಲನ ಆಹಾರವನ್ನು ಸೇವಿಸಿದಾಗ ಮಾತ್ರ ರಕ್ತಹೀನತೆಯಿಂದ ದೂರ ಇರಬಹುದು ಎಂದು ಮಾಹಿತಿಯನ್ನು ನೀಡಿದರು.

      ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ 150 ಜನ ಜಿಗಳಿ ಗ್ರಾಮಸ್ಥರಿಗೆ ಹಿಮೊಗ್ಲೋಬಿನ್ ಟೆಸ್ಟ್ ಮಾಡಿಸಿ, ಅದರಲ್ಲಿ 35 ಜನ ಸದಸ್ಯರಿಗೆ ರಕ್ತಹೀನತೆ ಕಂಡುಬಂದಿದ್ದು, ಆ 35 ಜನ ಸದಸ್ಯರಿಗೆ ಉಚಿತ ಮೆಡಿಸಿನ್ ವಿತರಣೆ ಮಾಡಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸ್ಥಳೀಯ ವೈದ್ಯರಾದ ನಾಗರಾಜ್, ಎಸ್.ಕೆ.ಡಿ.ಆರ್.ಡಿ.ಪಿ ಯೋಜನಾಧಿಕಾರಿಗಳಾದ ರಾಘವೇಂದ್ರ.ಬಿ, ನೋವಾರ್ಟಿಸ್ ಆರೋಗ್ಯ ಪರಿವಾರದ ಯೋಜನಾಧಿಕಾರಿ ಎ.ಬಿ. ಆದಿಮನಿ, ಜೆ.ವಿ.ಕೆ ಕೇಂದ್ರದ ಅಧ್ಯಕ್ಷರಾದ ಶ್ರೀಮತಿ ಸರೋಜಮ್ಮ, ಒಕ್ಕೂಟದ ಅಧ್ಯಕ್ಷರಾದ ವಿಜಯ ಭಾಸ್ಕರ ಮತ್ತು ರುದ್ರಗೌಡ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕಿಯಾದ ಶ್ರೀಮತಿ ಭಾಗ್ಯ, ಆರೋಗ್ಯ ಪರಿವಾರದ ಮೇಲ್ವಿಚಾರಕಿ ಶ್ರೀಮತಿ ಸೀತಾ ಜ್ಞಾನವಿಕಾಸ ಸಮನ್ವಯಾಧಿಕಾರಿ ಶ್ರೀಮತಿ ರೇಖಾ, ಮೇಲ್ವಿಚಾರಕರಾzದ ಗದಿಗೇಶ ಹಾಗೂ ಸೇವಾಪ್ರತಿನಿಧಿಯಾದ ಶ್ರೀಮತಿ ಶೋಭಾ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap