ಕೊಟ್ಟೂರು
ಸಾಮೂಹಿಕ ವಿವಾಹಗಳು ಸಮಾಜದಲ್ಲಿ ಸಾಮಾಜಿಕ ಬದಲಾವಣೆ ತರುವ ಮೂಲಕ ವರದಕ್ಷಣೆ ಪಿಡುಗುನ್ನು ತಡೆಗಟ್ಟಬಹುದು. ಇದರಿಂದ ಆರ್ಥಿಕ ದುಂದುವೆಚ್ಚವೂ ನಿಲ್ಲುತ್ತದೆ ಎಂದು ಉಜ್ಜಿನಿ ಸದ್ದರ್ಮ ಪೀಠದ ಜಗದ್ಗುರು ಸಿದ್ದಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯ ಸ್ವಾಮೀಜಿ ನುಡಿದರು.
ಪಟ್ಟಣದ ಡೋಣೂರು ಚಾನುಕೋಟಿ ಮಠ ಶ್ರೀಗುರು ಮರುಳಸಿದ್ದೇಶ್ವರ ಹಾಗೂ ಜಗಜ್ಯೋತಿ ಬಸವೇಶ್ವರ ಜಯಂತಿ ನಿಮಿತ್ತ ಹಮ್ಮಿಕೊಂಡಿದ್ದ 29ನೇ ವರ್ಷದ ಸಾಮೂಹಿಕ ವಿವಾಹ ಸಾಮಾರಂಭದ ಸಾನಿಧ್ಯವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಡೋಣೂರು ಚಾನುಕೋಟಿ ಮಠವು ಸತತ 29 ವರ್ಷಗಳಿಂದ ಜಾತಿ ಕುಲಬೇಧವಿಲ್ಲದೆ. ಬಡವ ಶ್ರೀಮಂತ ಎನ್ನದೆ ಸಮ ಸಮಾಜ ನಿರ್ಮಾಣದ ದೃಷ್ಟಿಯಿಂದ ಸಾಮೂಹಿಕ ವಿವಾಹಗಳನ್ನು ನಡೆಸುತ್ತ ಬಂದಿರುವುದು ಅತ್ಯಂತ ಶ್ಲಾಘನೀಯ ಸಂಗತಿ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಬಡವರು, ಆರ್ಥಿಕವಾಗಿ ಹಿಂದುಳಿದವರು ಮಾತ್ರ ಸಾಮೂಹಿಕ ವಿವಾಹದಲ್ಲಿ ಮದುವೆಯಾಗುತ್ತಾರೆ ಮೂದಲಿಕೆ ಮಾತುಗಳು ದೂರವಾಗಿ, ಜನಪ್ರತಿನಿಧಿಗಳು, ಕೋಟ್ಯಧಿಪತಿಗಳ ಮಕ್ಕಳು ಇಂತಹ ಸಾಮೂಹಿ ವಿವಾಹದಲ್ಲಿ ಮದುವೆ ಆಗುವ ಸಾಮಾಜಿಕ ಕ್ರಾಂತಿಗೆ ಶ್ರೀಕಾರ ಹಾಕಬೇಕು ಎಂದರು.
ಈ ಸಾಮೂಹಿಕ ವಿವಾಹದಲ್ಲಿ 27 ಜೋಡಿಗಳು ಸತಿಪತಿಗಳಾಗಿದ್ದಾರೆ. ಇದರಿಂದ ಶ್ರೀಮಠವು ದುಂದುವೆಚ್ಚವಾಗುತ್ತಿದ್ದ 54 ಲಕ್ಷ ರು.ಗಳನ್ನು ಉಳಿಸಿದೆ. ಹೆಣ್ಣು ವರದಕ್ಷಿಣೆ ಕೇಳುವ ಹುಡುಗನ್ನನ್ನು ಮದುವೆಯಾವುದಿಲ್ಲವೆಂದು ಶಪತ ಮಾಡಬೇಕು. ಗಂಡು ವರದಕ್ಷಿಣಿ ಕೇಳದೆ ಮದುವೆಯಾಗುತ್ತೇವೆ ಎಂದು ಪ್ರತಿಜ್ಞೆ ಮಾಡಿಬೇಕು ಎಂದು ಶ್ರೀಗಳು ಮದುವೆಯಾಗದ ಗಂಡು-ಹೆಣ್ಣುಗೆ ಕಿವಿಮಾತು ಹೇಳಿದರು.
ಮದುವೆಯಾದ ಹೆಣ್ಣು ಗಂಡನ ಮನೆಯ ಭಾಗವಾಗಿರುತ್ತೇವೆ ಎಂದು ಸಂಕಲ್ಪ ಮಾಡಬೇಕೇ ಹೊರತು ಗಂಡನ ಮನೆಯನ್ನು ಭಾಗಮಾಡುತ್ತೇನೆ ಎಂದು ಹೋಗಬಾರದು. ಮದುವೆಯಾದ ಗಂಡು ಹೆಂಡತಿ ಬಂದ ಮೇಲೆ ಹೆತ್ತವರನ್ನು ದೂರಮಾಡದೆ ಪೂಜ್ಯಭಾವನೆಯಿಂದ ಕಂಡಾಗ ಮಾತ್ರ ಆ ಸಂಸಾರ ಆನಂದ ಸಾಗರವಾಗುವುದು ಎಂದರು.
ಬೆಂಗಳೂರು ವಿಭೂತಿಮಠದ ಡಾ.ಮಹಂತಲಿಂಗ ಶಿವಾಚಾರ್ಯ ಸ್ವಾಮಿಗಳು ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು. ಕೂಡ್ಲಿಗಿ ಹೀರೆಮಠದ ಶ್ರೀ ಪ್ರಶಾಂತಸಾಗರ ಶಿವಾಚಾರ್ಯ ಸ್ವಾಮೀಜಿ ಆಶೀವರ್ಚನ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಡೋಣೂರು ಚಾನುಕೋಟಿಮಠದ ಶ್ರೀಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, 29 ವರ್ಷಗಳಿಂದ ಸತತವಾಗಿ ಶ್ರೀಮಠವು ಸಾಮೂಹಿಕ ವಿವಾಹವನ್ನು ನಡೆಸುತ್ತ ಬಂದಿದೆ. ಇದರೊಂದಿದೆ ನೇತ್ರ ತಪಾಸಣೆ ಚಿಕಿತ್ಸೆ, ಹಲ್ಲಿನ ಚಿಕಿತ್ಸೆ, ಸೀಳು ತುಟಿ ಚಿಕಿತ್ಸೆ, ಹೃದಯ ಸಂಬಂಧಿ ಶಿಬಿರಗಳನ್ನು ನಡೆಸುತ್ತಾ ಬಂದಿದೆ ಎಂದು ಮಾಹಿತಿ ನೀಡಿದರು.
ಯಾವುದೇ ಸಮುದಾಯವಿರಲಿ. ತಮ್ಮ ಮಕ್ಕಳನ್ನು ಓದಿಸಲು ಆರ್ಥಿಕವಾಗಿ ಶಕ್ತಿ ಇಲ್ಲದವರು. ನಮ್ಮ ಮಠಕ್ಕೆ ಕಳುಹಿಸಿದರೆ ಉಚಿತವಾಗಿ ವಿದ್ಯಾಭ್ಯಾಸ, ವಸತಿ ಸೌಕರ್ಯಗಳನ್ನು ಕಲ್ಪಿಸಲಾವುದು ಎಂದರು.ವೇದಿಕೆಯಲ್ಲಿ ಕಾರ್ಯಾಧ್ಯಕ್ಷ ಚಾಪಿ ಚಂದ್ರಪ್ಪ ಮುಂತಾದವರು ಇದ್ದರು.