ಮಳವಳ್ಳಿ ಯಿಂದ ಪಾವಗಡ ಹೆದ್ದಾರಿಯಲ್ಲಿನ ಟೋಲ್ ರದ್ಧುಗೊಳಿಸುವಂತೆ ಆಗ್ರಹ

ಮಧುಗಿರಿ:

       ವಿಶ್ವ ಬ್ಯಾಂಕ್ ಹಾಗೂ ಎಡಿಬಿ ಅನುದಾನದಲ್ಲಿ ಇತ್ತೀಚೆಗೆ ಮಳವಳ್ಳಿ ಯಿಂದ ಪಾವಗಡದ ವರೆವಿಗೆ ರಾಜ್ಯ ಹೆದ್ದಾರಿ-33ರಲ್ಲಿ ಕೆಶಿಫ್ ರಸ್ತೆಯನ್ನು ನಿರ್ಮಿಸಿದೆ ಆದರೆ ಇದೂವರೆವಿಗೂ ಸರ್ವಿಸ್ ರಸ್ತೆಯನ್ನು ನಿರ್ಮಿಸಿದೆ ಶುಲ್ಕ ವಸೂಲಾತಿ ಮಾಡಲು ಮುಂದಾಗಿರುವ ಸರಕಾರದ ವಿರುದ್ದ ಜಯಕರ್ನಾಟಕ ಸಂಘಟನೆ ಪದಾಧಿಕಾರಿಗಳು ಮಧುಗಿರಿ ಉಪವಿಭಾಗಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

         ಮಧುಗಿರಿ ಸುತ್ತ ಮುತ್ತಲಿನ ಪ್ರದೇಶವು ಬರಪೀಡಿತ ಪ್ರದೇಶವಾಗಿದೆ ಇಂತಹ ಸಂಧರ್ಭದಲ್ಲಿ ದೊಡ್ಡ ಮಾವತ್ತೂರು ಮತ್ತು ಓಬಳಾಪುರ ಗ್ರಾಮವು ಸೇರಿದಂತೆ ಮಳವಳ್ಳಿ ಮದ್ದರೂ ಕೊರಟಗೆರೆಯ ಬಳಿ ರಸ್ತೆ ಶುಲ್ಕ ಸಂಗ್ರಹಿಸಲು ಕೆ.ಆರ್.ಡಿ.ಎಲ್ ಸಂಸ್ಥೆಯ ಟೆಂಡರ್ ಪ್ರಕ್ರಿಯೆನ್ನು ಆರಂಭಿಸಿದೆ. ಸ್ಥಳೀಯ ರೈತರು ನಿತ್ಯವು ಮಾರುಕಟ್ಟೆಯೂ ಸೇರಿದಂತೆ ಮತ್ತಿತರರ ಕೆಲಸ ಕಾರ್ಯಗಳಿಗೆ ತೆರಳು ವಾಹನ ಅವಲಂಬಿಸ ಬೇಕಾಗುತ್ತದೆ ಟೋಲ್ ಸಂಗ್ರಹದಿಂದ ರೈತರಿಗೆ ಅನಾನೂಕಲವಾಗುತ್ತದೆ ಎಂದು ಸಂಘಟನೆಯ ಪ್ರಮುಖರು ಆರೋಪಿಸಿ ಪ್ರಕ್ರಿಯೆಯಿಂದ ತಕ್ಷಣ ಹಿಂದೆ ಸರಿಯಬೇಕೆಂದು ಆಗ್ರಹಿಸಿದ್ದಾರೆ.

        ಇದೇ ಸಂದರ್ಭದಲ್ಲಿ ಜಯ ಕರ್ನಾಟಕ ಅಧ್ಯಕ್ಷಚಂದನ್, ಕಾರ್ಯಾಧ್ಯಕ್ಷ ತಿಮ್ಮರಾಜು, ರಾಘವೇಂದ್ರ, ಸುರೇಶ್, ರಾಜಣ್ಣ, ಕಾಂತರಾಜು, ಭರತ್, ಶ್ರೀನಿವಾಸ್ ಚಿಕ್ಕರಾಮಯ್ಯ, ಅಭಿಷೇಕ್, ರಘು ಎಂ.ಜಿ. ಆಶೋಕ್ ದರ್ಶನ್, ರಾಹುಲ್, ಸುಧೀರ್ ಕೆಂಪರಾಜು ಯೋಗೇಶ್ ಭರತ್ ಇತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link