ಪಾವಗಡ
ಪಾವಗಡ ತಾಲ್ಲೂಕಿಗೆ ಭದ್ರಾಮೇಲ್ದಂಡೆ ಯೋಜನೆಯ ಮೂಲಕ ನೀರು ಹರಿಸುವ ಕಾಮಗಾರಿಗೆ ಚಾಲನೆ ನೀಡದೆ ರೈತರ ಬದುಕಿನಲ್ಲಿ ಚೆಲ್ಲಾಟವಾಡುತ್ತಿರುವ ಸರ್ಕಾರದ ವಿರುದ್ದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪಾವಗಡ ಘಟಕದಿಂದ ಸೋಮವಾರ ತಾಲ್ಲೂಕು ಕಚೇರಿ ಮುಂದೆ ನೀರಿಗಾಗಿ ಧÀರಣಿ ನಡೆಸಲಾಯಿತು.
ಸಂಘದ ರಾಜ್ಯಾಧ್ಯಕ್ಷ ಕೆ.ಟಿ.ಗಂಗಾಧರ ಮಾತನಾಡಿ, ಸರ್ಕಾರ ರೈತರ ಜೀವನದೊಂದಿಗೆ ಚೆಲ್ಲಾಟವಾಡುವುದನ್ನು ನಿಲ್ಲಿಸಬೇಕು. ಭದ್ರಾಮೇಲ್ದಂಡೆ ಯೋಜನೆಯ ಮೂಲಕ ನೀರು ಹÀರಿಸಲು ಶೀಘ್ರವಾಗಿ ಕ್ರಮ ತೆಗೆದುಕೊಂಡು ಪಾವಗಡ ತಾಲ್ಲೂಕಿನಲ್ಲಿ ಭೂಮಿ ಪೂಜೆ ನೆರವೇರಿಸಬೇಕಿದೆ.
ರಾಜಕೀಯವೆಂದರೆ ಬರೀ ಸುಳ್ಳಿನ ಕಂvಯಾಗಬಾರದು. ತಾಲ್ಲೂಕಿನ ರೈತರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು. ರೈತರು ಬ್ಯಾಂಕ್‍ಗಳಲ್ಲಿ ಮತ್ತು ಖಾಸಗಿ ವ್ಯಕ್ತಿಗಳ ಬಳಿ ಸಾಲ ಪಡೆದು ಸಂಕಷ್ಟದಲ್ಲಿದ್ದಾರೆ. ಮರುಪಾವತಿಗಾಗಿ ಒತ್ತಡವಿದ್ದಲ್ಲಿ ಧೃತಿಗೆಡದೆ ಹಾಗೂ ಆತ್ಮಹತ್ಯೆ ಮಾಡಿಕೊಳ್ಳದೆ ಪೆÇಲೀಸ್ ಸ್ಟೇಷನ್‍ನಲ್ಲಿ ನೇರವಾಗಿ ಮೊಕದ್ದಮೆ ದಾಖಲಿಸುವಂತೆ ರೈತರಿಗೆ ಕರೆ ನೀಡಿದರು.
ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಪೂಜಾರಪ್ಪ ಮಾತನಾಡಿ, ತಾಲ್ಲೂಕಿನಲ್ಲಿ ರೈತರ ಜೀವನೋಪಾಯಕ್ಕೆ ಲಭ್ಯವಿರುವ ಭೂಮಿಗೆ ಸರ್ಕಾರ ಮತ್ತು ಜನಪ್ರತಿನಿಧಿಗಳು ಸೇರಿ ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿಯನ್ನು ಜರೂರಾಗಿ ಮುಗಿಸಿದರೆ ತಾಲ್ಲೂಕಿನಲ್ಲಿ ಜನರ ಆತ್ಮಹತ್ಯೆ ಹಾಗೂ ಉದ್ಯೋಗ ಅರಸಿಕೊಂಡು ಜನರು ಗುಳೆ ಹೋಗುವುದನ್ನು ತಪ್ಪಿಸಬಹುದಾಗಿದೆ.
ಅಭಿವೃದ್ದಿ ಹೆಸರಿನಲ್ಲಿ ವಿನಾಕಾರಣ ಕಾಲಹರಣ ಮಾಡುತ್ತಿರುವ ಜನಪ್ರತಿನಿಧಿಗಳು ಮತ್ತು ಸರ್ಕಾರ ಈ ನಿಟ್ಟಿನಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಬರಪೀಡಿತ ಪ್ರದೇಶ, ಗಡಿ ಪ್ರದೇಶ ಎಂಬ ಹೆಸರಿಟ್ಟು ಅಭಿವೃದ್ದಿಗೆ ಸ್ಪಂದಿಸದೆ ಕೇವಲ ಚುನಾವಣಾ ಸಮಯದಲ್ಲಷ್ಟೇ ಜನತೆಗೆ ಆಮಿಷಗಳ ಮಹಾಪೂರವನ್ನು ಹರಿಸುವ ರಾಜಕಾರಣಿಗಳು ಒಂದಿಷ್ಟು ಒಳ್ಳೆಯ ಕೆಲಸ ಮಾಡಿದರೆ ತಾಲ್ಲೂಕಿನ ಸಕಲ ಜೀವರಾಶಿಗೂ ಅನುಕೂಲವಾಗುತ್ತದೆ ಎಂಬುದು ರೈತರ ಮನದಾಳದ ಮಾತಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದರ್ಶಿ ರವೀಶ್, ಜಿಲ್ಲಾಧ್ಯಕ್ಷ ಎ.ಗೋವಿಂದರಾಜು, ತಾಲ್ಲೂಕು ಘಟಕದ ಉಪಾಧ್ಯಕ್ಷ ತಿಮ್ಮರಾಯಪ್ಪ, ಗೌರವಾಧ್ಯಕ್ಷ ರಾಮಾಂಜಿನಪ್ಪ, ಪ್ರಧಾನ ಕಾರ್ಯದರ್ಶಿ ತಿಮ್ಮರಾಯ, ಸಂಘಟನಾ ಕಾರ್ಯದರ್ಶಿ ಕರಿಯಣ್ಣ.ಬಿ, ಮುಖಂಡರಾದ ಮಂಜುನಾಥ್, ಕೆ.ಈ. ಗೋಪಾಲ್, ಈರಣ್ಣ, ರಾಮಾಂಜಿನಪ್ಪ, ಕೃಷ್ಣಪ್ಪ, ಚಿಕ್ಕಣ್ಣ, ಬೋರಣ್ಣ, ರಂಗಸ್ವಾಮಿ, ಹನುಮಂತರಾಯ ಮುಂತಾದ ರೈತಮುಖಂಡರು ಹಾಗೂ ಸಾರ್ವಜನಿಕರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ.
