ಹುಳಿಯಾರು
ಹುಳಿಯಾರು ಸಮೀಪದ ಬಸವಾಪಟ್ಟಣ ರಸ್ತೆ ತೀರ ಹದಗೆಟ್ಟಿದ್ದು, ವಾಹನ ಸವಾರರ ಓಡಾಟಕ್ಕೆ ತೀವ್ರ ತೊಡಕಾಗಿದೆ. ಹಾಗಾಗಿ ಶೀಘ್ರ ರಸ್ತೆ ದುರಸ್ಥಿಯಾಗಬೇಕು ಎಂದು ಹುಳಿಯಾರಿನ ರಾಕೇಶ್ ಅವರು ಮನವಿ ಮಾಡಿದ್ದಾರೆ
ರಾಷ್ಟ್ರೀಯ ಹೆದ್ದಾರಿ 150 ಎ ರಸ್ತೆಯ ಬೈರಾಪುರ ಗೇಟ್‍ನಿಂದ ಬಸವಾಪಟ್ಟಣದವರೆಗೂ 15 ವರ್ಷಗಳ ಹಿಂದೆ ಡಾಂಬರ್ ರಸ್ತೆ ನಿರ್ಮಿಸಲಾಗಿತ್ತು. ಆದರೆ ಕಾಲಕಾಲಕ್ಕೆ ರಸ್ತೆಯ ಗುಂಡಿ ಮುಚ್ಚುವುದು ಸೇರಿದಂತೆ ಸರಿಯಾದ ನಿರ್ವಹಣೆ ಇಲ್ಲದೆ ಇಂದು ತೀರ ಹದಗೆಟ್ಟಿದೆ. ಇಡೀ ರಸ್ತೆಯಲ್ಲಿ ಜಲ್ಲಿಕಲ್ಲುಗಳು ಎದ್ದು ವಾಹನಸವಾರರಿಗೆ ತೀವ್ರ ತೊಡಕುಂಟು ಮಾಡುತ್ತಿದೆ. ಅಲ್ಲದೆ ಅಲ್ಲಲ್ಲಿ ಗುಂಡಿಗಳು ಬಿದ್ದು ಸುಗಮ ಸಂಚಾರಕ್ಕೆ ತೊಡಕಾಗಿದೆ. ಈ ಬಗ್ಗೆ ಪಿಡಬ್ಲ್ಯೂಡಿ ಅಧಿಕಾರಿಗಳಿಗೆ ಪ್ರಶ್ನಿಸಿದರೆ ಈ ರಸ್ತೆ ಜಿಲ್ಲಾ ಪಂಚಾಯತ್ ವ್ಯಾಪ್ತಿಗೆ ಬರುತ್ತದೆ ಎಂದು ಹೇಳುತ್ತಾರೆ. ಹಾಗಾಗಿ ಜಿಪಂ ಎಂಜಿನಿಯರ್ ಹಾಗೂ ಜಿಪಂ ಸದಸ್ಯರು ಈ ಬಗ್ಗೆ ಗಮನ ಹರಿಸಿ ಮಳೆಗಾಲ ಆರಂಭವಾಗುವ ಮುಂಚೆ ರಸ್ತೆ ದುರಸ್ಥಿ ಮಾಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಮನವಿ ಮಾಡಿದ್ದಾರೆ. .