ಶಿಗ್ಗಾವಿ
ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಉಳುಮೆ ಮಾಡುತ್ತಿರುವ ರೈತ, ವಿದ್ಯುತ್ ಕಂಬಗಳ ತಂತಿಗಳು ರೈತನ ಕೈಗೆಟುಕುವ ರೀತಿ, ಅಕಸ್ಮಾತ್ ವಿದ್ಯುತ್ ತಂತಿ ತಗುಲಿ ರೈತನಿಗೆ ವಿದ್ಯುತ್ ಅವಘಡ ಸಂಬವಿಸಿದರೆ ಯಾರು ಹೊಣೆ ?
ಇದು ತಾಲೂಕಿನ ಎನ್ ಎಮ್ ತಡಸ್ ಮತ್ತು ತಿಮ್ಮಾಪೂರಕ್ಕೆ ಹೊಗುವ ದಾರಿಯಲ್ಲಿ ಕಂಡು ಬರುವ ದುಸ್ಥಿತಿ, ಹಲವಾರು ಭಾರಿ ಮನವಿ ಮಾಡಿದರೂ ಕ್ಯಾರೆ ಎನ್ನದ ಹೆಸ್ಕಾಂ ಅಧಿಕಾರಿಗಳು, ಇದು ತಾಲೂಕಿನಾದ್ಯಂತ ಸರ್ವೇ ಸಾಮಾನ್ಯವಾಗಿದೆ ಜಮೀನುಗಳಲ್ಲಿ ಉಳುಮೆ ಮಾಡುವ ರೈತ ಜೀವವನ್ನು ಕೈಯಲ್ಲಿ ಹಿಡಿದು ಬಿತ್ತುವ ಸ್ಥಿತಿ ಸಾಮಾನ್ಯವಾಗಿದೆ, ಸಂಬಂದಿಸಿದ ತಾಲೂಕಾ ಪಂಚಾಯತಿ ಸದಸ್ಯರು ಇತ್ತ ಗಮನ ಹರಿಸದಿರುವದೂ ಸಹಿತ ಆ ಭಾಗದ ರೈತರ ಆಕ್ರೋಷಕ್ಕೆ ಕಾರಣವಾಗಿದೆ.
ಇದು ಕೇವಲ ಎನ್ ಎಮ್ ತಡಸ್ ಮತ್ತು ತಿಮ್ಮಾಪೂರದ ಗ್ರಾಮಗಳ ರೈತರ ಸ್ಥಿತಿಯಲ್ಲ ತಾಲೂಕಿನಾದ್ಯಂತ ಹಲವಾರು ಗ್ರಾಮಗಳ ರೈತರ ಜಮಿನುಗಳಲ್ಲಿ ವಿದ್ಯುತ್ ಕಂಬಗಳು ಅಪಾಯದ ಅಂಚಿನಲ್ಲಿವೆ, ಅಧಿಕಾರಿಗಳು ಮಾತ್ರ ಎಲ್ಲವೂ ಸರಿಯಾಗಿದೆ, ಈ ಬಗ್ಗೆ ಗಮನಕ್ಕೆ ಬಂದಿಲ್ಲ, ಕ್ರಮ ಜರುಗಿಸುತ್ತೆವೆ ಎಂಬ ಡೈಲಾಗ್ ಹೊಡೆಯುತ್ತಾರೆ ವಿನಃ ಅನಾಹುತಗಳಾಗುವ ಮೊದಲೆ ಎಚ್ಚೆತ್ತುಕೊಳ್ಳುವ ಅಧಿಕಾರಿಗಳು ಕಾಣಸಿಗುತ್ತಿಲ್ಲ ಇದು ಒಳ್ಳೆಯ ಬೆಳವಣಿಗೆಯೇ ? ಎಂಬ ಪ್ರಶ್ನೆ ತಾಲೂಕಿನ ಪ್ರಜ್ಞಾವಂತರಲ್ಲಿ ಕಾಡುತ್ತಿದೆ. ಈಗಾಗಲೇ ಅನೇಕ ಅವಗಡಗಳು ಸಂಭವಿಸಿ ರೈತರ ಎತ್ತುಗಳು ಹಾಗೂ ರೈತರು ಮತ್ತು ಪ್ರಾಣಿಗಳು ಪ್ರಾಣ ಕಳೆದುಕೊಂಡ ಉದಾಹರಣೆಗಳು ಕಣ್ಣುಮುಂದಿವೆ.
ಪರಿಹಾರ ಸಿಕ್ಕಿಲ್ಲ
ಇನ್ನು ತಾಲೂಕಿನ ಜಮಿನುಗಳಲ್ಲಿಯ ವಿದ್ಯುತ್ ಸಮಸ್ಯಗಳು ಒಂದೆಡೆಯಾದರೆ ಪಟ್ಟಣದ ಕೆಲ ನಗರಗಳಲ್ಲಿ ಹೆಸ್ಕಾಂನ ಬೆಜವಾಬ್ದಾರಿಯಿಂದ ಮನೆಗಳಲ್ಲಿಯ ಟಿವ್ಹಿ, ಫ್ರಿಡ್ಜ, ಫ್ಯಾನ್, ಮಿಕ್ಸರ್, ವಾಸಿಂಗ್ ಮಷಿನ್ ಸೇರಿದಂತೆ ಮನೆಯಲ್ಲಿ ವಿದ್ಯುತ್ ಬಳಕೆಯ ಸಾಮಗ್ರಿಗಳು ಸುಟ್ಟು ಲಕ್ಷಾಂತರ ರೂಗಳ ಹಾನಿಯಾಗಿ ಹೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹಾನಿಯ ನಷ್ಟವನ್ನು ತುಂಬಿಕೊಡುವ ಭರವಸೆ ನೀಡಿದ್ದರೂ ಇಲ್ಲಿಯವರೆಗೂ ಪರಿಹಾರ ಬಂದ ಉದಾಹರಣೆಗಳೇ ಇಲ್ಲ, ಇದರಿಂದ ಸಾರ್ವಜನಿಕರೂ ಸಹಿತ ಆಕ್ರೋಷಗೊಂಡಿದ್ದು ಹೆಸ್ಕಾಂ ಇಲಾಖೆಗೆ ಅಲೆದಾಡುತ್ತಿದ್ದಾರೆ.
ಒಟ್ಟಾರೆ ರೈತರ ನೆರವಿಗೆ ಬಾರದ ಹೆಸ್ಕಾಂ ಇಲಾಖೆ, ಇನ್ನಾದರೂ ತಾಲೂಕಿನಾದ್ಯಂತ ರೈತರ ಜಮಿನುಗಳಲ್ಲಿ ತೊಂದರೆ ನೀಡುತ್ತಿರುವ ವಿದ್ಯುತ್ ಕಂಬಗಳ ಸಮಿಕ್ಷೆಯನ್ನು ಮಾಡಿ ಕ್ರಮ ಜರುಗಿಸುವ ಜೊತೆಗೆ ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷದಿಂದ ಪಟ್ಟಣದ ವಿವಿದ ನಗರಗಳಲ್ಲಿ ಆದ ಹಾನಿಯನ್ನು ಮೇಲಾಧಿಕಾರಿಗಳಿಗೆ ವರದಿ ನೀಡಿ ಆದ ನಷ್ಟವನ್ನು ತುಂಬಿಕೊಡುವರೋ ಕಾದು ನೋಡಬೇಕಿದೆ.