ಬರಗೂರು
ಕಾಯಕ ಯೋಗಿ ಬಸವಣ್ಣರವರ ತತ್ವಗಳನ್ನು ನಾವುಗಳು ಮೈಗೂಡಿಸಿಕೊಂಡಾಗ ಮಾತ್ರ ಮಾನವ ಜನ್ಮ ಸಾರ್ಥಕವಾಗಲು ಸಾಧ್ಯವೆಂದು ಶ್ರೀಅಯ್ಯಪ್ಪ ಸೇವಾಸಮಿತಿ ಕಾರ್ಯದರ್ಶಿ ವೀರಭದ್ರಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.
ಶಿರಾ ತಾಲೂಕು ಬರಗೂರಿನ ಬಸವೇಶ್ವರ ದೇವಸ್ಥಾನದಲ್ಲಿ ಏರ್ಪಡಿಸಿದ್ದ ಬಸವ ಜಯಂತೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಸವಣ್ಣರವರು ಜಾತಿಗೆ ಸೀಮಿರವಾದವರಲ್ಲ, ಪ್ರತಿಯೊಂದು ಜಾತಿಯ ಜನರನ್ನೂ ಒಂದೇ ಎಂಬ ಭಾವನೆಯಿಂದ ಕಾಣುತ್ತಿದ್ದರು. ಆದರೆ ಇಂದಿನ ಜನತೆ ಬಸವಣ್ಣರವರನ್ನು ಒಂದೇ ಜಾತಿಗೆ ಸೀಮಿತವಾದವರೆಂದು ಕೆಲವು ಜನಾಂಗದವರು ಇವರ ಜಯಂತಿ ಆಚರಣೆಗೆ ಹಿಂದೇಟು ಹಾಕುತ್ತಿರುವುದು ವಿಶಾಧನೀಯ ಸಂಗತಿ.
ಪ್ರತಿಯೊಂದು ಜಾತಿಯೂ ಬಸವ ಜಯಂತಿ ಆಚರಣೆಗೆ ಮುಂದಾದಾಗ ಮಾತ್ರ ಬಸವಣ್ಣರ ವಚನ,ಸಾಹಿತ್ಯ,ಪರಂಪರೆಗಳನ್ನು ಶಾಶ್ವತವಾಗಿ ಉಳಿಸಿ ಬೆಳೆಸಬಹುದೆಂದರು.
ವೀರಶೈವ ಲಿಂಗಾಯಿತ ಯುವ ಮುಖಂಡರಾದ ರೇಣುಕಾಪ್ರಸಾದ್. ಹೆಚ್.ಭದ್ರಯ್ಯ, ಗಂಗಣ್ಣ,ಭರತ್,ಎಂ.ಎನ್.ನಾಗರಾಜು .ಶಾಮಿಯಾನ ಸಿದ್ದಪ್ಪ. ಬಿ.ಟಿ.ರಾಜಶೇಖರ್,ಬಿ.ಸಿ.ಬಸವರಾಜು,ಜಿ.ಎಸ್.ರಾಜಶೇಖರ್. ಆನಂದ್ ಬಳೆಗಾರ್,ಪೂಜಾರ್ ಶಿವಕುಮಾರ್.ಕುಮಾರ್ ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
ವೀರಶೈವ ಸಮಾಜದಿಂದ ಎಸರುಬೇಳೆ,ಪಾನಕ ಪ್ರಸಾದ ವಿತರಣೆ ಮಾಡಲಾಯಿತು. ಇದೇ ವೇಳೆ ಮುಸ್ಲಿಂ ಧರ್ಮದ ಸಿರಾಜ್ ಎಂಬುವರು ಕಾಯಕ ಯೋಗಿ ಬಸವಣ್ಣರವರ ಸಮಾಜಸೇವೆಯ ಪ್ರತೀಕವಾಗಿ ಭಕ್ತಾಧಿಗಳಿಗೆ ಬಾಳೆಹಣ್ಣು ಹಾಗೂ ಸಿಹಿ ಬೂಂದಿ ಹಂಚಿ ಭಕ್ತಿ ಪೂರ್ವಕವಾಗಿ ನಮಿಸಿದರು .