ಮುರುಘಾ ಮಠದಿಂದ ಬಸವ ಪ್ರಜ್ಞೆ ಜಾಗೃತ

ದಾವಣಗೆರೆ

       ಸಮಾಜದಲ್ಲಿ ಬಸವ ಪ್ರಜ್ಞೆ ಜಾಗೃತಗೊಳಿಸುವ ಕಾರ್ಯವನ್ನು ಚಿತ್ರದುರ್ಗದ ಮುರುಘರಾಜೇಂದ್ರ ಮಠ ಅತ್ಯಂತ ನಿಷ್ಠೆಯಿಂದ ಮಾಡಿಕೊಂಡು ಬರುತ್ತಿದೆ ಎಂದು ಶ್ರೀಮಠದ ಡಾ.ಶ್ರೀಶಿವಮೂರ್ತಿ ಮುರುಘಾ ಶರಣರು ತಿಳಿಸಿದರು.

          ನಗರದ ಶಿವಯೋಗಾಶ್ರಮದಲ್ಲಿ ನಡೆಯುತ್ತಿರುವ ಲಿಂ.ಶ್ರೀಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳ 62ನೇ ಸ್ಮರಣೋತ್ಸವ ಹಾಗೂ ಶರಣ ಸಂಸ್ಕøತಿ ಉತ್ಸವದ ಅಂಗವಾಗಿ ಭಾನುವಾರ ಬೆಳಿಗ್ಗೆ ನಡೆದ 3ನೇ ಸಹಜ ಶಿವಯೋಗದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಸಹಜ ಶಿವಯೋಗ ಹಾಗೂ ಶರಣ ಸಂಗಮ ಸೇರಿದಂತೆ ಹಲವು ಜನಮುಖಿ ಕಾರ್ಯಕ್ರಮಗಳ ಮೂಲಕ ರಾಜ್ಯ, ಹೊರ ರಾಜ್ಯ, ಹೊರ ರಾಷ್ಟ್ರಗಳಲ್ಲಿ ಬಸವ ಪ್ರಜ್ಞೆಯನ್ನು ಜಾಗೃತಗೊಳಿಸುವ ಕೀರ್ತಿ ಮುರುಘಾ ಮಠಕ್ಕೆ ಸಲ್ಲಲಿದೆ ಎಂದು ಹೇಳಿದರು.

          12ನೇ ಶತಮಾನದಲ್ಲಿ ಬಸವಾದಿ ಶರಣರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಶ್ರೀಮಠವು, ಸಮಾಜವನ್ನು ಜಾತ್ಯಾತೀತವಾಗಿ ಕಟ್ಟುವುದರ ಜೊತೆಗೆ ಸಮಾನತೆ, ಮಹಿಳಾ ಸ್ವಾತಂತ್ರ್ಯ ನೀಡುವ ಮೂಲಕ ಸರ್ವರ ಅಭಿವೃದ್ಧಿಗೆ ಶ್ರಮಿಸುತ್ತಿದೆ. 12ನೇ ಶತಮಾನದ ಬಳಿಕವೂ ಶರಣರು ಬಸವ ತತ್ವ ಪ್ರಚಾರದ ಮೂಲಕ ತಮ್ಮದೇಯಾದ ಕೊಡುಗೆ ನೀಡಿದ್ದಾರೆ. ತೋಂಟದಾರ್ಯ ಶ್ರೀಸಿದ್ದಲಿಂಗ ಶರಣರು, ಮುರುಗಿಯ ಶಾಂತವೀರ ಸ್ವಾಮೀಜಿಗಳಿಗೆ ಈ ಕೀರ್ತಿ ಸಲ್ಲುತ್ತದೆ ಎಂದರು.

         ಶರಣ ಸಂಸ್ಕತಿ ಉಳಿಸಿ, ಬೆಳೆಸುವಲ್ಲಿ ಹಲವಾರ ಸ್ವಾಮೀಜಿಗಳು, ಮಹನೀಯರು ಶ್ರಮಿಸಿದ್ದಾರೆ. ಇಲಕಲ್ಲಿನ ವಿಜಯ ಮಹಾಂತಸ್ವಾಮಿ, ನಾಗನೂರು, ಅಥಣಿ ಶ್ರೀಗಳು, ಫ.ಗು.ಹಳಕಟ್ಟಿ, ಹರ್ಡೇಕರ್, ಮಂಜಪ್ಪ ಅವರ ಕೊಡುಗೆಯೂ ಅಪಾರವಾಗಿದೆ ಎಂದರು.

          ಶ್ರೀಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಯವರು ಬಸವ ತತ್ವದ ಆಧಾರದ ಮೇಲೆ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ರಾಂತಿ ನಡೆಸಿದ್ದಾರೆ. ಕಳೆದ 28 ವರ್ಷಗಳಿಂದಲೂ ಬಸವ ತತ್ವ ಪಾಲನೆ ಹಾಗೂ ಪ್ರಸಾರದಲ್ಲಿ ಚಿತ್ರದುರ್ಗ ಬೃಹನ್ಮಠ ಹಲವು ಯೋಜನೆಗಳನ್ನು ಹಾಕಿಕೊಂಡಿದೆ. ಬೆಂಗಳೂರಿನಂತಹ ಮಹಾನಗರದಲ್ಲಿ ಬಸವಣ್ಣನವರ ಕಾರ್ಯಕ್ರಮಗಳಿಗೆ ಬಸವಣ್ಣನವರು ವಚನಗಳೇ ಹೇಳುತ್ತಿರಲಿಲ್ಲ. ಅಂತಹ ಸಂದರ್ಭದಲ್ಲಿ ಬಸವಣ್ಣನ ವಚನಗಳನ್ನು ಹೇಳುವಂತೆ, ಸಮಾರಂಭಗಳಲ್ಲಿ ಪ್ರಾರ್ಥನೆಗೆ ವಚನಗಳನ್ನೇ ಹಾಡುವಂತೆ ಮಾಡಲಾಗಿದೆ ಎಂದರು.

           ಬಸವಣ್ಣ ಎಂದರೆ ವಿಶ್ವ, ವಿಶ್ವ ಎಂದರೆ ವಿಶಾಲ. ಶರಣರ ಭಾವನೆಗಳು, ಅವರ ವಚನಗಳು ವಿಶಾಲವಾದ ಅರ್ಥವನ್ನು ಒಳಗೊಂಡಿವೆ. ಇವುಗಳನ್ನು ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳ ಮೂಲಕ ಪ್ರಚಾರಪಡಿಸಲಾಗುತ್ತಿದೆ. ಶರಣ ಸಂಸ್ಕತಿ ಎಂಬ ಎರಡು ಪದವು ವಿಶಾಲವಾದ ಅರ್ಥವನ್ನು ಒಳಗೊಂಡಿದೆ. ಬದುಕನ್ನು ಉದಾತ್ತಗೊಳಿಸುವುದು, ಪರಿಶ್ರಮಿಸುವುದು, ಸಂಸ್ಕಾರಗೊಳಿಸುವುದು, ಗೌರವಿಸುವುದು, ಒಗ್ಗೂಡಿಸುವುದು, ಕಟ್ಟುವುದು, ಸಮಾನತೆಯನ್ನು ತರುವುದು ಎಂಬುದಾಗಿ ಎಂದು ವಿಶ್ಲೇಷಿಸಿದರು.

          ಕಾರ್ಯಕ್ರಮದಲ್ಲಿ ವಿರಕ್ತಮಠದ ಶ್ರೀಬಸವಪ್ರಭು ಸ್ವಾಮೀಜಿ, ಅಥಣಿ ಗಚ್ಚಿನಮಠದ ಶ್ರೀಶಿವಬಸವ ಸ್ವಾಮೀಜಿ, ಶಿಕಾರಿಪುರದ ಶ್ರೀಚನ್ನಬಸವ ಸ್ವಾಮೀಜಿ, ಕವಲೆತ್ತು ಬಸವಕೇಂದ್ರದ ಶರಣೆ ಮುಕ್ತಾಯಕ್ಕ, ಶರಣೆ ಲಿಂಗದೇವಿ, ಧಾರವಾಡದ ಈಶ್ವರ ಸಾಣಿಕೊಪ್ಪ, ಹರಿಹರದ ಸುಬ್ರಮಣ್ಯ ನಾಡಿಗೇರ, ಜಿ.ಪಂ. ಸದಸ್ಯ ತೇಜಸ್ವಿ ಪಟೇಲ್ ಮತ್ತಿತರರು ಹಾಜರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap