ಬೀದರ್:
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಬರ ವಿಮರ್ಷೆ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶಂಪೂರ್, ಗಣಿ ಸಚಿವ ರಾಜಶೇಖರ್ ಪಾಟೀಲ್ ನೇತೃತ್ವದಲ್ಲಿ ಈ ಸಭೆ ನಡೆದಿದ್ದು, ಸಭೆಯಲ್ಲಿ ಔರಾದ್ ತಾಲೂಕನ್ನ ಕಡೆಗಣೆಸದಿರಿ ಎಂದು ಶಾಸಕ ಪ್ರಭುಚೌಹಾಣ್ ಅಂಗಲಾಚಿದ ಘಟನೆ ನಡೆದಿದೆ.
ಸಭೆ ನಡೆಯುತ್ತಿರುವಾಗಲೇ ಬಂಡೆಪ್ಪ ಕಾಶೆಂಪೂರ್ ಮತ್ತು ಭಗವಂತ ಖೂಬಾ ಅವರ ನಡುವೆ ಜಟಾಪಟಿ ನಡೆದಿದ್ದು, ಬರ ಪರಾಮರ್ಶೆ ನಡೆಸುವ ವೇಳೆ ಸಂಸದ ಭಗವಂತ್ ಖೂಬಾ ನಾಲಿಗೆ ಹರಿಬಿಟ್ಟಿದ್ದಾರೆ.
ಖೂಬಾ ಅವರು ತಾವು ಬಂದಿರುವ ಸಭೆಯ ಉದ್ದೇಶವನ್ನು ಮರೆತು ತುಂಬಿದ ಸಭೆಯಲ್ಲಿ ಮೈತ್ರಿ ಸರ್ಕಾರದ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ ರಾಜ್ಯದ ಮೈತ್ರಿ ಸರ್ಕಾರ ನಾಲಾಯಕ್ ಸರ್ಕಾರ ಎಂದು ಬೈದಿದ್ದಾರೆ ಮತ್ತು ಬರ ನಿರ್ವಹಣೆ ವಿಶೇಷದಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಹರಿಹಾಯ್ದಿದ್ದಾರೆ.