ಚಿತ್ರದುರ್ಗ;
ಅರಣ್ಯ,ಬಗರ್ ಹುಕುಂ ಸಾಗುವಳಿ ಭೂಮಿಗಳ ಹಕ್ಕು ಪತ್ರ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ಬಂಜಾರ ಜನಜಾಗೃತಿ ಅಭಿಯಾನ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಶ್ರೀನೀಲಕಂಠೇಶ್ವರ ದೇವಸ್ಥಾನದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆಯು ಸರ್ಕಾರ ಮತ್ತು ತಾಲ್ಲೂಕು ಆಡಳಿತದ ಅಧಿಕಾರಿಗಳ ವಿರುದ್ದ ಘೋಷಣೆಗಳನ್ನು ಕೂಗಿದ ಹೋರಾಟಗಾರರು ಬಗರ್ ಹುಕುಂ ಸಾಗುವಳಿ ಮತ್ತು ಅರಣ್ಯ ಭೂಮಿಗಳ ಹಕ್ಕು ಪತ್ರಗಳನ್ನು ನೀಡಬೇಕೆಂದು ಒತ್ತಾಯಿಸಿದರು.
ಚಿತ್ರದುರ್ಗ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ,ವರ್ಗದವರೇ ಹೆಚ್ಚಾಗಿ ವಾಸವಾಗಿದ್ದು. ಸರ್ಕಾರಿ ಗೋಮಾಳ, ಹುಲ್ಲು ಬನ್ನಿ ಕಾರಬು,ಅರಣ್ಯ ಭೂಮಿಗಳಲ್ಲಿ ಸುಮಾರು ನೂರಾರು ವರ್ಷಗಳಿಂದ ಉಳಿಮೆ ಮಾಡಿಕೊಂಡು ಬಂದಿದ್ದು ಸರ್ಕಾರ ಪ್ರತಿಭಾರಿಯೂ ಒಂದೊಂದು ಹೊಸ,ಹೊಸ ಕಾನೂನುಗಳನ್ನು ಜಾರಿಮಾಡುವ ಮೂಲಕವಾಗಿ ರೈತರು, ಕೂಲಿಕಾರ್ಮಿಕರು, ಭೂಮಿ ಉಳುಮೆದಾರರಿಗೆ ಹಕ್ಕು ಪತ್ರ ನೀಡುವಲ್ಲಿ ಅನಗತ್ಯ ವಿಳಂಭ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಘೋಷಣೆಗಳನ್ನು ಕೂಗಿದರು.
ಜಿಲ್ಲೆಯ ಆರು ತಾಲ್ಲೂಕಿನಲ್ಲೂ ಪರಿಶಿಷ್ಟ ಜಾತಿ,ವರ್ಗ ಮತ್ತು ಅಲ್ಪಸಂಖ್ಯಾತ ಜನರು ಸರ್ಕಾರಿ ಗೋಮಾಳ ಭೂಮಿಯಲ್ಲಿ ಉಳುಮೆ ಮಾಡಿಕೊಂಡಿದ್ದು. ಅಧಿಕಾರಿಗಳು ಹಕ್ಕು ಪತ್ರ ನೀಡುವಲ್ಲಿ ಮೀನಾಮೇಷ ಎಣಿಸುತ್ತಿದ್ದಾರೆಂದು ಪ್ರತಿಭಟನೆಯ ನೇತೃತ್ವವನ್ನು ವಹಿಸಿದ್ದ ಜನಪರ ಹೋರಾಟಗಾರ ನರೇನಹಳ್ಳಿ ಅರುಣ್ ಕುಮಾರ್ ಆರೋಪಿಸಿದರು.
ಇತ್ತೀಚೆಗೆ ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಹೊಸ ಸುತ್ತೋಲೆಯನ್ನು ಬಿಡುಗಡೆಗೊಳಸಿದ್ದು. ಇದೂವರೆಗೆ ನೀಡಲಾಗಿದ್ದ ಫಾರಂ ನಂ 50 ಮತ್ತು 53 ರನ್ನು ಹೊರತು ಪಡಿಸಿ ಈಗ ಹೊಸದಾಗಿ ಫಾರಂ ನಂ 57ರಲ್ಲಿ ಹೊಸದಾಗಿ ಅರ್ಜಿಗಳನ್ನು ಭೂಮಿ ಉಳುಮೆದಾರರಿಂದ ಪಡೆದುಕೊಂಡು ಮಾರ್ಚ್‍ತಿಂಗಳೊಳಗೆ ವಿಲೇವಾರಿ ಮಾಡಬೇಕೆಂದು ಸಲಹೆ ನೀಡಲಾಗಿದ್ದರು ಅಧಿಕಾರಿಗಳು ಕಾರ್ಯಾಪ್ರವೃತ್ತರಾಗಿಲ್ಲ ಎಂದು ಆರೋಪಿಸಿರು.
ತಾಲ್ಲೂಕಿನ ಬೇವಿನಹಳ್ಳಿ,ಪಂಜಯ್ಯನಹಟ್ಟಿ,ಬಹದ್ದೂರ್ ಘಟ್ಟ,ಎಮ್ಮನಗಟ್ಟೆ,ಸುಲ್ತಾನಿಪುರ,ಆರಭಗಟ್ಟ,ಇಸಾಮುದ್ರ ಗೊಲ್ಲರಹಟ್ಟಿ,ಸೇರಿದಂತೆ ಹೊಳಲ್ಕೆರೆ ತಾಲ್ಲೂಕಿನ ಲಂಬಾಣಿ ತಾಂಡಗಳಿಂದ ಬಂದಿದ್ದ ಜನರು ಎಪ್ಪತ್ತು ವರ್ಷಗಳಿಂದ, ತಲೆತಲೆಮಾರುಗಳಿಂದ ಭೂಮಿಯನ್ನು ಉಳುಮೆಮಾಡಿಕೊಂಡು ಬರಲಾಗಿದ್ದು. ಹಲವು ವರ್ಷಗಳಿಂದ ತಾಲ್ಲೂಕು ಕಛೇರಿಗೆ ಅರ್ಜಿ ಸಲ್ಲಿಸುತ್ತಿದ್ದರು. ಭೂಮಿಯ ಹಕ್ಕು ಪತ್ರ ನೀಡುವಲ್ಲಿ ವಿಳಾಂಭವಾಗುತ್ತಿದೆ ಎಂದು ದೂರಿದರು.
ಕರ್ನಾಟಕ ಬಂಜಾರ ಜನಜಾಗೃತಿ ಅಭಿಯಾನ ಸಮಿತಿ ಪ್ರಧಾನ ಕಾರ್ಯದರ್ಶಿ ಆರ್. ನಿಂಗಾನಾಯಕ್ ಮಾತನಾಡಿ ಅರಣ್ಯ,ಬಗರ್ ಹುಕುಂ ಸಾಗುವಳಿ ಭೂಮಿಯನ್ನು ಜಿಲ್ಲೆಯ ಜನರು ನೂರಾರು ವರ್ಷಗಳಿಂದ ಉಳುಮೆ ಮಾಡಿಕೊಂಡು ಬಂದಿದ್ದು. ಅಧಿಕಾರಿಗಳು ಜಮೀನು ಹಕ್ಕು ಪತ್ರ ನೀಡುವಲ್ಲಿ ವಿಳಾಂಬ ಮತ್ತು ತಾರತಮ್ಯ ಮಾಡುತ್ತಿದ್ದು. ಜನರು ಬೀದಿಗಿಳಿದು ಹೋರಾಟದ ಮಾರ್ಗವೊಂದನ್ನು ಹಿಡಿಯಲ್ಲಿದ್ದಾರೆ ಎಂದು ಎಚ್ಚರಿಸಿದರು.
ಕರ್ನಾಟಕ ಬಂಜಾರ ಜನಜಾಗೃತಿ ಅಭಿಯಾನ ಸಮಿತಿ ನೇತೃತ್ವದಲ್ಲಿ ಹಲವು ಭಾರಿ ಹಕ್ಕು ಪತ್ರಕ್ಕಾಗಿ ಒತ್ತಾಯಿಸಲಾಗಿದ್ದು.ತಾಲ್ಲೂಕು ಆಡಳಿತದ ನಿರ್ಲಕ್ಷ್ಯ ಧೋರಣೆಯಿಂದಾಗಿ ಸಾಗುವಳಿದಾರರಿಗೆ ಹಕ್ಕು ಪತ್ರ ದೊರೆತ್ತಿಲ್ಲ ಎಂದರು.
ಬಗರ್ ಹುಕುಂ ಸಾಗುವಳಿದಾರಿಗೆ ಫಾರಂ ನಂ 57 ರಲ್ಲಿ ಹೊಸದಾಗಿ ಅರ್ಜಿಗಳನ್ನು ಪಡೆದು ಭೂಮಿ ಮಂಜೂರಾತಿ ನೀಡಬೇಕು,ಮಾರ್ಚ್ ತಿಂಗಳೊಳಗಾಗಿ ವಿಲೇವಾರಿ ಮಾಡಬೇಕು ಅಧಿಕಾರಿಗಳು ಹೇಳುತ್ತಿರುವಂತೆ ಅನ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವಂತೆ ಸಾಗುವಳಿದಾರರಿಗೆ ದಿಕ್ಕು ತಪ್ಪಿಸುತ್ತಿರವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಚಳ್ಳಕೆರೆ ಟೋಲ್‍ಗೇಟ್ ಬಳಿ ಇರುವ ಪೆಟ್ರೋಲ್ ಬಂಕ್ ನ್ನು ತೆರೆವುಗೊಳಿಸಿ ರಾಜಕಾಲುವೆಯಲ್ಲಿ ಮಳೆ ನೀರು ಸರಾಗವಾಗಿ ಹರಿಯಲು ಅನುವು ಮಾಡಿಕೊಬೇಕು ಹಾಗೂ ಗ್ರಾಮೀಣ ಪ್ರದೇಶ ಜನರಿಗೆ ಅನ್ನಭಾಗ್ಯ,ವಂಚಿತ ಕೂಲಿ,ಕಾರ್ಮಿಕರಿಗೆ ಪಡಿತರ ಚೀಟಿ ಸಕಾಲಕ್ಕೆ ದೊರೆಯುವಂತೆ ಜಿಲ್ಲಾಡಳಿತ ಸೂಚನೆ ನೀಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಹೊಳಲ್ಕೆರೆ ತಾಲ್ಲೂಕು ಬಂಜಾರ ಸಂಘದ ಅಧ್ಯಕ್ಷ ಚಂದ್ರನಾಯಕ್,ಹಾಲೇಶ್ ನಾಯ್ಕ,ಗಣೇಶ್ ನಾಯ್ಕ, ಸೀನನಾಯಕ್ ಸೈನನಾಯ್ಕ,ಬಸವರಾಜನಾಯ್ಕ,ಮಹೇಶ್ ನಾಯ್ಕ,ಲಿಂಗೇಶ್ ನಾಯ್ಕ,ನಾಗರಾಜ್‍ನಾಯ್ಕ,ಮಂಜುನಾಯ್ಕ, ಕನ್ನಡ ಸೇನೆ ಜಿಲ್ಲಾಧ್ಯಕ್ಷ ರಮೇಶ್ ನಾಯುಕ್, ಚೆನ್ನಯ್ಯನಹಟ್ಟಿ ತಿಪ್ಪೇಸ್ವಾಮಿ,ಕುಮಾರ್ ಮುಂತಾದವರು ಹಾಜರಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ