ತುಮಕೂರು:
ದೂರದ ಬೆಟ್ಟ ನುಣ್ಣಗೆ ಎಂಬ ಹಿರಿಯರ ನುಡಿಯಂತೆ ಬೇರೆಯವರನ್ನು ಈ ಜಿಲ್ಲೆಯ ರಾಜಕಾರಣಕ್ಕೆ ಕರೆ ತಂದರೆ ಎರಡನೇ ಹಂತದ ನಾಯಕರಿಗೆ ಮುಂದಿನ ದಿನಗಳಲ್ಲಿ ಅವಕಾಶವೇ ಇಲ್ಲದಂತಾಗುತ್ತದೆ, ಅವರನ್ನು ಆಯ್ಕೆ ಮಾಡಿದರೇ ಅವರು ತಮ್ಮ ಕಷ್ಟ ಕೇಳುತ್ತಾರೇಯೇ ನಿವೇ ಹೇಳಿ ? ಸ್ಥಳೀಯ ನಾಯಕತ್ವಕ್ಕೆ ಮನ್ನಣೆ ನೀಡಿದರೇ ಜನಸಾಮಾನ್ಯರ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಸುಲಭವಾಗುತ್ತದೆ, ಜಾತಿ ಪ್ರೇಮಕ್ಕೆ, ಹಣದಾಸೆಗೆ ಮರುಳಾದರೆ ಮುಂದಿನ ದಿನಗಳಲ್ಲಿ ನಿಮ್ಮ ಕಷ್ಟ ಕೇಳಲು ದಿಕ್ಕು ಇಲ್ಲದಂತೆ ಆಗುತ್ತದೆ. ಸ್ಥಳೀಯ ಅಭ್ಯರ್ಥಿಯಾದ ನನ್ನನ್ನು ಬೆಂಬಲಿಸುವಂತೆ ಬಿಜೆಪಿ ಅಭ್ಯರ್ಥಿ ಜಿ.ಎಸ್. ಬಸವರಾಜ್ ರವರು ವಿನಂತಿಸಿದರು,
ಅವರು ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಾ, ಕುಡಿಯುವ ನೀರಿಗೋಸ್ಕರ ತುಮಕೂರು ಜಿಲ್ಲೆಯ ಹೇಮಾವತಿ ನೀರೀನ ಪಾಲು 24 ಟಿ.ಎಂ.ಸಿ. ಇದ್ದು, ಎಂದೂ ಸಹ ನಮಗೆ ಪೂರ್ಣ ಪ್ರಮಾಣದ ನೀರನ್ನು ಕೊಟ್ಟಿಲ್ಲ, ಇದನ್ನು ಸಾರ್ವಜನಿಕರು ಅಷ್ಟೆ ಅಲ್ಲದೇ, ರಾಜಕಾರಣಿಗಳು ಇದನ್ನು ಅರ್ಥ ಮಾಡಿಕೊಳ್ಳಬೇಕು, ಕೇವಲ ಆಧಿಕಾರಕ್ಕಾಗಿ ತನ್ನ ನಾಯಕನೆಂದು ದೂರದ ಬೆಟ್ಟವನ್ನು ಆಸೆಪಡಬೇಡಿ, ನಮ್ಮ ಜಿಲ್ಲೆಗೆ ಹೇಮಾವತಿ ನೀರನ್ನು ಬೀಡಲು ನಿರಾಕರಿಸಿ ಸಮುದ್ರ ಪಾಲು ಮಾಡಿದವರು ಇಂದು ಈ ಜಿಲ್ಲೆಯ ರಾಜಕಾರಣಕ್ಕೆ ಕೈ ಹಾಕಿದ್ದಾರೆ,
ನಮ್ಮ ಮನೆಯ ಯಜಮಾನನಾಗಲು ಬರುತ್ತಿದ್ದಾರೆ ಇಂತಹವರನ್ನು ತಿರಸ್ಕಾರಿಸಿ ತಕ್ಕ ಪಾಠ ಕಲಿಸಿ, ನಾನು ಸಂಸದನಾಗಿದ್ದ ಸಂದರ್ಭದಲ್ಲಿ ಹೆಚ್ಎಎಲ್ ಹಾಗೂ ರೈಲ್ವೆ ಯೋಜನೆಗಳು,ನೀರಾವರಿ,ಹೇಮವತಿ ನೀರು ಸೇರಿದಂತೆ ಹಲವಾರು ಯೋಜನೆಗಳನ್ನು ತಂದಿದ್ದೇನೆ.ಹಾಗಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ರಾಷ್ಟ್ರದಲ್ಲಿ ಪ್ರಧಾನಿಯನ್ನಾಗಿ ನೋಡುವ ನಿಟ್ಟಿನಲ್ಲಿ ಜಿಲ್ಲೆಯಿಂದ ನನ್ನನ್ನು ಅತ್ಯುತ್ತಮ ಮತಗಳಿಂದ ಗೆಲಿಸಬೇಕು ಎಂದರು.
ಮಾಜಿ ಶಾಸಕರಾದ ಸುರೇಶ್ ಗೌಡ ರವರು ಮಾತನಾಡಿ ಗ್ರಾಮಾಂತರ ಕ್ಷೇತ್ರದಲ್ಲಿ ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಲ್ಲಿ ಹಲವಾರು ಬಾರಿ ಕರೆದುಕೊಂಡಿ ಹೋಗಿ ಹೆಚ್ಚು ಅನುದಾನ ತರಲು ಕಾರಣರಾಗಿದ್ದ ಅಂದಿನ ಸಂಸದರಾದ ಜಿ.ಎಸ್. ಬಸವರಾಜು ರವರನ್ನು ಮತ್ತೊಮ್ಮೆ ಸಂಸದರಾಗಿ ಆಯ್ಕೆ ಮಾಡೋಣ ಅಭಿವೃದ್ದಿಗೆ ನಾಂದಿ ಹಾಡೋಣ, ಒಂದು ಕುಟುಂಬಕ್ಕೆ ಈ ರಾಜ್ಯವನ್ನು ಹಾಗೂ ನಮ್ಮ ಜಿಲ್ಲೆಯನ್ನು ಒತ್ತೆ ಇಡಲು ಸಾಧ್ಯವಿಲ್ಲ ಈ ಸಂದರ್ಭದಲ್ಲಿ ಅವರನ್ನು ಸೋಲಿಸಿ ಅಭಿವೃದ್ದಿಯ ಮಂತ್ರ ಜಪಿಸುತ್ತಿರುವ ನರೇಂದ್ರ ಮೋದಿರವರನ್ನು ಬೆಂಬಲಿಸಿ ಎಂದು ತಿಳಿಸಿದರು.
ಮಾಜಿ ಶಾಸಕ ನರೇಂದ್ರಬಾಬು ಮಾತನಾಡಿ,ಕಳೆದ 5 ವರ್ಷಗಳಲ್ಲಿ ವಿಶ್ವದ ಭೂಪಟದಲ್ಲಿ ಭಾರತದ ಸ್ಥಾನವೇ ಬದಲಾಗಿದೆ, ಭಾರತಕ್ಕೆ ಸಂಕಷ್ಟ ಬಂದರೆ ವಿಶ್ವವೇ ವಸುದೇವ ಕುಟುಂಬಕಂ ಎಂಬಂತೆ ಭಾರತದ ಪರವಾಗಿ ನಿಲ್ಲುವಂತೆ ಮಾಡಿದ ಸಾಧನೆ ಮೋದಿರವರಿಗೆ ಸಲ್ಲಬೇಕೆಂದರು. ರಾಷ್ಟ್ರದ ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗುವ ನಿಟ್ಟಿನಲ್ಲಿ ಜಿಲ್ಲೆಯಿಂದ ಜಿ.ಎಸ್ ಬಸವರಾಜುರವನ್ನು ಗೆಲ್ಲಿಸಬೇಕಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಹೆಬ್ಬೂರು ಹೋಬಳಿಯ ಹೊನ್ನುಡಿಕೆ,ನಾಗವಲ್ಲಿ,ಹೆಬ್ಬೂರಿನಲ್ಲಿ ರ್ಯಾಲಿ ಮಾಡುವ ಮೂಲಕ ಮತ ಪ್ರಚಾರ ಮಾಡಿದರು,ಜೊತೆಗೆ ಬಿಜೆಪಿ ಮತಪ್ರಚಾರ ಸಭೆ ಹಮ್ಮಿಕೊಳ್ಳಲಾಗಿತ್ತು.ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ,ಜಿ,ಪಂ ಸದಸ್ಯರಾದ ಗೂಳೂರು ಶಿವಕುಮಾರ್,ವೈ.ಎಚ್ ಹುಚ್ಚಯ್ಯ, ರಾಜೇಗೌಡ, ಮುಖಂಡರಾದ ರಾಮಚಂದ್ರಪ್ಪ, ಲಕ್ಷ್ಮೀಶ ಇನ್ನು ಮುಂತಾದವರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
