ಸ್ವಿಗ್ಗಿಗೆ ಖಡಕ್ ಎಚ್ಚರಿಕೆ ನೀಡಿದ ಭಾಸ್ಕರ್ ರಾವ್

ಬೆಂಗಳೂರು

   ಬೆಂಗಳೂರು ನಗರಾಧ್ಯಂತ ಅತಿ ಹೆಚ್ಚು ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿರುವುದು ರೆಸ್ಟೋರೆಂಟ್‌ಗಳಿಂದ ಮನೆ ಅಥವಾ ಕಚೇರಿಗಳಿಗೆ ಆಹಾರ ಸರಬರಾಜು ಮಾಡುವ ವಿವಿಧ ಕಂಪೆನಿಗಳ ಡೆಲಿವರ್ ಬಾಯ್‌ಗಳು ಎಂಬ ಆರೋಪವಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನಗರದ ಪೊಲೀಸ್ ಆಯುಕ್ತ ಭಾಸ್ಕರರಾವ್, ಎಲ್ಲಾ ಆಹಾರ ಸರಬರಾಜು ಕಂಪನಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

   ಗ್ರಾಹಕರಿಗೆ ನಿರ್ದಿಷ್ಟ ಸಮಯದಲ್ಲಿ ಆಹಾರ ಡೆಲಿವರಿ ಮಾಡುವ ಧಾವಂತದಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿ ಹೋಗುತ್ತಾರೆ. ಇದರಿಂದ ಅವರು ಅನೇಕ ಬಾರಿ ಅಪಘಾತಕ್ಕೆ ತುತ್ತಾದ ಘಟನೆಗಳು ನಡೆದಿವೆ. ಹಾಗೆಯೇ ಪೊಲೀಸರಿಂದ ದಂಡಕ್ಕೂ ಒಳಗಾಗಿದ್ದಾರೆ.

    ಆಹಾರ ಪೂರೈಕೆ ಮಾಡುವಾಗ ತಡವಾದರೆ, ಆಹಾರ ಬಿಸಿ ಇಲ್ಲದಿದ್ದರೆ ಕಂಪೆನಿಗಳಿಗೆ ಗ್ರಾಹಕರು ದೂರು ನೀಡುತ್ತಾರೆ. ಇದಕ್ಕೆ ಡೆಲಿವರಿ ಬಾಯ್‌ಗಳೇ ಬಲಿಪಶುಗಳಾಗುತ್ತಾರೆ. ಇದರ ವಿರುದ್ಧ ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದನ್ನು ಗಮನಿಸಿರುವ ಭಾಸ್ಕರ ರಾವ್, ಸಂಚಾರ ನಿಯಮಗಳನ್ನು ಪಾಲಿಸುವಂತೆ ಹಾಗೆಯೇ ಡೆಲಿವರಿ ಬಾಯ್‌ಗಳನ್ನು ದಂಡಿಸದಂತೆ ಕಂಪೆನಿಗಳಿಗೆ ಸೂಚನೆ ನೀಡಿದ್ದಾರೆ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link