ಹೊಳಲ್ಕೆರೆ:
12ನೇ ಶತಮಾನದ ಬಸವಾದಿ ಶರಣರು ರಚಿಸಿರುವ ತಾತ್ವಿಕ ನೆಲೆಗಟ್ಟಿನ ಆಧಾರದ ಮೇಲೆ ಬಸವ ತತ್ವ ಮತ್ತು ತಾತ್ವಿಕ ನೆಲೆಗಳು ನಿಲ್ಲಬೇಕಾಗಿದೆ. ರಾಷ್ಟ್ರಕ್ಕೆ ಹೇಗೆ ಸಂವಿಧಾನ ಇದೆ ಹಾಗೆ ವಚನ ಸಾಹಿತ್ಯವೇ ಸಂವಿಧಾನವಾಗಿದೆ ಅದರಂತೆ ಪ್ರತಿಯೊಬ್ಬ ಅವಿರಕ್ತ ಮಠಾಧೀಶರು ಈ ಸಂಪ್ರದಾಯ ಪರಂಪರೆಯನ್ನು ಚಾಚು ತಪ್ಪದೆ ಅನುಸರಿಸಬೇಕೆಂದು ಚಿತ್ರದುರ್ಗ ಮರುಘಾಮಠದ ಡಾ. ಶ್ರೀ ಶಿವಮೂರ್ತಿ ಮುರುಘಶರಣರು ಪ್ರತಿಪಾದಿಸಿದರು.
ಪಟ್ಟಣದ ಹೊರವಲಯದಲ್ಲಿರುವ ಒಂಟಿಕಂಬ ಮುರುಘವ್ಮಠದಲ್ಲಿ ಲಿಂಗೈಕ್ಯ ಜಗದ್ಗುರು ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳ 26ನೇ ಸ್ಮರಣೋತ್ಸವ ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿ ಮಾತನಾಡಿದರು.
ನಮಗೆ 12ನೇ ಶತಮಾನದಲ್ಲಿ ಕೆಲವು ಸಂಪ್ರದಾಯಗಳು ಈಗಲು ಪ್ರಚಲಿತದಲ್ಲಿವೆ. ವಿರಕ್ತಮಠಗಳಲ್ಲಿ ಕಾಯಕ, ದಾಸೋಹ ಸಮಾನತೆ ಜೊತೆಗೆ ಸಮಾಜದಲ್ಲಿನ ಅಸ್ಪøಶ್ಯತೆ ಜಾತೀಯತೆ, ಇವುಗಳ ವಿರುಧ್ದ ಅಂದಿನ ಶರಣರು ಹೋರಾಟದಿಂದ ಮಠಗಳು ಇಂದಿಗೂ ತತ್ವಗಳನ್ನು ಆದರ್ಶಗಳನ್ನು ಪರಿಪಪಾಲನೆ ಮಾಡಿಕೊಂಡು ಬರುತ್ತಿವೆ. ನಮ್ಮದು ಪ್ರಜಾಸತ್ತೆಯ ವ್ಮಠ, ರಾಜವೈಭವದ ವ್ಮಠವಲ್ಲ.
ನಮ್ಮ ಬಸವ ಪರಂಪರೆಯ ತತ್ವದ ಪ್ರಕಾರ ಸಂಸ್ಖøತ ವೇದ, ಘೋಷಣೆಗೆ ಅವಕಾಶವಿಲ್ಲ. ತಾವು ಕಾಶಿಗೆ ಹೋಗಿ ಯಾವುದೇ ವಿದ್ಯೆಯನ್ನು ಕಲಿಯಲಿಲ್ಲ. ನಾನು ಕರ್ನಾಟಕದ ನೆಲದಲ್ಲಿ ಕನ್ನಡದಲ್ಲಿರುವ ಶರಣರ ವಚನಗಳನ್ನು ಅಭ್ಯಾಸ ಮಾಡಿ ವಿಚಾರಗಳನ್ನು ಮಾಡಿದ ಪ್ರಯುಕ್ತ ತಮಗೆ ಆ ಪರಂಪರೆಯ ಪ್ರಭಾವದಿಂದ ಇಚಿದು ಈ ಗೌರವ ಸ್ಥಾನವನ್ನು ಉಳಿಸಿಕೊಂಡು ಹೋಗುತ್ತಿರುವುದಕ್ಕೆ ನಿವೆಲ್ಲರು ಸಾಕ್ಷಿಯಾಗಿದ್ದೀರ ಎಂದು ಶ್ರೀಗಳು ತಿಳಿಸಿದರು.
ಶರಣರು ಅನುಭವ ಮಂಟಪದಲ್ಲಿ ಜಾತಿ, ವರ್ಗ, ಭೇದವನ್ನು ಮರೆತು ಸರಿ ಸಮಾನರಾಗಿ ಬಸವ ತತ್ವವನ್ನು ಪಾಲಿಸಿದರು. ಸಮಾಜ ಮುಖಿಗಳಾಗಿ ದೇಶದಲ್ಲಿ ಅನೇಕ ವಿರಕ್ತ ಮಠಗಳು ಸ್ಥಾಪನೆಯಾಗಿವೆ. ಧಾರ್ಮಿಕ ಸಂವಿಧಾನವೇ ಮಠಗಳ ಅಜೆಂಡವಾಗಿದೆ. ವಿರಕ್ತ ಮಠಾಧೀಶ್ವರು ಬಸವ ತತ್ವಕ್ಕೆ ದ್ರೋಹ ಮಾಡಬಾರದು. ಬಸವಣ್ಣನವರ ಸಂಪ್ರದಾಯವನ್ನು ಪರಿಪಾಲನೆ ಮಾಡಬೇಕೆ ಹೊರತು ಬೇರ ರೀತಿಯಲ್ಲಿ ಒಳಗೊಂದು, ಹೊರಗೊಂದು ರೀತಿಯಲ್ಲಿ ಸಂಪ್ರದಾಯಗಳನ್ನು ಪಾಲನೆ ಮಾಡಿ ಜನರನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಮಾಡುತ್ತಿರುವ ಬಗ್ಗೆ ಶರಣರು ಆಕ್ರೋಷ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಹೆಚ್. ಆಚಿಜನೇಯ ಮಾತನಾಡಿ ನಾನು ಕಳೆದ 30 ವರ್ಷಗಳಿಂದ ಚಿತ್ರದುರ್ಗ ಬೃಹನ್ಮಠದ ಸಂಪರ್ಕದಲ್ಲಿದ್ದು ಲಿಂಗೈಕ್ಯ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳು ನನಗೆ ಅಚಿದೇ ಆರ್ಶಿವಾಧ ಮಾಡಿದ್ದರು. ಮುಂದೆ ನಿನೊಬ್ಬ ಉತ್ತಮ ರಾಜಕಾರಣಿಯಾಗಿ ಸಮಾಜ ಸೇವೆ ಮಾಡುತ್ತೀಯಾ ನಿನಗೆ ಉತ್ತಮ ಭವಷ್ಯವಿದೆ ಎಚಿದು ಹೇಳಿದ್ದರು. ನಾನು ಜಾತಿಯಲ್ಲಿ ಮಾದಿಗ ಸಮಾಜಕ್ಕೆ ಸೇರಿದ್ದರು ನನಗೆ ವ್ಮಠದ ಒಳಗೆ ಪ್ರವೇಶ ಮಾಡಲು ಮತ್ತು ಪ್ರಸಾದವನ್ನು ಸೇವಿಸಲು ಮುಕ್ತ ಅವಕಾಶವನ್ನು ನೀಡಿದ ಶ್ರೀಗಳ ಬಗ್ಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಹನುಮಲಿ ಷಣ್ಮುಖಪ್ಪ ಮಾತನಾಡಿ ನಾನು ಎಸ್.ಜೆ.ಎಂ.ಪೀಠಕ್ಕೆ ಸೇರಿದ ಕಾಲೇಜಿನಲ್ಲಿ ಪದವಿಯನ್ನು ಪಡೆದುಕೊಂಡೆ ಈ ಒಚಿದು ಶರಣ ಸಂಸ್ಕೃತಿಯಲ್ಲಿ ಸೇವೆ ಮಾಡಲು ಮುರುಘ ಶರಣರು ನನ್ನನ್ನು ಆಯ್ಕೆ ಮಾಡಿದ್ದು ತುಂಬಾ ಸಂತೋಷದ ವಿಷಯ, ಶ್ರೀಗಳು ನಡೆಸುತ್ತಿರುವ ಶರಣ ಸಂಸ್ಕೃತಿ ಅರ್ಥಪೂರ್ಣವಾಗಿದೆ. ಕಳೆದ ಹತ್ತು ದಿನಗಳಿಂದ ಚಿತ್ರದುರ್ಗ ನಗರದಲ್ಲಿ ನಡೆದ ಕಾರ್ಯಕ್ರಮ ತುಂಬಾ ಯಶಸ್ವಿಯಾಗಿದೆ. ಇದಕ್ಕೆ ಶ್ರೀಗಳ ಆರ್ಶೀವಾದ ಮತ್ತು ಮಾರ್ಗದರ್ಶನ ಹಾಗೂ ಎಸ್.ಜೆ.ಎಂ. ವಿದ್ಯಾಪೀಠದ ಸಿಬ್ಬಂಧಿಯ ಅವಿರತ ಪರಿರ್ಶರಮದಿಂದ ಕಾರ್ಯಕ್ರಮ ಯಶಸ್ವಿಯಾಗಿದೆ. ಶ್ರೀಗಳು ಜಿಲ್ಲೆಗೆ, ನೀರಾವರಿ ಯೋಜನೆಯನ್ನು ಜಾರಿಗೆ ತರಲು ಹಗಲಿರಳು ಶ್ರಮಿಸುತಿದ್ದಾರೆ. ಈ ಸಂಬಂಧ ಶರಣ ಸಂಸ್ಸøತಿಯ ಮೊದಲ ದಿನವೇ ಭದ್ರಾ ಮೇಲ್ದಚಿಡೆ ಕಾಲುವೆಯಿಚಿದ ವಿವಿಸಾಗರಕ್ಕೆ ನೀರು ಹರಿಯಿತು. ಶ್ರೀಗಳ ಶ್ರಮ ಸಾರ್ಥಕವಾಗಿತು ಎಚಿದು ತಮ್ಮ ಮೆಚ್ಚುಗೆಯನ್ನು ಸೂಚಿಸಿದರು.
ಕಾಗಿನೆಲೆ ಪೀಠದ ಪ್ರಸಾನಚಿದಪೂರಿ ಸ್ವಾಮಿಗಳು ಮತ್ತು ರಾಜನಹಳ್ಳಿ ವಾಲ್ಮೀಕಿ ಪೀಠದ ನಿರಂಜನಚಿದ ಮಹಾಸ್ವಾಮಿಗಳು ಮಾತನಾಡಿದರು.ಮಾಜಿ ಶಾಸಕರುಗಳಾದ ಎಂ.ಬಿ.ತಿಪ್ಪೇರುದ್ರಪ್ಪ, ಜಿ.ಸಿ.ಮಂಜುನಾಥ್, ಡಾ.ಎನ್.ಬಿ.ಸಜ್ಜನ್ ಮತ್ತು ಡಾ.ನಳಿನಾಕ್ಷಿ ಸಜ್ಜನ್ ಅವರಿಗೆ ವಿಶೇಷ ಸನ್ಮಾನಿಸಲಾಯಿತು.ಮಾಜಿ ಶಾಸಕರುಗಳಾದ ಎ.ವಿ.ಉಮಾಪತಿ, ಪಿ.ರಮೇಶ್, ಟಿ.ಹೆಚ್.ಬಸವರಾಜ, ಪಿ.ರಮೇಶ್ ಮಾತನಾಡಿದರು.