ಬಾರಕೋಲು ಹಿಡಿದುಕೊಂಡು ಸದನಕ್ಕೆ ಹೋಗಿದ್ದೆ: ವಿರೂಪಾಕ್ಷಪ್ಪ ಬಳ್ಳಾರಿ..

ಬ್ಯಾಡಗಿ

      ಕೆರೆಗಳಿಗೆ ನೀರು ತುಂಬಿಸುವ ಪ್ರಸಕ್ತ ಯೋಜನೆಯ ಅನುಷ್ಟಾನಕ್ಕೆ ಮಾಜಿ ಶಾಸಕ ಶಿವಣ್ಣನವಗೊಂದಿದೆ, ಸಚಿವ ಡಿಕೆಶಿ ಮನೆಗೆ ಹೋಗಿದ್ದೆವು ಆದರೆ ಕೊನೆಯ ಘಳಿಗೆಯಲ್ಲಿ ಸಚಿವ ಡಿಕೆಶಿ ಯೋಜನೆ ಅನುಮೋದನೆ ನಿರಾಕರಿಸಿದ್ದಾಗಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.

       ರೈತ ಸಂಘವು ಕರೆ ನೀಡಿದ್ದ ‘ಬ್ಯಾಡಗಿ ಬಂದ್’ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಚಿವ ಡಿಕೆಶಿ ಅವರ ತಿರಸ್ಕಾರದ ನುಡಿಗಳನ್ನು ಅರಗಸಿಕೊಳ್ಳಲು ನನಗೆ ಸಾಧ್ಯವಾಗಲಿಲ್ಲ, ಹೀಗಾಗಿ ಬಾರಕೋಲು ತೆಗೆದುಕೊಂಡು ಸದನದೊಳಗೆ ಹೋಗಿದ್ದು ನಾನೊಬ್ಬ ರೈತನ ಮಗನಾಗಿ ಆಯ್ಕೆಯಾಗಿ ಸದನಕ್ಕೆ ಬಂದಿದ್ದೇನೆ,ಬಾರಕೋಲು ತೆಗೆದುಕೊಂಡು ನನಗೆ ಎರಡು ಸಾರಿ ಹೊಡೆದಾದರೂ ಯೋಜನೆಗೆ ಅನುಮತಿ ಕೊಡಿ ಎಂದು ಸಭಾಧ್ಯಕ್ಷರಲ್ಲಿ ವಿನಂತಿ ಮಾಡಿದ್ದೆ ಎಂದರು.

         ರೈತರ ನ್ಯಾಯಸಮ್ಮತವಾದ ಬೇಡಿಕೆ ಹಿನ್ನೆಡೆಯಾಗಿದ್ದು ನನಗೆ ನೋವನ್ನುಂಟು ಮಾಡಿದ್ದು ನಿಮ್ಮೆಲ್ಲರ ಸಂಘಟಿತ ಹೋರಾಟ ನನ್ನಲ್ಲಿ ಶಕ್ತಿ ತುಂಬಿದ್ದು, ಹಾನಗಲ್ಲ ಹಾಗೂ ಬ್ಯಾಡಗಿ ಸೇರಿದಂತೆ ಎರಡೂ ತಾಲ್ಲೂಕುಗಳಿಗೆ ಅನ್ವಯವಾಗುವಂತೆ 1050 ಕೋಟಿ ರೂ.ಗಳ ಡಿಪಿಆರ್ ಸಿದ್ಧವಾಗಿದ್ದು ಶೀಘ್ರದಲ್ಲೇ ಅನುಷ್ಟಾನಗೊಳಿಸುವುದಾಗಿ ಭರವಸೆ ನೀಡಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link