ಭಾರತ್ ಕೆ ಮನ್ ಕಿ ಬಾತ್ ಮೋದಿ ಕಿ ಸಾಥ್ ಕಾರ್ಯಕ್ರಮಕ್ಕೆ ಚಾಲನೆ

ಹರಪನಹಳ್ಳಿ
   
        ಪ್ರಧಾನಿ ನರೇಂದ್ರ ಮೋದಿಜೀಯವರ ಭಾರತ್ ಕ ಮನ್ ಕಿ ಬಾತ್ ಮೋದಿ ಕಿ ಸಾಥ್ ಕಾರ್ಯಕ್ರಮದ ಅಂಗವಾಗಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಪತ್ರದ ಮುಖೇನ ತಿಳಿಸಲು ಸಲಹಾ ಸೂಚನಾ ಪೆಟ್ಟಿಗೆ ಇಡಲಾಗಿತ್ತು.
 ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದ ಬಗ್ಗೆ ತಮ್ಮ ಅನಿಸಿಕೆ ಅಭಿಪ್ರಾಯ ಸಲಹೆ ಹಾಗೂ ಸೂಚನೆಗಳನ್ನು ತಿಳಿಸಲು ಸಾವಿರಕ್ಕೂ ಹೆಚ್ಚು ಜನ ಚೀಟಿಯಲ್ಲಿ ಬರೆದು ಸಲಹಾ ಪೆಟ್ಟಿಗೆಯಲ್ಲಿ ಹಾಕಿದರು.
 
       ಬಿಜೆಪಿ ತಾಲೂಕು ಅಧ್ಯಕ್ಷ ಕೆ.ಲಕ್ಷ್ಮಣ್ ಮಾತನಾಡಿ. ಪ್ರಧಾನಿಯವರು ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ಪಕ್ಷದ ಪ್ರನಾಳಿಕೆಯಲ್ಲಿ ಏನೇನಿರಬೇಕು ಎಂದು ಸಲಹೆ ಸೂಚನೆ ನೀಡಲು ಸಾರ್ವಜಕರಿಗೆ ಮುಕ್ತ ಅವಕಾಶವನ್ನು ಈ ಮೂಲಕ ನೀಡಿದ್ದಾರೆ. ಅವರ ಆಡಳಿತಾವಧಿಯಲ್ಲಿನ ಲೋಪ ದೋಷಗಳನ್ನು, ಉತ್ತಮ ಆಡಳಿತ ವೈಖರಿಯನ್ನ ಹಾಗೂ ಇನ್ನೂ ಅವಶ್ಯಕವಾಗಿ ದೇಶದ ಅಭಿವೃದ್ದಿಗಾಗಿ ಬೇಕಾದ ಸಲಹೆಗಳನ್ನು ಈ ಪೆಟ್ಟಿಗೆಯಲ್ಲಿ ಬರೆದು ತಿಳಿಸುವಂತೆ ಕೋರಲಾಗಿದೆ ಎಂದರು.
 
        ಕಾರ್ಯಕ್ರಮದಲ್ಲಿ ತಾಲೂಕು ಉಪಾಧ್ಯಕ್ಷ ಕಣಿವಿಹಳ್ಳಿ ಮಂಜುನಾಥ್, ಮುಖಂಡ ಬೆಣ್ಣಿಹಳ್ಳಿ ರೇವಣ್ಣ ಸೇರಿದಂತೆ ಅನೇಕ ಮುಖಂಡರು  ಹಾಗೂ ಕಾರ್ಯಕರ್ತರು ಇದ್ದರು.
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link