ಆನಂದ ಮಹೀಂದ್ರಾಗೆ ಬಂತು ಅತ್ಯಂತ ವಿಶಿಷ್ಠವಾದ ಗಿಫ್ಟ್‌ …..!

ಮುಂಬೈ:

     ಆನಂದ್ ಮಹೀಂದ್ರಾ ಅವರು ಭಾರತದ ಕೈಗಾರಿಕೋದ್ಯಮಿ ಮಾತ್ರವಲ್ಲ, ಅವರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಅನೇಕ ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಳ್ಳುವ ಉತ್ಸಾಹಿ ಎಂದರೆ ತಪ್ಪಾಗುವುದಲ್ಲ.

   ಇತ್ತೀಚೆಗೆ ತಮ್ಮ X (ಟ್ವಿಟರ್) ಖಾತೆಯಲ್ಲಿ ತಮಗೆ ಉಡುಗೊರೆಯಾಗಿ ಸಿಕ್ಕ ಹಿಂದೂಸ್ತಾನ್ ಅಂಬಾಸಿಡರ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅಂದರೆ ಇದು ದೊಡ್ಡ ಘಾತ್ರದ ಕಾರೇನಲ್ಲ, ಆಟಿಕೆಯ ರೀತಿಯಲ್ಲಿ ಡಿಸೈನ್ ಮಾಡಲಾದ ಸಣ್ಣ ಅಂಬಾಸಿಡರ್ ಕಾರಾಗಿದೆ. ಈ ಕಾರಿನ ಬಗ್ಗೆ ತಮ್ಮ ಉತ್ಸುಕತೆಯನ್ನು ವ್ಯಕತಪಡಿಸಿರುವ ಅವರು, ಏನೆಲ್ಲಾ ಮಾಹಿತಿ ಹಂಚಿಕೊಂಡಿದ್ದಾರೆ ಎಂಬುದನ್ನು ಇಲ್ಲಿ ನೋಡೋಣ.

   “ಮಹೀಂದ್ರಾ ಆಟೋಮೋಟಿವ್‌ನ ಮುಖ್ಯ ವಿನ್ಯಾಸಕ ಪ್ರತಾಪ್ ಬೋಸ್ ಅವರಿಂದ ನಾನು ಇವುಗಳನ್ನು ಉಡುಗೊರೆಯಾಗಿ ಸ್ವೀಕರಿಸಿದ್ದೇನೆ. ಇಂತಹ ಉಡುಗೊರೆಯನ್ನು ಸ್ವೀಕರಿಸಲು ನನಗೆ ತುಂಬಾ ಸಂತೋಷವಾಗಿದೆ. ಇಂದು ನನಗೆ ಪ್ರತಾಪ್ ಬೋಸ್ ಅವರಿಂದ ಉಡುಗೊರೆ ಸಿಕ್ಕಿದೆ. “ನನ್ನ ನೆನಪಿನಲ್ಲಿ ಅಂಬಾಸಿಡರ್ ಕಾರಿಗೆ ಪ್ರತ್ಯೇಕ ವಿಶೇಷತೆಯಿದೆ” ಎಂದು ಹೇಳಿಕೊಂಡಿದ್ದಾರೆ.

    ಒಂದು ಕಾಲದಲ್ಲಿ ಅಂಬಾಸಿಡರ್ ಭಾರತದಲ್ಲಿ ಜನಪ್ರಿಯ ಕಾರಾಗಿತ್ತು. ಅನೇಕ ವಾಹನ ಚಾಲಕರ ಮನಸ್ಸನ್ನು ಸೆಳೆದಿರುವ ಈ ಕಾರು, ಇಂದಿಗೂ ರಸ್ತೆಗಳಲ್ಲಿ ಅಲ್ಲಲ್ಲಿ ಕಾಣಸಿಗುತ್ತದೆ. ಇಂತಹ ಅಪರೂಪದ ಕಾರುಗಳು ಸ್ಕೇಲ್ ಮಾದರಿಗಳ ಮೂಲಕ ಅಮರತ್ವಕ್ಕೆ ಅರ್ಹವಾಗಿವೆ ಎಂದು ಆನಂದ್ ಮಹೀಂದ್ರಾ ಹೇಳಿದರು. ಅವರಿಗೆ ಉಡುಗೊರೆಯಾಗಿ ನೀಡಿರುವ ಸ್ಕೇಲ್ ಮಾದರಿಗಳಲ್ಲಿ ಒಂದನ್ನು ಕಪ್ಪು ಬಣ್ಣದಲ್ಲಿ ಮತ್ತು ಇನ್ನೊಂದನ್ನು ಕಂದು ಬಣ್ಣದಲ್ಲಿ ನೀಡಲಾಗಿದೆ.

    ಹಿಂದೂಸ್ತಾನ್ ಅಂಬಾಸಿಡರ್ ಸ್ಕೇಲ್ ಮಾಡೆಲ್‌ಗಳನ್ನು ಉಡುಗೊರೆಯಾಗಿ ಸ್ವೀಕರಿಸಿದ್ದಕ್ಕಾಗಿ ಆನಂದ್ ಮಹೀಂದ್ರಾ ಪ್ರತಾಪ್ ಬೋಸ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಇಂತಹ ಮಾದರಿಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳದೆ ಬಾಂಗ್ಲಾದೇಶದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ ಎಂಬುದು ಸಂತೋಷದ ವಿಷಯವಾಗಿದೆ. ಆದರೆ ಇಂತಹ ಮಾದರಿಗಳನ್ನು ನಾವೇಕೆ ನಿರ್ಮಿಸುತ್ತಿಲ್ಲ ಎಂದು ಆನಂದ್ ಮಹೀಂದ್ರಾ ಬೋಸ್ ಅವರನ್ನು ಕೇಳಿದರು.

    ವಾಸ್ತವವಾಗಿ, ಸ್ಕೇಲ್ ಮಾಡಲ್ ಕೇವಲ ಒಂದು ಮಾದರಿಯಾಗಿದೆ. ಆಟೋಮೊಬೈಲ್ ಉತ್ಸಾಹಿಗಳು ಅಂತಹ ಕಾರುಗಳನ್ನು ಹೆಚ್ಚಾಗಿ ಖರೀದಿಸುತ್ತಾರೆ. ಮನೆಯಲ್ಲಿ ಈ ರೀತಿಯ ಮಾದರಿಗಳು ತಮ್ಮ ಟೇಬಲ್‌ಗಳ ಮೇಲೆ ಅಲಂಕರಿಸುತ್ತಾರೆ. ಇಂತಹ ಮಾದರಿಗಳನ್ನು ಕೆಲವು ದೇಶಗಳಲ್ಲಿನ ಕಂಪನಿಗಳು ಮಾತ್ರ ತಯಾರಿಸುತ್ತಿವೆ. ಇವುಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ.

    ಹಿಂದೂಸ್ತಾನ್ ಅಂಬಾಸಿಡರ್ ವಿಷಯಕ್ಕೆ ಬಂದರೆ ದಶಕಗಳ ಹಿಂದೆ, ಅಂಬಾಸಿಡರ್ ಕಾರು ಅದ್ಭುತ ಮಾರಾಟವನ್ನು ಪಡೆಯುವಲ್ಲಿ ಯಶಸ್ವಿಯಾಗಿತ್ತು. ಈ ಕಾರುಗಳನ್ನು ಆ ಸಮಯದಲ್ಲಿ ಸರ್ಕಾರಿ ಅಧಿಕಾರಿಗಳು ಬಳಸುತ್ತಿದ್ದರು. ಈಗಲೂ ಕೆಲವು ಅಂಬಾಸಿಡರ್ ಪ್ರಿಯರು ತಮ್ಮ ಅಂಬಾಸಿಡರ್ ಕಾರುಗಳನ್ನು ಹೆಚ್ಚು ಸುಂದರವಾಗಿ ಮಾಡಿಫೈಗೊಳಿಸಿ ಬಳಸುತ್ತಿದ್ದಾರೆ. ಒಂದು ಕಾಲದಲ್ಲಿ ರಾಜಕೀಯ ವ್ಯಕ್ತಿಗಳು ಸಹ ಬಳಸುತ್ತಿದ್ದರು.

    ಹಿಂದೂಸ್ತಾನ್ ಅಂಬಾಸಿಡರ್ ಕಾರುಗಳು ಇಂದಿಗೂ ಅನೇಕ ವಾಹನ ಪ್ರಿಯರ ಹೃದಯವನ್ನು ಕದಿಯುತ್ತಲೇ ಇವೆ. ಇದಕ್ಕೆ ಮುಖ್ಯ ಕಾರಣ ಸರಳ ವಿನ್ಯಾಸ ಮಾತ್ರವಲ್ಲದೆ ವಾಹನ ಬಳಕೆದಾರರಿಗೆ ಅಗತ್ಯವಿರುವ ವೈಶಿಷ್ಟ್ಯಗಳು. ಇದಲ್ಲದೆ, ಕಾರ್ಯಕ್ಷಮತೆಯ ದೃಷ್ಟಿಯಿಂದಲೂ ಇದು ಅತ್ಯುತ್ತಮವಾಗಿದೆ. ಈ ಕಾರನ್ನು ವಿಶೇಷವಾಗಿ ಭಾರತೀಯ ರಸ್ತೆಗಳಿಗೆ ಸರಿಹೊಂದುವಂತೆ ವಿನ್ಯಾಸಗೊಳಿಸಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link