ಹಿರೇಕೆರೂರ :
ಬಿಜೆಪಿ ಪಕ್ಷದ ಹಾವೇರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಶಿವಕುಮಾರ ಉದಾಸಿಯವರ ಪರವಾಗಿ ಹಿರೇಕೆರೂರ ವಿಧಾನಸಭಾ ಕ್ಷೇತ್ರದಲ್ಲಿ ಬಿಜಾಪೂರದ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಪ್ರಚಾರ ಮಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷರಾದ ಶಿವರಾಜ ಸಜ್ಜನರ, ಮಾಜಿ ಶಾಸಕರಾದ ಯು.ಬಿ. ಬಣಕಾರ ಮತ್ತು ಡಿ.ಎಂ. ಸಾಲಿಯವರು, ಲಿಂಗರಾಜ ಚಪ್ಪರದಳ್ಳಿ, ಪಾಲಕ್ಷಗೌಡ ಪಾಟೀಲ, ಎಸ್.ಆರ್. ಅಂಗಡಿ, ಷಣ್ಮುಖ ಮಳಿಮಠ ಮತ್ತು ಪಕ್ಷದ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.