ಚಿತ್ರದುರ್ಗ
ನಗರದಲ್ಲಿ ಕೊಟ್ಯಾಂತರ ರೂಪಾಯಿಗಳ ವೆಚ್ಚದಲ್ಲಿ ರಸ್ತೆ ಕಾಮಗಾರಗಳು ನಡೆಯುತ್ತಿದ್ದು, ಜಲ ನಿಗಮದವರು ಬೇಕಾಬಿಟ್ಟಿಯಾಗಿ ನೀರಿನ ಪೈಪ್ ಲೈನ್ ಅವಳಡಿಕೆಗೆ ರಸ್ತೆ ಹಾಳು ಮಾಡುತ್ತಿದ್ದಾರೆಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಕಿಡಿಕಾರಿದ್ದಾರೆ
ನಗರದಲ್ಲಿ ನಡೆಯುತ್ತಿರುವ ವಿವಿಧ ರಸ್ತೆಗಳ ಕಾಮಗಾರಿಗೆ ಸಂಬಂಧಪಟ್ಟಂತೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಗರದಲ್ಲಿ ಕೋಟ್ಯಾಂತರ ರೂಪಾಯಿಗಳ ರಸ್ತೆ ಕಾಮಗಾರಿ ನಡೆಯುತ್ತಿದೆ, ಕಾಮಗಾರಿಯ ನಂತರ ಜಲನಿಗಮದವರು ನೀರಿನ ಪೈಪ್ ಹಾಕಲು ಹೊಸದಾಗಿ ನಿರ್ಮಾಣ ಮಾಡಿದ ಸಿಸಿರಸ್ತೆಯನ್ನು ಅಗೆದಿದ್ದಾರೆ, ನಮೆಗೆ ಆಗೆಯಲು ಯಾರು ಹೇಳಿದ್ದು ಅದಕ್ಕು ಮುನ್ನಾ ಅನುಮತಿಯನ್ನು ಪಡೆಯಬೇಕೆಂಬ ಜ್ಞಾನ ಇಲ್ಲವೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ನಿಮ್ಮ ಎಂಡಿಯನ್ನು ಚಿತ್ರದುರ್ಗಕ್ಕೆ ಕರೆದುಕೊಂಡು ಬನ್ನಿ ಬರೀ ಎಸಿ ರೂಂನಲ್ಲಿ ಕುಳಿತು ಅಧಿಕಾರ ನಡೆಸವುದಲ್ಲ ಜನರ ಮಧ್ಯೆ ಬಂದು ಸಮಸ್ಯೆಗಳನ್ನು ತಿಳಿದು ಅವುಗಳ ಪರಿಹಾರವನ್ನು ಕಂಡುಕೊಳ್ಳಬೇಕಿದೆ ಎಂದ ಶಾಸಕರು ಕಾಮಗಾರಿಗಳ ಗುಣಮಟ್ಟ ಮತ್ತು ಇತರೆ ವಿಷಯಗಳನ್ನು ಪರಿಶೀಲನೆ ಮಾಡಿವ ಥರ್ಡ ಪಾರ್ಟಿ ಇನ್ಸಪೆಸ್ಪನ್ ಸಹಾ ಸರಿಯಾದ ರೀತಿಯಲ್ಲಿ ನಡೆದಿಲ್ಲ ಜನತೆ ರಸ್ತೆ ಸರಿಯುಲ್ಲ ಎಂದು ಹೇಳುತ್ತಿದ್ದರು ಸಹಾ ಸರಿಯಾದ ರೀತಿಯಲ್ಲಿ ಕಾಮಗಾರಿಯನ್ನು ಮಾಡದೇ ಮಾಡಿದ ಕಾಮಗಾರಿಯನ್ನು ಸರಿಯಾದ ರೀತಿಯಲ್ಲಿ ಪರಿಶೀಲನೆ ಮಾಡದೇ ಬೇಕಾಬಿಟ್ಟಿಯಾಗಿ ಕೆಲಸ ಮಾಡುವುದು ಸರಿಯಾದ ಕ್ರಮವಲ್ಲ ಎಂದು ತಿಪ್ಪಾರೆಡ್ಡಿ ಅಧಿಕಾರಿಗಳನ್ನು ಹಿಗ್ಗಾಮುಗ್ಗಾವಾಗಿ ಜಾಡಿಸಿದರು.
ಚಿತ್ರದುರ್ಗ ನಗರದಲ್ಲಿ ವಿವಿಧ ರಸ್ತೆಗಳ ಕಾಮಗಾರಿ ಪ್ರಾರಂಭವಾಗಿದೆ. ಇದರಲ್ಲಿ ಕೆಲವು ರಸ್ತೆಗಳಿಗೆ ಹಣದ ಕೊರತೆ ಬಿದ್ದಿದೆ ಅದನ್ನು ಬೇರೆ ಕಡೆಯಿಂದ ಹೊಂದಾಣಿಕೆಯನ್ನು ಮಾಡುವುದರ ಮೂಲಕ ಕಾಮಗಾರಿಯನ್ನು ಪೂರ್ಣ ಮಾಡಲಾಗುತ್ತಿದೆ, ಇದೇ ಸಂದರ್ಭದಲ್ಲಿ ನಗರದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ರಸ್ತೆಗಳಲ್ಲಿ ಎಲ್ಲಿ ನಾಲ್ಕು ರಸ್ತೆಗಳು ಕೂಡುತ್ತವೆಯೂ ಅಂತಹ ಸ್ಥಳದಲ್ಲಿ ಮತ್ತಷ್ಟು ಜಾಗವನ್ನು ಪಡೆದು ಸರ್ಕಲ್ ನಿರ್ಮಾಣ ಮಾಡಿ ಈ ರೀತಿ ಮಾಡುವುದರಿಂದ ಸಂಚಾರದ ದಟ್ಟಣೆ ಕಡಿಮೆಯಾಗುತ್ತದೆ, ನಗರದಲ್ಲಿ ವಾಸವಿ ವೃತ್ತ, ಮಹಾವೀರ ವೃತ್ತ, ಗಾಯತ್ರಿ ವೃತ್ತ, ಅಜಾದ್ ಮಿಲ್ ಬಳಿ, ಹೀಗೆ ಬೇರೆ ಕಡೆಗಳಲ್ಲಿ ನಿರ್ಮಾಣ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಶಾಸಕರು ನಗರದ ಪ್ರಮುಖ ಮೂರು ರಸ್ತೆಗಳ ಕಾಮಗಾರಿ ಪ್ರಗತಿಯಲ್ಲಿದೆ,. ಇದಲ್ಲದೆ ವಿವಿಧ ಯೋಜನೆಯಡಿ ರಸ್ತೆ ಕಾಮಗಾರಿಗೆ 300 ಕೋಟಿ ರೂಪಾಯಿ ವಿನಿಯೋಗಿಸಲಾಗುತ್ತಿದೆ ಪ್ರವಾಸಿಮಂದಿರದಿಂದ ಕನಕ ವೃತ್ತದವರೆಗೆ 18 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ಆರಂಭಿಸಲು ನಾಲ್ಕು ಭಾರಿ ಟೆಂಡರ್ ಕರೆದರು ಯಾವ ಗುತ್ತಿಗೆದಾರರು ಬರುತ್ತಿಲ್ಲ. ಈ ಕಾಮಗಾರಿ ಮಾಡಲು ಮೂರು ಕೋಟಿ ರೂಪಾಯಿ ಠೇವಣೆ ಇಡಬೇಕು.
ಅಲ್ಲದೆ ದರ ಕಡಿಮೆ ಎಂಬ ಕಾರಣಕ್ಕಾಗಿ ಮುಂದೆ ಬರುತ್ತಿಲ್ಲ. ಮುಖ್ಯವಾಗಿ ಕಾಮಗಾರಿ ನಡೆಯುವ ವೇಳೆಯಲ್ಲಿ ಅಂಗಡಿ ಮಾಲೀಕರು ಅಥವಾ ಬೇರೆಯವರು ನ್ಯಾಯಾಲಯದ ಮೆಟ್ಟಿಲು ಏರಿದರೆ ಕಾಮಗಾರಿ ತಡವಾಗಿ ಹಣ ನಷ್ಟವಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಯಾರು ಮುಂದೆ ಬರುತ್ತಿಲ್ಲ. ಈಗ ಒಂದಿಬ್ಬರು ಗುತ್ತಿಗೆದಾರರಿಗೆ ಮನವಿ ಮಾಡಲಾಗಿದೆ. ಡಿಸೆಂಬರ್ ಅಂತ್ಯದೊಳಗೆ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದೆ ಎಂದರು.
ಇನ್ನೂ ಗಾಂಧಿವೃತ್ತದಿಂದ ಜೆಎಂಐಟಿ ವೃತ್ತದವರೆಗೆ ರಸ್ತೆ ಅಗಲೀಕರಣಕ್ಕೆ 18 ಕೋಟಿ ರೂಪಾಯಿಯಲ್ಲಿ ಕಾಮಗಾರಿ ಪ್ರಾರಂಭವಾಗಿದೆ. 9 ಕೋಟಿ ಕೊರತೆ ಕಂಡು ಬಂದಿದೆ. 14ನೇ ಹಣಕಾಸು ಯೋಜನೆಯಡಿ 1.70 ಕೋಟಿ ಭರಿಸಲಾಗಿದೆ. ಈ ಕಾಮಗಾರಿಯೂ ಮೇ ತಿಂಗಳ ಒಳಗೆ ಪೂರ್ಣಗೊಳ್ಳಲಿದೆ ಎಂದು ವಿವರಿಸಿದರು.
ಚಳ್ಳಕೆರೆ ಗೇಟ್‍ನಿಂದ ಪ್ರವಾಸಿಮಂದಿರದವರೆಗೆ ರಸ್ತೆ ಅಗಲೀಕರಣಕ್ಕೆ 19 ಕೋಟಿ ಮೀಸಲಿಟ್ಟಿದ್ದು ಕಾಮಗಾರಿ ಆರಂಭವಾಗಿದೆ. ಪರಿಷ್ಕøತ ಅಂದಾಜು ವೆಚ್ಚ 7 ಕೋಟಿ ರೂಪಾಯಿ ಹೆಚ್ಚುವರಿಯಾಗಿ ಬೇಕಾಗಿದೆ. ವಿಶೇಷ ಅನುದಾನದಡಿ 3 ಕೋಟಿ ಮತ್ತು ಸಿಎಂ ಯಡಿಯೂರಪ್ಪ ಶಾಸಕರಿಗೆ ನೀಡಲಾಗಿದ್ದ 25 ಕೋಟಿಯಲ್ಲಿ 4 ಕೋಟಿ ನೀಡಲಾಗಿದೆ. ನೀರಿನ ಪೈಪು, ಯುಜಿಡಿ ಕಾಮಗಾರಿ ಪೂರ್ಣಗೊಳಿಸವಂತೆ ಸೂಚನೆ ನೀಡಲಾಗಿದೆ. ಇದಾದ ಬಳಿಕ ಅಂದರೆ 2020ರ ಮಾರ್ಚ್ ಒಳಗೆ ರಸ್ತೆ ಅಗಲೀಕರಣ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.
ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಸತೀಶ್‍ಬಾಬು, ನಗರಾಭಿವೃದ್ದಿ ಕೋಶ ಯೋಜನಾ ನಿರ್ದೇಶಕ ರಾಜಶೇಖರ್, ಪೌರಾಯುಕ್ತ ಜಿ.ಟಿ.ಹನುಮಂತರಾಜ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇತರರು ಭಾಗವಹಿಸಿದ್ದರು.
ಮಿನಿವಿಧಾನ ಸೌಧ ನಿರ್ಮಾಣಕ್ಕೆ 25 ಕೋಟಿ ; ಚಿತ್ರದುರ್ಗದ ನಗರದಲ್ಲಿ ಬಹುದಿನಗಳಿಂದ ಬೇಡಿಕೆ ಇದ್ದ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆಯಿಂದ ಸುಮಾರು 42 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು ಸರ್ಕಾರ ಈಗ 25 ಕೋಟಿ ರೂ,ಗಳನ್ನು ಬಿಡುಗಡೆ ಮಾಡಿದೆ ಆದರೆ ಎಲ್ಲಿ ನಿರ್ಮಾಣ ಮಾಡಬೇಕೆಂದು ಜಾಗದ ಗೊಂದಲ ಉಂಟಾಗಿದೆ ಹಲವಾರು ಜನತೆ ಈಗ ಇರುವ ಜಾಗದಲ್ಲಿಯೇ ನಿರ್ಮಾಣ ಮಾಡುವಂತೆ ಹೇಳಿದರೆ ಮತ್ತೇ ಕೆಲವರು ನಗರದಿಂದ ಹೊರಗಡೆ ಸುಮಾರು 10 ಕೀಮಿ,ದೂರದಲ್ಲಿ ಇಂಗಳದಾಳ್ ಬಳಿ ನಿರ್ಮಾಣ ಮಾಡುವಂತೆ ಹೇಳುತ್ತಿದ್ದಾರೆ ಆದರೆ ಇದರ ಬಗ್ಗೆ ಇನ್ನೂ ನಿರ್ಣಯ ಮಾಡಿಲ್ಲ ಎಂದು ಶಾಸಕರು ತಿಳಿಸಿದ್ದಾರೆ.
ಈ ಇದರ ಬಗ್ಗೆ ಜನತೆಯಿಂದ ಅಭಿಪ್ರಾಯವನ್ನು ಸಂಗ್ರಹ ಮಾಡುವುದರ ಮೂಲಕ ಒಮ್ಮತದ ನಿರ್ಣಯ ಮಾಡಿ ಅಲ್ಲಿ ವಿಧಾನಸೌಧವನ್ನು ನಿರ್ಮಾಣ ಮಾಡಲಾಗುವುದು,ಈಗಾಗಲೇ ಸೌಧ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ನೀಲಿ ನಕಾಶೆಯನ್ನು ತಯಾರು ಮಾಡಲಾಗಿದೆ. ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
