ತಿಪಟೂರು :
ರಾಷ್ಟ್ರೀಯ ಹಬ್ಬಗಳನ್ನು ಆಚರಿಸಲು ಅಧಿಕಾರಿಗಳಿಗೇ ಆಸಕ್ತಿಇಲ್ಲದಿದ್ದರೆ ಸಾರ್ವಜನಿಕರಿಗೆ ಹೇಗೆ ರಾಷ್ಟ್ರಾಭಿಮಾನ ಮೂಡುವುದು ಎಂದು ಸಭೆಗೆ ಹಾಜರಾಗದ ಅಧಿಕಾರಿಗಳ ವಿರುದ್ದ ಶಾಸಕ ಬಿ.ಸಿ.ನಾಗೇಶ್ ಕೋಪಗೊಂಡರು.
ನರದ ತಾಲ್ಲೂಕು ಕಛೇರಿಯಲ್ಲಿ ಇಂದು ಆಯೋಜಿಸಿದ್ದ ಜನವರಿ 26ರ ಗಣರಾಜ್ಯೋತ್ಸವ ತಯಾರಿಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಸರ್ಕಾರಿ ಹುದ್ದೆಯಲ್ಲಿ ಇದ್ದಕೊಂಡು ಸರ್ಕಾರದ ಸೌಲಭ್ಯವನ್ನು ಪಡೆಯುತ್ತಿರುವ ಅಧಿಕಾರಿಗಳಿಗೇ ಆಸಕ್ತಿ ಇಲ್ಲದಿರುವುದು ನಾಚಿಕೆಗೇಡಿನ ಸಂಗತಿ. ಇಂದು ನಮ್ಮ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನದಿಂದ ನಾವಿಂದು ಸ್ವತಂತ್ರ್ಯರಾಗಿದ್ದು ಇದರ ಫಲವಾಗಿಯೇ ಸಂವಿಧಾನವನ್ನು ಅಳವಡಿಸಿಕೊಂಡ ದಿನವಾಗಿ ಗಣರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ .
ಆದರೆ ಇಲ್ಲದ ನೆಪವೊಡ್ಡಿ ಮುಖ್ಯ ಅಧಿಕಾರಿಗಳೂ ಸಭೆಗೆ ಬಾರದೇ ಕಛೇರಿಯ ಸಿಬ್ಬಂದಿಗಳನ್ನು ಸಭೆಗಳ ಕಳುಸಿಕೊಡುತ್ತಿರುವುದು ಅಧಿಕಾರಿಗಳ ರಾಷ್ಟ್ರಾಭಿಮಾನ ಎಂತಹದ್ದು ಎಂದು ತಿಳಿಸುತ್ತದೆ ಆದ್ದರಿಂದ ಇಂದು ಸಭೆಗೆ ಗೈರು ಹಾರಾಗಿದ್ದ ಸಣ್ಣಕೈಗಾರಿಕಾ ಇಲಾಖೆ, ಸಣ್ಣ ನೀರಾವರಿ ಇಲಾಖೆ, ಅಬಕಾರಿ ಇಲಾಖೆ, ಖಜಾನೆ ಇಲಾಖೆ, ಕಾರ್ಮಿಕ ಇಲಾಖೆ, ಪಶುಸಂಗೋಪಾನ ಇಲಾಖೆ, ಸಹಕಾರ ಸಂಘಗಳ ಇಲಾಖೆ ಮತ್ತು ಇನ್ನಿತರ ಇಲಾಖೆಗಳಿಗೆ ನೋಟೀಸ್ ನೀಡುವಂತೆ ದಂಡಾಧಿಕಾರಿಗಳಿಗೆ ಸೂಚಿಸಿದರು.
ಹಾಸ್ಟೆಲ್ಗಳಲ್ಲಿ ಗಣರಾಜ್ಯೋತ್ಸವ ಆಚರಿಸಿ : ತಾಲ್ಲೂಕಿಗೆ ನೂತನ ದಂಡಾಧಿಕಾರಿಗಳಾಗಿ ಆಗಮಿಸಿರುವ ಆರತಿರವರು ಇಂದು ಹಾಸ್ಟೆಲ್ಗಳಲ್ಲಿ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಹಬ್ಬಗಳ ಕುರಿತು ರಸಪ್ರಶ್ನೆ, ಪ್ರಬಂಧ ಸ್ಫರ್ಧೆ, ಆಶುಭಾಷಣ ಸ್ಫರ್ಧೆಗಳನ್ನು ಆಯೋಜಿಸಿ ವಿದ್ಯಾರ್ಥಿಗಳಲ್ಲಿ ಬಹುಮಾನಗಳನ್ನು ವಿತರಿಸಿ ರಾಷ್ಟ್ರಪ್ರೇಮವನ್ನು ಮೂಡಿಸಬೇಕು ಇಂತಹ ಕಾರ್ಯಗಳು ಹಾಸ್ಟೆಲ್ ಮತ್ತು ಶಾಲೆಗಳಲ್ಲಿ ಮೊದಲು ಪ್ರಾರಂಭವಾಗಬೇಕೆಂದು ಸಲಹೆ ನೀಡಿದರು.
ಸಭೆಯಲ್ಲಿ ಭಾಗವಹಿಸಿದ್ದ ಕ್ಷೇತ್ರಶಿಕ್ಷಣಾಧಿಕಾರಿ ಮಂಗಳಗೌರಮ್ಮ ನಮ್ಮ ಇಲಾಖೆಯ ವತಿಯಿಂದ ರಾಷ್ಟ್ರೀಯ ಹಬ್ಬಕ್ಕೆ ಸಕಲರೀತಿಯಲ್ಲಿ ಸಿದ್ದಗೊಂಡಿದ್ದೇವೆ ಮತ್ತು ತಾಲ್ಲೂಕು ದೈಹಿಕ ಶಿಕ್ಷಣ ನಿರ್ದೇಶಕರಾದ ಸಿ.ಡಿ.ಎಸ್ ಮೂರ್ತಿರವರು ಎಲ್ಲಾ ಕಾರ್ಯಕ್ರಮಗಳನ್ನು ಸಿದ್ದಪಡಿಸಲಾಗುತ್ತಿದೆ ಎಂದು ತಿಳಿಸಿದರು.ಸಭೆಯಲ್ಲಿ ತಾಲ್ಲೂಕಿನ ಎಲ್ಲಾ ಇಲಾಖೆಯ ಮುಖ್ಯಸ್ಥರುಗಳು ಹಾಜರಿದ್ದು ರಾಷ್ಟ್ರೀಯ ಹಬ್ಬದ ಆಚರಣೆಗ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ