ಮಿತ ನಿದ್ರಾಹಾರ ಸಿದ್ಧಗಂಗಾಶ್ರೀಗಳ ಆರೋಗ್ಯದ ಗುಟ್ಟು

ಹುಳಿಯಾರು:

    ತ್ರಿವಿಧ ದಾಸೋಹಿ ಡಾ.ಶಿವಕುಮಾರಸ್ವಾಮೀಜಿ ಅವರ ಆರೋಗ್ಯ ಮತ್ತು ಆಯಸ್ಸಿನ ಗುಟ್ಟು ಮಿತ ನಿದ್ರಾಹಾರವಾಗಿದ್ದು ಈ ವಿಚಾರವನ್ನು ಅವರೇ ನಮಗೆ ತಿಳಿಸಿದ್ದರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ತಿಳಿಸಿದರು.

    ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಶಾಲಾ ವಾರ್ಷಿಕೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸಿದ್ಧಗಂಗಾಶ್ರೀಗಳಂತೆ ಸಾಧಕರೂ ಸಹ ಊಟ ಮತ್ತು ನಿದ್ರೆಯನ್ನು ಕಡಿಮೆ ಮಾಡುತ್ತಾರೆ. ವಿದ್ಯಾರ್ಥಿಗಳು ಇದನ್ನು ಅನುಸರಿಸಿದರೆ ಶೈಕ್ಷಣಿಕ ಸಾಧನೆ ಸುಲಭಸಾಧ್ಯ ಎಂದರಲ್ಲದೆ ಶಿಸ್ತು ಮತ್ತು ಶಿಕ್ಷಣ ಎರಡೂ ಆರಂಭದಲ್ಲಿ ಕಷ್ಟ, ನಂತರ ಖುಷಿ ಮತ್ತು ನೆಮ್ಮದಿಯನ್ನು ಕೊಡುತ್ತದೆ ಎಂದರು.

    ಬೆಟ್ಟದ ಕೆಳಗೆ ನಿಂತು ನೋಡಿದರೆ ಬೆಟ್ಟ ಬೃಹದಾಕಾರವಾಗಿ ಕಾಣುತ್ತದೆ. ಬೆಟ್ಟ ಹತ್ತಿದರೆ ಅದು ನಮ್ಮ ಕಾಲಡಿಯಲ್ಲಿ ಇರುತ್ತದೆ. ಹಾಗಾಗಿ ಪರೀಕ್ಷೆ ಎಂದು ಭಯ ಪಟ್ಟುಕೊಳ್ಳದೆ ಅಂದಿನ ಪಾಠವನ್ನು ಅಂದೇ ಅರ್ಥ ಮಾಡಿಕೊಂಡು ಓದಿದರೆ ಪರೀಕ್ಷೆಯ ಭಯ ಕಾಡುವುದಿಲ್ಲ ಎಂದರು.

   ಕೆಟ್ಟದ್ದು ಆ ಕ್ಷಣ ಖುಷಿ ಕೊಡುತ್ತದಾದರೂ ನಂತರದ ದಿನಗಳಲ್ಲಿ ಕೆಟ್ಟದನ್ನು ಮಾಡಿದೆನಲ್ಲ ಎನ್ನುವ ಪಾಪಪ್ರಜ್ಞೆ ಕಾಡುತ್ತಿರುತ್ತದೆ. ಹಾಗಾಗಿ ವಿದ್ಯಾರ್ಥಿ ಜೀವನದಲ್ಲೇ ಒಳ್ಳೆಯದನ್ನು ಮಾಡುವ ಗುಣ ಬೆಳಸಿಕೊಳ್ಳಿ. ಈ ನಿಟ್ಟಿನಲ್ಲಿ ನಿಮ್ಮ ಮನಸ್ಸು ನಿಮ್ಮ ಒಳ್ಳೆಯ ಸ್ನೇಹಿತ. ನೀವು ಕೆಟ್ಟದನ್ನು ಮಾಡುವಾಗ ಅದು ಬೇಡ ಎಂದು ಎಚ್ಚರಿಸುತ್ತದೆ. ಆ ಸಂದರ್ಭದಲ್ಲಿ ಮನಸಸ್ಸಿನ ಮಾತು ಕೇಳಿ ಎಂದರು.

   ಕಸಾಪ ನಿಖಕಪೂರ್ವ ಅಧ್ಯಕ್ಷ ಎಂ.ಎಸ್.ರವಿಕುಮಾರ್, ಜಿಲ್ಲಾ ಪಂಚಾಯ್ತಿ ಸದಸ್ಯ ವೈ.ಸಿ.ಸಿದ್ಧರಾಮಯ್ಯ, ಗ್ರಾಪಂ ಅಧ್ಯಕ್ಷೆ ಆಶಾಉಮೇಶ್, ತಾಪಂ ಮಾಜಿ ಅಧ್ಯಕ್ಷ ಕೆಂಕೆರೆ ನವೀನ್, ಸೀತರಾಮಯ್ಯ, ತಾಪಂ ಮಾಜಿ ಸದಸ್ಯ ವಸಂತಯ್ಯ, ಪ್ರಾಚಾರ್ಯ ಪ್ರಸನ್ನಕುಮಾರ್, ಉಪಪ್ರಾಂಶುಪಾಲರಾದ ಇಂದಿರಾ, ಕಾಲೇಜು ಅಭಿವೃದ್ಧಿ ಸಮಿತಿಯ ಎಂಎಸ್‍ಆರ್ ನಟರಾಜು, ಎಚ್.ಟಿ.ದಾಸಪ್ಪ, ದುರ್ಗಯ್ಯ, ಹೇಮಂತ್ ಮತ್ತಿತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link