ಹಾವೇರಿ-
ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿಕಾರಿಶಹೀದ್ ಭಗತ್ ಸಿಂಗ್ ವಿದ್ಯಾರ್ಥಿಯುವಜನರಆಶಾಕಿರಣ ಭಗತ್ ಸಿಂಗ್ ಅವರ ಆಶಯಗಳನ್ನು ಮುಂದಕ್ಕೆ ಒಯ್ಯುವ ಹಾಗೂ ಅವರ ಕನಸಿನ ಭಾರತವನ್ನು ನಿರ್ಮಾಣ ಮಾಡುವ ಮಹತ್ತರ ಜವಾಬ್ದಾರಿ ಇಂದಿನ ವಿದ್ಯಾರ್ಥಿ- ಯುವ ಜನರ ಮೇಲಿದೆ ಎಂದು ಸಿಐಟಿಯು ಜಿಲ್ಲಾ ಸಂಚಾಲಕರಾದ ವಿನಾಯಕ ಕುರುಬರ ಹೇಳಿದರು.
ಭಾರತ ವಿದ್ಯಾರ್ಥಿ ಫೆಡರೇಶನ್ (SFI) ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಭಗತ್ ಸಿಂಗ್ 111ನೇ ಜನ್ಮದಿನಾಚಾರಣೆ ಅಂಗವಾಗಿ ಸಮಾಜ ಕಲ್ಯಾಣ ಇಲಾಖೆಯ ಬಾಲಕರ ವಸತಿ ನಿಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇಶಪ್ರೇಮ–ದೇಶದ್ರೋಹದಕುರಿತಾದ ಚರ್ಚೆಗಳು ಇಂದಿನ ದಿನಗಳಲ್ಲಿ ಸಮಾನ್ಯಎಂಬುವಂತಾಗಿದೆ.
ಆಳುವ ಪ್ರಭುತ್ವವನ್ನು ಪ್ರಶ್ನಿಸುವುದನ್ನೇದೇಶದ್ರೋಹಎಂದು ಬಿಂಬಿಸಲಾಗುತ್ತಿದೆ. ಧರ್ಮರಾಜಕಾರಂದಿಂದಾಗಿರಾಜಕೀಯ ವ್ಯವಸ್ಥೆಎಂದರೆ ಇಂದಿನ ವಿದ್ಯಾರ್ಥಿಯುವಜನರುದೂರ ಹೋಗುವಂತಹ ವಾತವರಣ ನಿಮಾರ್ಣವಾಗುತ್ತಿದೆ. ಯುವ ಭಾರತವನ್ನುಕಟ್ಟಬೇಕು ಎಂಬ ಮಾತುಗಳೊಂದಿಗೆ ರಾಜಕೀಯ ಪಕ್ಷಗಳು ಅಧಿಕಾರಕ್ಕೇರುತ್ತವೆಆದರೆಅಧಿಕಾರಕ್ಕೆ ಬಂದ ಮೇಲೆ ಉದ್ಯೋಗ ಸೃಷ್ಠಿಸಬೇಕಾದ ಆಳುವ ಸರ್ಕಾರಗಳು ವಿದ್ಯಾರ್ಥಿಯುವಜನರ ಕೈಗೆ ಧರ್ಮದ ಹೆಸರಿನಲ್ಲಿ ಆಯುಧಗಳನ್ನು ನೀಡುತ್ತಿರುವುದು ದೇಶದ ದುರಂತವಾಗಿದೆ ಎಂದರು.
ಭಗತ್ಸಿಂಗ್ ತನ್ನ 23ನೇ ವಯಸ್ಸಿನಲ್ಲಿಯೇ ದೇಶಕ್ಕಾಗಿ ಗಲ್ಲಿಗೇರಿದ ಕ್ರಾಂತಿಕಾರಿ ಹಿರೋ ಕಂಡ ಕನಸಿನ ಭಾರತ ನಿಮಾರ್ಣವಾಗಲಿಲ್ಲ ಸಮಾನತೆ, ಶಿಕ್ಷಣ, ಸೌಹಾರ್ದತೆ ಬಯಸಿದ್ದ ಭಗತ್ಸಿಂಗ್,ಇಂದು ಹಬ್ಬಗಳ ಹೆಸರಲ್ಲಿ ಒಂದಾಗಬೇಕಾಗಿದ್ದ ಸಮುದಾಯಗಳು ಗಲಭೆ ಎಬ್ಬಿಸುವಂತಹ ವಾತಾವರಣ ನಿಮಾರ್ಣವಾಗುತ್ತದೆ. ಆದ್ದರಿಂದ ಇಂದಿನ ವಿದ್ಯಾರ್ಥಿ-ಯುವಜನರು ಭಗತ್ಸಿಂಗ್ ಕನಸ್ಸಿನ ಭಾರತ ನಿರ್ಮಾಣಕ್ಕಾಗಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕಿದೆ ಎಂದರು ವೇದಿಕೆಯ ಮೇಲೆ ಹಾಸ್ಟಲ್ ಮೇಲ್ವಿಚಾರಕರಾದ ಮೂರ್ತಿ, SFIಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಬೋವಿ ಮುಖಂಡರಾದ ಬಸವನಗೌಡ, ಮೋಹನ, ಸುಭಾಸ ಲಮಾಣಿ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ