ಹೊಸದುರ್ಗ:
ಭೂಮಿಯ ಫಲವತ್ತತೆ ಕಂಡುಕೊಳ್ಳಲು ಸಾವಯವ ಗೊಬ್ಬರ ಬಳಕೆ ಉತ್ತಮ ಎಂದು ಹಿರಿಯ ಜೆ.ಎಂ.ಎಫ್.ಸಿ ಸಿವಿಲ್ ನ್ಯಾಯಾಧೀಶರಾದ ಬಿ.ಜಿ.ದಿನೇಶ್ ತಿಳಿಸಿದರು.ಪಟ್ಟಣದ ನ್ಯಾಯಾಲಯ ಆವರಣದಲ್ಲಿ ಆಯೋಜಿಸಿದ್ದ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅಭಿಯೋಜನಾ ಇಲಾಖೆ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ಭೂ ದಿನಾಚರಣೆ ಮತ್ತು ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಭೂಮಿಯಲ್ಲಿ ಬೆಳೆದ ಫಸಲು ಜೀವಕುಲಕ್ಕೆ ಹಿತಕಾರಿ ಆಗುವುದಲ್ಲದೆ ಆರೊಗ್ಯಕರ ಬದುಕು ಸಾಗಿಸುವಲ್ಲಿ ನೆರವಾಗುತ್ತದೆ. ಭೂಮಿಯ ಕಾವು ವರ್ಷ ವರ್ಷ ಹೆಚ್ಚಾಗುತ್ತಿದೆ, ಕುಡಿಯಲು ನೀರು ಸಿಗುತ್ತಿಲ್ಲ, ಹಿಂದೆ ವರ್ಷ ಪೂರ್ತಿ ವೇದಾವತಿ ನದಿಯಿಂದ ನೀರು ಹರಿಯುತ್ತಿತ್ತು ಗುಂಡಿ, ಕೆರೆಗಳಲ್ಲಿ, ಮನೆ ತಳಪಾಯ ಹಾಕಲು ನೀರು ಸಿಗುತ್ತಿತ್ತು ಆದರೆ ಇಂದು ಅಂತರ್ಜಾಲ ಕುಸಿದು 150ರಿಂದ 1000ಅಡಿವರೆಗೆ ಬೋರ್ ವೆಲ್ ಕೊರೆಸಿದರೂ ನೀರು ಸಿಗುತ್ತಿಲ್ಲ ಎಂದರು.
ಮರ ಗಿಡಗಳಿಂದ ಗಾಳಿ ಸಿಗುತ್ತಿತ್ತು ಆದರೆ ಗಾಳಿಯೂ ಕೂಡ ವಿಷವಾಗಿದೆ, ಮರ ಗಿಡಗಳನ್ನು ಕಡಿಯುವುದು ಮನುಷ್ಯನನ್ನು ಕೊಲೆ ಮಾಡಿದ ಹಾಗೆ, ಇಲ್ಲಿ ಉತ್ತಮವಾದ ಆಹಾರವಿಲ್ಲ, ಕೆರೆ ಸಮುದ್ರಗಳನ್ನು ಕಲುಷಿತ ಮಾಡುತ್ತಿದ್ದೇವೆ, ಹತ್ತಾರು ವರ್ಷಗಳಿಂದ ಹಿರಿಯರು ಭೂಮಿಯನ್ನು ಕಾಪಾಡಿಕೊಂಡು ಬಂದಿದ್ದಾರೆ ಆದರೆ ಇರುವುದೊಂದೆ ಭೂಮಿಯನ್ನು ಕಾಪಾಡಿಕೊಳ್ಳದೇ ಅತ್ಯಾಚಾರ ಮಾಡುತ್ತಿದ್ದೇವೆ.
ಭೂಮಿಗೆ ಪರ್ಯಾಯ ವ್ಯವಸ್ಥೆ ಇಲ್ಲ, ಪೂರ್ವಜರು ಇದ್ದಾಗ ಸರಿಯಾಗಿ ನೀರು ಸಿಗುತ್ತಿತ್ತು ಆದರೆ ಈಗಿನ ನಾಗರೀಕರು ದುರಾಸೆ, ಖುಲಾಸೆ ಜೀವನದಿಂದ ಭೂಮಿಯನ್ನು ಬರಡು ಮಾಡುತ್ತಿದ್ದೇವೆ ಅದಕ್ಕಾಗಿ ಪ್ರತಿಯೊಬ್ಬ ನಾಗರೀಕನು ಭೂಮಿಯ ಬಗ್ಗೆ ಕಾಳಜಿ ವಹಿಸಿ ವಹಿಸಬೇಕು ಎಂದರು.
ಜೆ.ಎಂ.ಎಫ್.ಸಿ ಸಿವಿಲ್ ನ್ಯಾಯಾಧೀಶರಾದ ಪ್ರಶಾಂತ್ ನಾಗಲಾಪೂರ ಮಾತನಾಡಿ ಪ್ರತಿ ಕ್ಷಣಕ್ಕೂ ಬದಲಾಗುತ್ತಿರುವ ವಾತವಾರಣಕ್ಕೆ ಮನುಷ್ಯನ ಸ್ವಾರ್ಥಭರಿತ ಲಾಲಸೆಯೇ ಕಾರಣವಾಗಿದೆ. ಅರಣ್ಯ ಹಾಗೂ ಮಲೆನಾಡಿನಲ್ಲಿ ಹುಟ್ಟುವ ನದಿಗಳನ್ನು ಕಲುಷಿತಗೊಳಿಸದಂತೆ ತಡೆಯಬೇಕಾದ ಕರ್ತವ್ಯ ನಾಗರೀಕರನದ್ದು. ಪ್ರಕೃತಿಯಲ್ಲಿನ ಅರಣ್ಯ ಸಾಗರದಲ್ಲಿನ ಜೀವ ಚರಗಳನ್ನು ಸಂರಕ್ಷಿಸುವುದು ಇಂದಿನ ಅವಶ್ಯಕತೆಯಾಗಿದೆ. ಭೂಮಿಯ ಪರಿಸರ ಸಮತೋಲನ ಕಾಡುವ ಜವಾಬ್ದಾರಿ ಪ್ರತಿ ನಾಗರೀಕನ ಮೇಲೆದೆ ಎಂದರು.
ಜಲ ನಿವಾರಣೆ ನೀಗಿಸಲು ಬೋರ್ ವೆಲ್ ಗಳನ್ನು ಕೊರೆಸಿದರೆ ಸಾಲದು ಅದರ ಅಂತರ್ಜಲ ಮಟ್ಟ ಹೆಚ್ಚಿಸುವಲ್ಲಿ ಚಿಂತನೆ ನಡೆಸಬೇಕು ಹಾಗೂ ಇಂಗು ಗುಂಡಿಗಳ ವ್ಯವಸ್ಥೆ ಮಾಡಿ ನೀರು ಪೋಲಾಗದಂತೆ ನೋಡಿ ಕೊಳ್ಳಬೇಕು. ಪ್ರತಿಯೊಬ್ಬರೂ ಕಾನೂನನ್ನು ಪಾಲಿಸಬೇಕು. ಕಾನೂನು ಸೇವೆಗಳ ಸಮಿತಿಯಿಂದ ಉಚಿತ ಕಾನೂನು ಅರಿವು ನೀಡಲಾಗುವುದು. ಇದರ ಸದುಪಯೋಗ ಪಡಿಸಿಕೊಳ್ಳುವುದು ನಿಮ್ಮ ಕರ್ತವ್ಯ ಎಂದು ಹೇಳಿದರು.
ಇದೇ ವೇಳೆ ವಕೀಲರ ಸಂಘದ ಅದ್ಯಕ್ಷ ಎಸ್.ಎಸ್.ಕಲ್ಮಠ್, ಪಿಎಸ್‍ಐ ಶಿವನಂಜಶೆಟ್ಟಿ, ಸರ್ಕಾರಿ ಅಭಿಯೋಜಕ ಪ್ರಶಾಂತ್ ಕುಮಾರ್, ವಕೀಲ ಗುರುಬಸಪ್ಪ, ಸರ್ವ ಸದಸ್ಯರು ಮತ್ತು ಕಾರ್ಯದರ್ಶಿಗಳು ಇನ್ನು ಉಪಸ್ಥಿತರು ಹಾಜರಿದ್ದರು.