ಮಧುಗಿರಿ
ಬಾಳೆ ಬೆಳೆಗೆ ಬೆಂಕಿ ರೋಗ ತಗುಲಿದ್ದರಿಂದ ರೈತನೊಬ್ಬ ಮನನೊಂದು ತಾನು ಬೆಳೆದ ಬೆಳೆಯನ್ನು ನಾಶ ಮಾಡಿದ್ದಾರೆ. ತಾಲ್ಲೂಕಿನ ಐಡಿ ಹಳ್ಳಿ ಹೋಬಳಿಯ ದಾದಗೊಂಡನಹಳ್ಳಿ ತಾಂಡದ ರೈತ ಸುಬ್ಬರಾಯಪ್ಪ ಸುಮಾರು ಮೂರು ಲಕ್ಷ ರೂ. ವೆಚ್ಚ ಮಾಡಿ ತನ್ನ ಒಂದು ಎಕರೆ ಜಮೀನಿನಲ್ಲಿ ಬಾಳೆ ಬೆಳೆಯನ್ನು ಬೆಳೆದಿದ್ದ ಇನ್ನೇನು ಫಸಲು ಬಿಡುವ ವೇಳೆಯಲ್ಲಿ ಬಾಳೆ ಬೆಳೆಗೆ ಬೆಂಕಿ ರೋಗ ತಗುಲಿದೆ.
ಈ ಮೊದಲು ಖರೀದಿದಾರರು ಸ್ಥಳಕ್ಕೆ ಬಂದು ಬಾಳೆಕಾಯಿಗೆ ಬೆಲೆ ನಿಗದಿಪಡಿಸಿ ಬಾಳೆಯನ್ನು ತೆಗೆದುಕೊಂಡು ಹೋಗುತ್ತಿದ್ದರು. ಆದರೆ ಈಗ ರೋಗ ತಗುಲಿದೆ. ಔಷಧಿ ಸಿಂಪಡಣೆಯ ವೆಚ್ಚವು ಹೆಚ್ಚಾಗುತ್ತದೆ. ಬೆಳೆಯ ಇಳುವರಿ ಬರುವುದಿಲ್ಲ. ಆದ್ದರಿಂದ ಮನ ನೊಂದ ರೈತ ಭಾನುವಾರ ಮಧ್ಯಾಹ್ನದ ವೇಳೆಯಲ್ಲಿ ತಾನು ಬೆಳೆದ ಬೆಳೆಯನ್ನು ನಾಶ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
