ಪಾವಗಡ
ಭೂ ಮಾಫಿಯಾಗಳು ಪಟ್ಟಣದ ಸರ್ವೇ ನಂಬರ್ 94/3 ನಲ್ಲಿ ಇರುವ ಬೆಟ್ಟವನ್ನು ಅಗೆದು ಭೂ ಪರಿವರ್ತನೆ ಮಾಡುತ್ತಿದ್ದಾರೆ. 23-24 ಗುಂಟೆ ಜಮೀನಲ್ಲಿ 3-19 ಗುಂಟೆ ಜಮೀನು ಕರಾಬು ಇದ್ದು, ಇದನ್ನು ಸಹ ಭೂಮಾಫಿಯಾಗಳು ಆಕ್ರಮಿಸಿಕೊಳ್ಳುತ್ತಿದ್ದಾರೆ ಎಂದು ರೈತ ಸಂಘದ ತಾಲ್ಲೂಕು ಅಧ್ಯಕ್ಷ ಪೂಜಾರಪ್ಪ ಆರೋಪಿಸಿದ್ದಾರೆ.
ಅವರು ಬುಧವಾರ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟಿಸಿ ಮಾತನಾಡಿ ಭೂಮಾಫಿಯಾಗಳು ಐತಿಹಾಸಿಕ ಬೆಟ್ಟಗಳನ್ನು ಅಗೆದು ಭೂಪರಿವರ್ತನೆ ಮಾಡಿ, ಸಾರ್ವಜನಿಕ ಆಸ್ತಿಯನ್ನು ಸೈಟ್ ಮಾಡಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸಾರ್ವಜನಿಕರ ಆಸ್ತಿ ಪಾವಗಡ ಸರ್ವೆನಂ.94/3 ರಲ್ಲಿ 23-24 ಗುಂಟೆ ಜಮೀನು ಇದ್ದು, ಇದರಲ್ಲಿ ಖರಾಬು 3-19 ಗುಂಟೆ ಜಮೀನು ಮೈಸೂರು ಸರ್ವೆ ಸೆಟ್ಲ್‍ಮೆಂಟ್ ಕಾಪಿಯಲ್ಲಿ ದಾಖಲಾಗಿದೆ. ಕರಾಬಿನಲ್ಲಿ ಇರುವ ಬೆಟ್ಟವನ್ನು ಅಗೆದು ಸೈಟ್ ಮಾಡಲು ಹೊರಟಿದ್ದು, ಇದನ್ನು ತಡೆಯಬೇಕೆಂದು ತಹಸೀಲ್ದಾರ್‍ಗೆ ರೈತರೊಂದಿಗೆ ಪ್ರಜಾರಪ್ಪ ಮನವಿ ಸಲ್ಲಿಸಿದ್ದಾರೆ.
ಆಂಧ್ರ ಪ್ರದೇಶದ ಭೂಮಾಫಿಯಾಗಳು ಈ ಜಮೀನನ್ನು ಕ್ರಯ ಮಾಡಿಕೊಂಡು ಭೂ ಪರಿವರ್ತನೆ ಮಾಡುತ್ತಿದ್ದು, ಇವರು ಎಷ್ಟು ಜಮೀನು ಕ್ರಯಕ್ಕೆ ಪಡೆದಿದ್ದಾರೆಯೊ ಅಷ್ಟು ಜಮೀನನ್ನು ಪರಿವರ್ತನೆ ಮಾಡಲಿ. ಕರಾಬಿನಲ್ಲಿ ಇರುವ 3-19 ಗುಂಟೆ ಜಮೀನಿನಲ್ಲಿ ಇರುವ ಬೆಟ್ಟವನ್ನು ಇಟಾಚಿ ಮತ್ತು ಜೆಸಿಬಿಗಳಿಂದ ಅಗೆದು ಪುರಾತನ ಬೆಟ್ಟವನ್ನು ಕರಗಿಸಿ, ಸಾರ್ವಜನಿಕರಿಗೆ ಉಪಯೋಗಕ್ಕೆ ಬರುವ ಬೆಟ್ಟವನ್ನು ಕಬಳಿಕೆ ಮಾಡುತ್ತಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ
ಪ್ರಕೃತಿಯ ಕೊಡುಗೆಗಳಾಗಿ ಇರುವ ಬೆಟ್ಟಗಳನ್ನು ಪಟ್ಟಣದ ಸುತ್ತ ಮುತ್ತ ಅಗೆದು ಭೂಪರಿವರ್ತನೆ ಮಾಡುತ್ತಿರುವ ಭೂಮಾಫಿಯಾಗಳು ಭೂಮಿಯನ್ನು ಕಬಳಿಸುತ್ತಿದ್ದಾರೆ. ಇದನ್ನು ತಡೆಗಟ್ಟುವುದನ್ನು ಬಿಟ್ಟು ಭೂಮಾಫಿಯಾಗಳಿಗೆ ಪರೋಕ್ಷವಾಗಿ ಮತ್ತು ಪ್ರತ್ಯಕ್ಷವಾಗಿ ಭೂಮಾಪನಾಧಿಕಾರಿಗಳು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಸಹ ಶಾಮೀಲಾಗಿರುತ್ತಾರೆ ಎಂದು ಆಕ್ರೋಶ ವ್ಯಕ್ತಡಿಸಿದ್ದಾರೆ.
ಪಾವಗಡ ಪಟ್ಟಣದ ಸುತ್ತ್ ಮುತ್ತ ಇರುವ ಬೆಟ್ಟಗಳನ್ನು ಭೂಕಳ್ಳರು ಅಕ್ರಮ ಮಾಡಿರುವ ಜಮೀನುಗಳನ್ನು ತೆರವು ಗೊಳಿಸಲು ಸರ್ಕಾರ ಮತ್ತು ಜಿಲ್ಲಾಧಿಕಾರಿಗಳು ಗಮನ ಹರಿಸಬೇಕೆಂದು ಒತ್ತಾಯಿಸಿದ್ದಾರೆ.ಈ ಸಂದರ್ಭದಲ್ಲಿ ರೈತರಾದ ಅಶ್ವತ್ಥಪ್ಪ, ನಡಿಪಣ್ಣ, ಲೋಕೇಶ್, ಸಿದ್ದಪ್ಪ, ಎಸ್.ಹನುಮಂತರಾಯಪ್ಪ, ಲಕ್ಷ್ಮನಾಯ್ಕ, ನಾಗರಾಜು, ನಂಜಣ್ಣ, ನಾಗೇಶ್ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
